
ಭತ್ತದ ಬೆಳೆಯ ಮಹಾ ಶತ್ರು –ಬಂಬು ಕೀಟ ನಿಯಂತ್ರಣ
ಬಂಬು ಅಥವಾ ಗುಂಧೀ ಬಗ್ (Gundhi bug Leptocorisa oratorius Fabr) ಹೆಸರಿನ ಈ ಕೀಟ ಭತ್ತ ತೆನೆಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ ರಸ ಕುಡಿದು ಭಾರೀ ಬೆಳೆ ನಷ್ಟವನ್ನು ಉಂಟು ಮಾಡುತ್ತದೆ. ಇದನ್ನು ಯಾವ ಬೆಳೆಗಾರರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಂದರೆ ತಕ್ಷಣ ನಿಯಂತ್ರಣೋಪಾಯ ಕೈಗೊಳ್ಳಬೇಕು. ಯಾರಾದರೂ ರಾಸಾಯನಿಕ ಕೀಟನಾಶಕ ಬಳಸದೆ ಭತ್ತ ಬೆಳೆಯುತ್ತಾರೆಂದರೆ ಅವರ ಶ್ರಮವನ್ನು ಭಂಗ ಮಾಡುವ ಕೀಟ ಇದ್ದರೆ ಅದು ಬಂಬು….