ಬಾಳೆಗೆ 50% ಗೊಬ್ಬರ ಕಡಿಮೆ ಮಾಡಬಹುದಾದ ವಿಧಾನ.
ಬಾಳೆ ಬೆಳೆಗೆ ಅತ್ಯಧಿಕ ಪೋಷಕಾಂಶಗಳು ಬೇಕು. ಇದು ಕಡಿಮೆ ಸಮಯದಲ್ಲಿ ದಷ್ಟ ಪುಷ್ಟವಾಗಿ ಬೆಳೆಯುವ ಸಸ್ಯವಾದ ಕಾರಣ ಅಷ್ಟೇ ಪೋಷಕಗಳು ಬೇಕಾಗುತ್ತವೆ. ನಾವು ಕೊಡುವ ಎಲ್ಲಾ ಪೋಷಕಗಳೂ ಮೊದಲ ಬೆಳೆಗೇ ಬಳಕೆಯಾಗದೆ ಸ್ವಲ್ಪ ಬಾಳೆಯ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ಸದುಪಯೋಗಮಾಡಿಕೊಂಡರೆ ಮುಂದಿನ ಕೂಳೆ ಬೆಳೆ ಉತ್ತಮವಾಗಿರುತ್ತದೆ. ಕಂದುಗಳೂ ಆರೋಗ್ಯವಾಗಿರುತ್ತವೆ. ಎಲ್ಲಾ ಬೆಳೆಗಳೂ ತಮ್ಮ ಬೆಳೆವಣಿಗೆಗೆ ಬಳಕೆ ಮಾಡಿದ ಪೋಷಕಗಳನ್ನು ಪೂರ್ಣವಾಗಿ ಉಪಯೋಗಿಸಿಕೊಂಡಿರುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಅದು ಎಲೆಗಳಲ್ಲಿ ಉಳಿದಿರುತ್ತದೆ. ಅದು ಉದುರಿ ಬಿದ್ದಾಗ ಅದರ ಜೊತೆಗೆ…