ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.

ಅಡಿಕೆ ಗರಿ ತಿನ್ನುವ ಹುಳದ ವಾಸಸ್ಥಾನ

ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ  ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ  ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ.

  • ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ.
  • ಗರಿ ಎಂಬುದು ಮರಕ್ಕೆ ಆಹಾರ  ಮತ್ತು ಉಸಿರಾಟಕ್ಕೆ ಅಗತ್ಯವಾದ ಅಂಗ.
  • ಇದಕ್ಕೆ ಆಗುವ ಹಾನಿ ಇಳುವರಿಯನ್ನು ಕಡಿಮೆ ಮಾಡುತ್ತದೆ. ಮರದ ಆರೋಗ್ಯವನ್ನೂ ಹಾಳು ಮಾಡುತ್ತದೆ.

ಹರಿತ್ತು ತಿನ್ನುವ ಹುಳ ಹಾನಿ ಮಾಡಿದ ಸುಳಿ.

ಹಾನಿ ಹೀಗೆ ಇರುತ್ತದೆ: 

  • ಎಲೆ ತಿನ್ನುವ ಹುಳ (Leaf eating caterpillar(Opisina arenosella) ಎಳೆಯ ಗರಿಗಳನ್ನು ರಸ ಹೀರಿ ಒಣಗುವಂತೆ ಮಾಡುತ್ತದೆ.
  • ಎಳೆ ಭಾಗದ ಎಲೆ ಮುಗಿದಾಗ ಕೆಳ ಭಾಗದ ಎಲೆಗಳಿಗೂ ಹಾನಿಯನ್ನು ಉಂಟು ಮಾಡುತ್ತದೆ.
  • ಇದರಿಂದ ಗರಿಗಳು ಒಣಗಿದಂತೆ ಕಂಡು ಬಂದು ಮರ ಆರೋಗ್ಯವನ್ನು ಕಳೆದು ಕೊಳ್ಳುತ್ತದೆ.
  • ಸುಳಿ ಭಾಗ ನೇರವಾಗಿರದೆ ಅಡ್ದ ಬೀಳುತ್ತದೆ. ಅಂತಹ ಗರಿಗಳನ್ನು ತೆಗೆದು ಸೂಕ್ಷ್ಮ ವಾಗಿ ಗಮನಿಸಿದರೆ ಅದರಲ್ಲಿ ಕಾಫೀ  ಬಣ್ಣದ ಹುಳವು ಇರುತ್ತದೆ.
  • ಗರಿಯ ಕೆಳ ಭಾಗದಲ್ಲಿ ಹುಳಗಳ ಪ್ಯೂಪೆಗಳು ನೇತಾಡುತ್ತಿರುವುದು ಕಂಡು ಬರುತ್ತದೆ.
ಹರಿತ್ತು ತಿನ್ನುವ ಹುಳ ಹಾನಿ ಮಾಡಿದ ಗರಿ.
ಹರಿತ್ತು ತಿನ್ನುವ ಹುಳ ಹಾನಿ ಮಾಡಿದ ಗರಿ.
  • ಗರಿಯ ಬಹುತೇಕ ಭಾಗ ಒಣಗಿ ಕಡ್ಡಿ ಮಾತ್ರ ಇರುತ್ತದೆ. ಈ ಹುಳವು  ಪ್ರಾರಂಭದಲ್ಲಿ ಎಲೆ ಗರಿಯ ರಸವನ್ನು ಹೀರಿ ತೂತು ತೂತು ಮಾಡುತ್ತದೆ.
  • ಹರಿತ್ತು ಇದರ ಆಹಾರ.  ಇದರ ಕಾರಣದಿಂದ ಮರದ ಸುಳಿ ಭಾಗದ ಗರಿ ಮುರುಟಿಕೊಳ್ಳುತ್ತದೆ.
  • ಕೆಲವೊಮ್ಮೆ ಮರಗಳು ಸಾಯಲೂ ಬಹುದು. ಸುಳಿ ಅಲ್ಲಿಗೆ ಬೆಳೆವಣಿಗೆ ನಿಲ್ಲುವುದೂ ಉಂಟು.
  • ಈ ಹುಳ ಮೇಲು ನೋಟಕ್ಕೆ ನೋಡುವಾಗ ಸಿಂಗಾರ ತಿನ್ನುವ ಹುಳದಂತೆ ಇರುತ್ತದೆ. ಅದೇ ರೀತಿಯಲ್ಲಿ ಮೈಯಲ್ಲಿ ಮೇಣವನ್ನೂ ಸ್ರವಿಸಿ ಬಲೆ ಹೆಣೆಯುತ್ತದೆ.
ಹುಳದ ಪ್ಯೂಪೆ
ಹುಳದ ಪ್ಯೂಪೆ
  • ಸಿಂಗಾರ ತಿನ್ನುಗ ಹುಳವೇ ಗರಿಯನ್ನೂ ತಿನ್ನುತ್ತದೆ ಎಂಬ ಬಗ್ಗೆ ಯಾವ ಸಂಶೋಧನಾ ಲೇಖನಗಳೂ ಕಂಡು ಬರುವುದಿಲ್ಲ.
  • ಇದನ್ನು ಕೆಲವು ಸಂಶೊಧನೆಗಳು ಬ್ಯಾಗ್  ವರ್ಮ್ Bagworm Moth, Mahasena corbetti Tams (Lepidoptera: Psychidae) ಎಂದು ಹೆಸರಿಸಿದ್ದುಂಟು.
ಹುಳದ ಲಾರ್ವೆ
ಹುಳದ ಲಾರ್ವೆ
  • ಇದು ಹೆಚ್ಚಾಗಿ ಜೂನ್ ತಿಂಗಳಿನಿಂದ ಅಕ್ಟೋಬರ್  ನವೆಂಬರ್ ತನಕ ಕಂಡು ಬರುತ್ತದೆ.
  • ಒಂದು ಜಾತಿಯ ಪತಂಗವು ಎಲೆಯಲ್ಲಿ ಮೊಟ್ಟೆ ಇಡುತ್ತದೆ.
  • ಹುಳು ಬೆಳೆದು  ಲಾರ್ವೆ Full grown larva (without case) was about 15–20 mm long,  ಹಂತದಲ್ಲಿ ಹರಿತ್ತನ್ನು ತಿನ್ನುತ್ತದೆ,
  • ಕೆಲವೊಮ್ಮೆ ಅಡಿಕೆಯ ಕಾಯಿಗಳ ಮೇಲೆಯೂ ಹಸುರು ಭಾಗವನ್ನು ತಿನ್ನುವುದುಂಟು.
  • ಅಲ್ಲೇ ಅದರ  ಪ್ಯೂಪೆ The female pupae were larger than male in size (20–23 mm length) and dark brown in colour and found inside the cases ಹಂತ ಮುಗಿಸಿ ಮತ್ತೆ ಪತಂಗವಾಗುತ್ತದೆ.
  • ಪ್ಯೂಪೆ ಹಂತದಲ್ಲಿ ಗರಿಯ ಅಡಿ ಭಾಗದಲ್ಲಿ ತಲೆ ಕೆಳಗಾಗಿ ನೇತಾಡುತ್ತಿರುತ್ತದೆ.  female’s bag, hung upside down  ಅಲ್ಲಿಯೇ  ಅದರ ಸಂತಾನಾಭಿವೃದ್ದಿಯಾಗುತ್ತದೆ.

ನಿಯಂತ್ರಣ ವಿಧಾನ:

  • ಇದನ್ನು ಯಾವುದಾದರೂ ಹುಳ ನಿಯಂತ್ರಕ ಕೀಟನಾಶಕವನ್ನು ಸಿಂಪಡಿಸಿ ನಿಯಂತ್ರಣ ಮಾಡಬಹುದು( ಕ್ಲೋರೋಫೆರಿಫೋಸ್ ಅಥವಾ ಕ್ವಿನಾಲ್ ಫೋಸ್).
  • ಇದರಿಂದ ಈ ಹುಳದ ಪರಭಕ್ಷಕ ಕೀಟಗಳು ನಶಿಸುವ ಸಾಧ್ಯತೆ ಇದೆ.
  • ಇದಕ್ಕೆ ಬೆಳೆಕಿನ ಟ್ರಾಪುಗಳು ಕೆಲಸ ಮಾಡಬಹುದು. ಈ ಪತಂಗಗಳು ಈಟ್ರಾಪಿಗೆ ಬಿದ್ದು ಸಂತತಿ ಕಡಿಮೆಯಾಗಬಹುದು.
  • ಅಡಿಕೆ ತೋಟಗಳಲ್ಲಿ ಸಾಧ್ಯವಾದಷ್ಟು ಹಕ್ಕಿಗಳು ಬರುವಂತೆ ಆಕರ್ಷಣೆ  ಮಾಡಬೇಕು.
  • ವಿಶೇಷವಾಗಿ ಕಾಗೆ, ಬಾರದ್ವಾಜ ಪಕ್ಷಿಗಳು ಈ ಹುಳು ಮತ್ತು ಪ್ಯೂಪದಲ್ಲಿರುವ ಹುಳುಗಳನ್ನು ಭಕ್ಷಿಸುತ್ತದೆ.
  • ಇದು ತೆಂಗಿನ ಮರದ ಗರಿಗೂ ತೊಂದರೆ ಮಾಡುವ ಸಾಧ್ಯತೆ ಇದೆ.
  • ಇದು ಹೊಲದಿಂದ ಹೊಲಕ್ಕೆ ಪ್ರಸಾರವಾಗುತ್ತದೆ. ಒಂದು ವೇಳೆ ಪರಭಕ್ಷಕಗಳ ಪ್ರಾಭಲ್ಯ ಹೆಚ್ಚಾದರೆ ಇದು ತನ್ನಿಂದ ತಾನೇ ನಿಯಂತ್ರಣಕ್ಕೆ ಒಳಗಾಗಬಹುದು.
  • ಸಮೀಪದ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಇದಕ್ಕೆ ಪರತಂತ್ರ ಜೀವಿಗಳನ್ನು ಒದಗಿಸುವಂತೆ ಮನವಿ ಮಾಡಿಕೊಳ್ಳಿ.
ಸುಳಿ ಭಾಗದ ಎಳೆ ಎಲೆಯನ್ನು ಹೀಗೆ ತಿನ್ನುತ್ತದೆ
ಸುಳಿ ಭಾಗದ ಎಳೆ ಎಲೆಯನ್ನು ಹೀಗೆ ತಿನ್ನುತ್ತದೆ
  • ಬೇವು- ಹೊಂಗೆ ಮೂಲದ ಕೀಟನಾಶಕ ಅಥವಾ  ವೆರ್ಟಿಸೀಲಿಯಂ Verticillium lecanii (sucking insects especially aphids, thrips, soft bodied scale insects white flies, mealy bugs and mites.) ಅಥವಾ ಬ್ಯೆಸಿಲಸ್ ತುರೆಂಜೆನ್ಸಿಸ್ Bacillus thuringiensis (Bt) Bacillus thuringiensis kurstaki (Btk) is the best known and most widely used strain of Bt. It kills the larvae of many types of moths and butterflies. This means that you can control most caterpillars with Btk.
  • ಜೈವಿಕ ಕೀಟ ನಾಶಕಗಳನ್ನು ಸಿಂಪಡಿಸಿ  ಹತೋಟಿ ಮಾಡಲು ಸಾಧ್ಯ.
  • ಈ ಜೈವಿಕ ಕೀಟನಾಶಕಗಳನ್ನು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ  ಸೂಕ್ಷ್ಮಾಣು ಜೀವಿ ಶಾಸ್ರ ವಿಭಾಗದಲ್ಲಿ ತಯಾರಿಸುತ್ತಾರೆ.
  • ಅಲ್ಲದೆ ಹೆಬ್ಬಾಳದ ಗಂಗಾನಗರದ ಬಯೋ ಕಂಟ್ರೋಲ್ ಲ್ಯಾಬೋರೇಟರಿಯಲ್ಲೂ ತಯಾರಿಸುತ್ತಾರೆ.

ಸಾಧ್ಯವಾದಷ್ಟು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ.ಜೈವಿಕ ಕೀಟ ನಿಯಂತ್ರಣ ವಿಧಾನ ಸುರಕ್ಷಿತ. ನೆಲಕ್ಕೆ ಬಿದ್ದ ಹುಳುಗಳನ್ನು ನಾಶ ಮಾಡಲು ಬಾತುಕೊಳಿಗಳನ್ನು ಹೊಲದಲ್ಲಿ ಬಿಡುವುದು ಉತ್ತಮ. ಇದರ ಹುಳಗಳು ಸಾಕಷ್ಟು ಪ್ರಮಾಣದಲ್ಲಿ ನೆಲಕ್ಕೆ ಬೀಳುತ್ತವೆ.

end of the article:——————————————————-
search words: leaf eating caterpillar# arecanut crop# arecanut pest# leaf pest of arecanut# bag worm# black headed  caterpillar # bio control of leaf pest# arecanut cultivation# areca garden management#

Leave a Reply

Your email address will not be published. Required fields are marked *

error: Content is protected !!