ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.
ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು…