ಬಾಳೆ ನೆಡುವಾಗ ಥಿಮೆಟ್ ಬದಲು ಇದನ್ನು ಹಾಕಿ.
ಬಾಳೆ ಬೆಳೆಯಲ್ಲಿ ಪ್ರಮುಖ ಸಮಸ್ಯೆಯಾದ ಕಾಂಡ – ಗಡ್ಡೆ ಕೊರಕ ಹುಳದ ನಿಯಂತ್ರಣಕ್ಕೆ ಫೋರೇಟ್ ಮುಂತಾದ ವಿಷದ ಬದಲು ಜೈವಿಕ ಪರಿಹಾರ ಸುರಕ್ಷಿತ. ಬಾಳೆ ಗೊನೆ ಹಾಕುವ ಸಮಯದಲ್ಲಿ ಅದಕ್ಕೆ ದಿಂಡು ಹುಟ್ಟಿಕೊಳ್ಳುತ್ತದೆ. ದಿಂಡು ಬರುವ ತನಕ ಬಾಳೆಗೆ ಅಂತಹ ಕೀಟ ಸಮಸ್ಯೆ ಇಲ್ಲ. ಯಾವಾಗ ಗೊನೆ ಹಾಕುತ್ತದೆಯೋ ಆಗ ಮುನ್ಸೂಚನೆ ಇಲ್ಲದೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುತ್ತದೆ. ಈ ಕಾಂಡ ಕೊರಕ ಹುಳ ಬಾಧೆ ಇಲ್ಲದ ಬಾಳೆ ತಳಿಗಳೇ ಇಲ್ಲ. ಇದಕ್ಕೆ ಎಲ್ಲರೂ ವಿಷ…