
ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?
ಅಡಿಕೆಯ ಕಥೆ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ದರ ಕುಸಿಯುತ್ತಿದೆ. ಅಡಿಕೆ ಕೊಳ್ಳುವ ವರ್ತಕರಿಗೆ ಅಡಿಕೆ ತರುವವರನ್ನು ನೋಡಿದರೆ ಸಿಟ್ಟು ಬರುವಂತ ಸ್ಥಿತಿ. ಎಲ್ಲರಲ್ಲೂ ಅಷ್ಟೋ ಇಷ್ಟೋ ದಾಸ್ತಾನು ಇದೆ. ಮಾರಾಟ ಆಗದೆ ಖರೀದಿಗೆ ದುಡ್ಡಿಲ್ಲದ ಸ್ಥಿತಿ ಈ ಮಧ್ಯೆ ಬೆಳೆಗಾರರು ದುಂಬಾಲು ಬಿದ್ದು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಗೆ ತಾಳಿಕೊಳ್ಳಲಾಗದ ಸ್ಥಿತಿಯಲ್ಲಿ ಅಡಿಕೆ ಮಾರಾಟಕ್ಕೆ ಬಂದರೆ ದರ ಮತ್ತಷ್ಟು ಕುಸಿಯುತ್ತದೆ.ಇದು ಸತ್ಯ. ಈಗ ಇದೇ ಆಗಿರುವುದು. ಸತ್ಯವೋ ಸುಳ್ಳೋ ಒಟ್ಟಾರೆಯಾಗಿ ಹಳೆ ಚಾಲಿಯನ್ನು ಉತ್ತರ ಭಾತರದ ವ್ಯಾಪಾರಿಗಳು ಬೇಡ…