ತೆಂಗು ಬೆಳೆಸುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ.

ತೆಂಗಿನ ನೈಸರ್ಗಿಕ ಹೈಬ್ರೀಡ್ ತಳಿ

ಜಗತ್ತಿನ ಸುಮಾರು 80 ಕ್ಕೂ ಹೆಚ್ಚಿನ ದೇಶಗಳಲ್ಲಿ  ಬೆಳೆಸಲ್ಪಡುತ್ತಿರುವ  ತೆಂಗಿಗೆ ಬೆಳೆಯಲ್ಲದೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಈಗಿನವರೆಗೂ ಜನ ತೆಂಗನ್ನು ನಂಬಿದ್ದಾರೆ. ನಂಬಿಕೆಗೆ ಯಾವಾಗಲೂ ಕುಂದು ತಾರದ ಬೆಳೆ ಎಂದರೆ ತೆಂಗು ಎನ್ನಬಹುದು.

ತೆಂಗಿನ ಮೂಲ  ಯಾವುದು:

  • ಕೆಲವು ಪ್ರಕೃತಿಯ ನಿಘೂಢಗಳಲ್ಲಿ ತೆಂಗೂ ಒಂದು. ಇದು ಮೂಲತಹ ಎಲ್ಲಿ ಬೆಳೆಯುತ್ತಿತ್ತು, ಹೇಗೆ ಇದು ಬೆಳೆಯ ಸ್ಥಾನವನ್ನು ಪಡೆಯಿತು ಎಂಬ ಬಗ್ಗೆ ನಿಖರ ಉಲ್ಲೇಖ ಇಂದಿನ ತನಕವೂ ಇಲ್ಲ.
  • ಭಾರತ ದೇಶದಲ್ಲಿ ವೇದಗಳ ಕಾಲದಿಂದಲೂ ತೆಂಗು ಇತ್ತು ಎಂಬುದಕ್ಕೆ ಉಲ್ಲೇಖ ವೇದ ಮಂತ್ರಗಳಲ್ಲಿ ಇದೆ.
  •   ಮೂಲದ ಬಗ್ಗೆ ಮೂರು ಊಹನೆಗಳಿವೆ. ಒಂದು ಅಮೆರಿಕಾ ದೇಶದಲ್ಲಿ  ಕೊಕೊಸ್( Cocos)  ಎಂಬ ತಳಿ ಮೂಲದಿಂದ ಇದು ಪರಿವರ್ತನೆಯಾಗಿ  ಉಂಟಾಗಿದೆ ಎನ್ನಲಾಗುತ್ತದೆ.
  • ಕೊಕೋಸ್ ಇದರಲ್ಲಿ ಸುಮಾರು 30 ಕ್ಕೂ ಹೆಚ್ಚಿನ ಪ್ರವರ್ಗಗಳಿವೆ. ಇನ್ನೊಂದು  ಮಧ್ಯ ಅಮೆರಿಕಾದಲ್ಲಿ ಇದರ ಮೂಲ ಇತ್ತು, ಅಲ್ಲಿಂದ ಅದು ಪ್ರಸಾರವಾಯಿತು ಎಂದಿದೆ.
  • ಮೂರನೇ ಊಹನೆ  ದಕ್ಷಿಣ ಏಶಿಯಾದ ಅಥವಾ  ಮಲೇಶಿಯಾ ಅಥವಾ ಫೆಸಿಫಿಕ್ ವಲಯದಿಂದ ಇದು ಅಚಾನಕ್ ಆಗಿ ಸಮುದ್ರದ ಮೂಲಕ ಅಮೆರಿಕಾದ ಕರಾವಳಿಗೆ ತಲುಪಿತು ಎಂದು ಊಹಿಸಲಾಗುತ್ತಿದೆ.
  • ಇದೆಲ್ಲವೂ ಊಹನೆಯೇ ಹೊರತು ನಿಖರತೆ ಅಲ್ಲ. ಇದರ ಮೂಲ ತಳಿಯನ್ನು ಯಾರೂ ಗುರುತಿಸಿದವರಿಲ್ಲ.
  • ಆದ ಕಾರಣ ತೆಂಗು ಒಂದು ಪ್ರಕೃತಿಯ ನಿಘೂಡ ಸೃಷ್ಟಿ ಎಂದು ಹೇಳಿದರೂ ತಪ್ಪಾಗಲಾರದು.

ತೆಂಗಿನ ಮರಗಳ ಸೌಂದರ್ಯಕ್ಕೆ ಸರಿ ಸಾಟಿ ಇನ್ನೊಂದಿಲ್ಲ.

Cocos ಎಂಬುದು ಪೋರ್ಚುಗೀಸ್ ಭಾಷೆಯಲ್ಲಿ Macaco.ಅಂದರೆ ಕಾಯಿಯ ನೋಟ ಮಂಗನ ಮುಸುಡಿನಂತೆ ಇರುತ್ತದೆ. ಕಾಯಿಯ ಒಳಗಿನ ಮೂರು ಕಣ್ಣುಗಲ್ಲಿ ಎರಡು ಕಣ್ಣಿನಂತೆಯೂ ಮೊಳಕೆ ಬರುವ ಕಣ್ಣು ಮೂಗಿನಂತೆಯೂ ಇದೆ ಎಂದು ಹೀಗೆ ಕರೆಯಲಾಗಿದೆ. ಭಾರತದಲ್ಲಿ ಇದರ ಹೆಸರು ನಾರಿಕೇಳ ಫಲ.

  • ಪ್ರಪಂಚದಾದ್ಯಂತ ಸುಮಾರು 10 ಮಿಲಿಯಕ್ಕೂ ಹೆಚ್ಚಿನ ಜನ ಜೀವನೋಪಾಯಕ್ಕೆ ತೆಂಗು ಬೆಳೆಯನ್ನು ಆಶ್ರಯಿಸಿದ್ದಾರೆ.

ತೆಂಗಿನ ಮರದ ಬಗ್ಗೆ :

  • ತೆಂಗಿನ ಮರ ಒಂದು  ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ.
  • ಭದ್ರವಾದ ಕವಲು ಬೇರುಗಳ ಮೂಲಕ ದೈತ್ಯ ಗಾತ್ರದ ಮರವನ್ನೂ ಆಧರಿಸುವ ಅಸಾಮಾನ್ಯ ಶಕ್ತಿ ಈ ತೆಂಗಿನ ಮರಕ್ಕೆ ಇದೆ.
  • ಇದು ಎತ್ತ ವಾಲಿದ್ದರೂ ಬೀಳುವುದಿಲ್ಲ. ಮುರಿಯುವುದಿಲ್ಲ. ಇದಕ್ಕೆ ಒಂದೇ ಒಂದು ಮೊಳಕೆ (Singal Bud) ಇರುತ್ತದೆ.
ತೆಂಗಿನ ಮರ ಎಷ್ಟೇ ಎತ್ತರ ಬೆಳೆದರೂ ಸಧೃಢ.
ತೆಂಗಿನ ಮರ ಎಷ್ಟೇ ಎತ್ತರ ಬೆಳೆದರೂ ಸಧೃಢ.

ತೆಂಗಿನಲ್ಲಿ ಎಲೆ:

  • ಒಂದು ತೆಂಗಿನ ಮರದಲ್ಲಿ 30-40 ಎಲೆಗಳು ಇರುತ್ತವೆ. ಎಲೆಯಲ್ಲಿ 200  ಕ್ಕೂ  ಹೆಚ್ಚು ಎಲೆಗಳು ಇರುತ್ತವೆ.
  • ಎಲೆಯ ಉದ್ದ ಸುಮಾರು 1.1.5 ಮೀಟರು ಉದ್ದ ಇರುತ್ತದೆ.
  • ಗರಿಯ ಆಯುಸ್ಸು 2.5-3 ವರ್ಷಗಳಷ್ಟು. ಪ್ರತೀ ಗರಿಯೂ ಕಾಂಡಕ್ಕೆ ಸುತ್ತುವರಿದು ಎಲ್ಲಾ ದಿಕ್ಕುಗಳಿಂದಲೂ ಮೂಡುತ್ತದೆ.

ತೆಂಗಿನ ಮರದ ಕಾಂಡ:

  • ತೆಂಗಿನ ಸಸಿ ನೆಲದಿಂದ ಕಾಂಡ  ಬಿಡುವಾಗ ( 12-18 ಎಲೆ ಬಿಟ್ಟ ತರುವಾಯ) ಬೊಡ್ಡೆಯಂತೆ ಬುಡ ದಪ್ಪವಾಗಿರುತ್ತದೆ.
  • ನಂತರ ಎಲೆಗಳು ಉದುರಿದಂತೇ ಅದು ಕಾಂಡದ ರೂಪ ಪಡೆಯುತ್ತದೆ.
  • ಪ್ರಾರಂಭದ ಕೆಲವು ವರ್ಷಗಳಲ್ಲಿ ಮರದ ಕಾಂಡದ ಬೆಳೆವಣಿಗೆ  ವೇಗವಾಗಿ ಕಾಣುತ್ತದೆ.
  • ಇದು ಮತ್ತೇನೂ ಅಲ್ಲ. ಗರಿಗಳ ಮಧ್ಯಂತರ  ಹೆಚ್ಚು ಇರುತ್ತದೆ.
  • ನಂತರ ಮರದ ಶಿರಕ್ಕೆ ರೂಪ ( ಛತ್ರಿಯಾಕಾರ) ಬಂದ ನಂತರ ಅದರ  ಬೆಳವಣಿಗೆ ನಿಧಾನವಾಗುತ್ತದೆ.
  • ಇತರ ಮರಮಟ್ಟುಗಳಂತೆ ಕಾಂಡದಲ್ಲಿ ಮೊಳಕೆಗಳು ಇರುವುದಿಲ್ಲ.
  • ಒಂದೇ ಒಂದು ಮೊಳಕೆ ಇದ್ದು, ಇದನ್ನು (Terminal Bud) ಎಂದು ಕರೆಯುತ್ತಾರೆ.
  • The palm has only one terminal bud, with no cambium layer and hence any injury to the trunk can’t be made good by the growth of new tissues.
  • ಕಾಂಡದ ಯಾವ ಭಾಗಕ್ಕೆ ಗಾಯ ಆದರೂ ಅದು ಮತ್ತೆ ಕೂಡಿಕೊಳ್ಳದೆ ಗಾಯವಾಗಿಯೇ ಉಳಿಯುತ್ತದೆ.
  • ಕಾಂಡದಲ್ಲಿ ಬೇರುಗಳ ಹುಟ್ಟು ನಡೆಯುತ್ತದೆ. ಗಾಯ ಆದ ಜಾಗದಲ್ಲಿ ಅನುಕೂಲ ಇದ್ದಲ್ಲಿ ಬೇರು ಮೂಡುವುದು ಉಂಟು.
ತೆಂಗಿನ ಮರದ ಕಾಂಡ ಹೀಗೆ ಇರುತ್ತದೆ. ಇದರಲ್ಲಿರುವ ಒಂದು ಕಡ್ಡಿ ತುಂಡಾದರೂ ಅದು ಮತ್ತೆ ಜೋಡಣೆ ಆಗುವುದಿಲ್ಲ.
ತೆಂಗಿನ ಮರದ ಕಾಂಡ ಹೀಗೆ ಇರುತ್ತದೆ. ಇದರಲ್ಲಿರುವ ಒಂದು ಕಡ್ಡಿ ತುಂಡಾದರೂ ಅದು ಮತ್ತೆ ಜೋಡಣೆ ಆಗುವುದಿಲ್ಲ.

ತೆಂಗಿನ ಮರದ ಬೇರುಗಳು:

ತೆಂಗಿನ ಮರದ ಬಲೆಯೋಪಾದಿಯ ಬೇರು ವ್ಯೂಹ
ತೆಂಗಿನ ಮರದ ಬಲೆಯೋಪಾದಿಯ ಬೇರು ವ್ಯೂಹ
  • ತೆಂಗಿಗೆ ತಾಯಿ ಬೇರು ಇಲ್ಲ. ಎಲ್ಲವೂ ಕವಲು ಬೇರುಗಳು. ಮಣ್ಣಿನ ಅನುಕೂಲ ಸ್ಥಿತಿಗನುಗುಣವಾಗಿ ಒಂದು ಮರಕ್ಕೆ 1500-8000 ಸಂಖ್ಯೆಯ ಬೇರುಗಳು ಇರುತ್ತವೆ.
  • ಬೇರಿನ ತುದಿ ತುಂಡಾದರೆ ಅಲ್ಲಿಗೆ ಅದರ ಬೆಳವಣಿಗೆ ನಿಲ್ಲುತ್ತದೆ.
  • ಅದರ ಹಿಂದಿನ ಕವಲು ಬೇರುಗಳು ಬೆಳವಣಿಗೆಯಾಗುತ್ತಾ ಇರುತ್ತವೆ.
  • ಬೇರುಗಳು ಮೇಲೆ ಮೇಲೆಯೇ ಬರುವ ಗುಣ ಹೊಂದಿದ್ದು, ತೇವಾಂಶ ಮತ್ತು ಸಡಿಲತೆಯನ್ನು ಅವಲಂಭಿಸಿ.
  • ವಿಶಾಲ ಪ್ರದೇಶದ (5-7  ಮೀ. ತನಕ) ಹರಡುತ್ತದೆ.
  • ಆಹಾರ ಸಂಗ್ರಹಿಸಿಕೊಡುವ ಬೇರುಗಳು ಹೆಚ್ಚಾಗಿ 1-3 ಅಡಿ ಆಳದ  ತನಕ ಮಾತ್ರ ಇರುತ್ತದೆ.

ಹೂ ಗೊಂಚಲು:

ತೆಂಗಿನ ಹೂ ಗೊಂಚಲು
ತೆಂಗಿನ ಹೂ ಗೊಂಚಲು
  • ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ 3-4 ವರ್ಷದಲ್ಲಿ ಹೂ ಗೊಂಚಲು ಬಿಡುತ್ತದೆ.
  • ಪ್ರತೀ ಎಲೆ ಕಂಕುಳಲ್ಲೂ ಹೂ ಗೊಂಚಲು ಇರುತ್ತದೆ. ವರ್ಷಕ್ಕೆ ಸುಮಾರು 12 ಹೂ ಗೊಂಚಲು ಬಿಡುತ್ತದೆ.
  • ಮರದ ಆರೋಗ್ಯ, ಮತ್ತು ಪಾಲನೆಯ ಮೇಲೆ ಹೂ ಗೊಂಚಲಿನ ಉದ್ದ ಮತ್ತು ದಪ್ಪ ನಿರ್ಧಾರವಾಗುತ್ತದೆ.
  • ಹೂ ಗೊಂಚಲಿನಲ್ಲಿ ಗಂಡು ಮತ್ತು ಹೆಣ್ಣು ಹೂವುಗಳಿದ್ದ್ದು, ಗಂಡು ಹೂ ಗೊಂಚಲು ಅರಳಿದಾಕ್ಷಣ  ಉದುರಲಾರಂಭಿಸುತ್ತದೆ.
  • ಹೆಣ್ಣು ಸುಮಾರು 21-26 ದಿನಕ್ಕೆ ಪರಾಗ ಸ್ವೀಕರಿಸಲು ಸಿದ್ದವಾಗುತ್ತದೆ.
  • ಆಗ ಅದಕ್ಕೆ ಕೀಟಗಳ ( ಜೇನು ನೊಣ, ದುಂಬಿ, ಕಂಚುಗಾರದುಂಬಿ ಇತ್ಯಾದಿಗಳು) ಮೂಲಕ ಪರಾಗ ದೊರೆತರೆ ಮಾತ್ರ ಕಾಯಿ ಕಚ್ಚುತ್ತದೆ.
  • ಗಿಡ್ದ ತಳಿಯಲ್ಲಿ ಈ ವ್ಯವಸ್ಥೆ ಸ್ವಲ್ಪ ವ್ಯತ್ಯಾಸವಾಗಿ ಗಂಡು ಹೆಣ್ಣು ಹೂವುಗಳು ಗಂಡು ಹೂವು ಇರುವಾಗಲೇ ಪರಾಗ ಸ್ವೀಕಾರಕ್ಕೆ ಸಿದ್ದವಾಗುವುದಿದೆ.
  • ತೆಂಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಪರಾಗಸ್ಪರ್ಶ ನಡೆಯುವುದು ಪ್ರಕೃತಿಯ ನಿಯಮ.

ತೆಂಗಿನ ಕಾಯಿ:

ತೆಂಗಿನ ಕಾಯಿ ತನ್ನ ಮೊಳಕೆಯನ್ನು  ಪೊಷಣೆ  ಮಾಡುವುದೇ ಒಂದು ವಿಸ್ಮಯ
ತೆಂಗಿನ ಕಾಯಿ ತನ್ನ ಮೊಳಕೆಯನ್ನು ಪೊಷಣೆ ಮಾಡುವುದೇ ಒಂದು ವಿಸ್ಮಯ
  • ಹೆಣ್ಣು ಹೂವು ಅಥವಾ  ಚೆಂಡಾಳೆಯ ಬುಡಭಾಗದಲ್ಲಿ ಸುಮಾರು ಆರು ಅಂತರದಲ್ಲಿ ಹೊದಿಕೆಗಳಿರುತ್ತವೆ.
  • ಪರಾಗಸ್ಪರ್ಶ ಆದ ತರುವಾಯ ಅದರ ಬೆಳವಣಿಗೆಯಾಗುವಾಗ ಅದು  ತೊಟ್ಟಾಗಿ ಮಾರ್ಪಡುತ್ತದೆ.
  • ಪರಾಗ ಸ್ಪರ್ಷ ಆದ ಮಿಡಿ ಬೆಳವಣಿಗೆಯಾಗುತ್ತಾ ಅದರಲ್ಲಿ ನೀರು ( ರಸ) ಸೇರಿಕೊಳ್ಳುತ್ತದೆ.
  • ಸುಮಾರು 6 ತಿಂಗಳು ಬೆಳವಣಿಗೆಯಾಗುವಾಗ ಅದರಲ್ಲಿ ಸ್ವಲ್ಪ ತಿರುಳು ಮತ್ತು ಗರಿಷ್ಟ ನೀರು ಸೇರಿಕೊಂಡು ಎಳನೀರಾಗುತ್ತದೆ.
  • ಮತ್ತೆ ಬೆಳೆದಂತೇ ತಿರುಳು (ಗಂಜಿ) ಕೂಡಿಕೊಂಡು ಬಲಿಯಲಾರಂಭಿಸಿ ನೀರು  ಕಡಿಮೆಯಾಗುತ್ತದೆ.
  • ಒಳಭಾಗದ ಅವಕಾಶದಲ್ಲಿ ನೀರು ಅಲ್ಲಾಡಲು ಪ್ರಾರಂಭವಾಗುತ್ತದೆ.
  • ಚೆಂಡಾಳೆ ಹಂತದಿಂದ ಕಾಯಿ ಬೆಳೆಯಲು 11-12 ತಿಂಗಳು ಕಾಲಾವಧಿ ಬೇಕಾಗುತ್ತದೆ.

ಸಸ್ಯಾಭಿವೃದ್ದಿ:

  • ತೆಂಗಿನ ಕಾಯಿಯ ಮೂರು ಕಣ್ಣುಗಳಲ್ಲಿ ಒಂದು ದೊಡ್ಡ ಕಣ್ಣು ಅದರ ಮೊಳಕೆ ಬರುವ ಜಾಗ .
  • ಇಲ್ಲಿ ಅಕ್ಕಿಯಂತಹ ಒಂದು ಭಾಗ ಇರುತ್ತದೆ.
  • ಇದುವೇ ತೆಂಗಿನ ಕಾಯಿಯ ಭ್ರೂಣ (Embryo). ಇದುವೇ ಮೊಳಕೆ ಒಡೆದು ಸಸಿಯಾಗುವ ಜೀವಕೋಶವಾಗಿದೆ.

ರೋಗಗಳು- ಕೀಟಗಳು:

ತೆಂಗಿಗೆ ಹೆಚ್ಚಾಗಿ ಬಾಧಿತವಾಗುವ ರೋಗ ಶಿರ ಕೊಳೆ. ಕೆಲವು ಕಡೆ ಸೊರಗು ರೋಗ ಇದ್ದು, ಇವೆರಡನ್ನೂ ಸರಿಯಾದ ಮುನ್ನೆಚ್ಚರಿಕೆ ಮತ್ತು ನಿರ್ವಹಣೆಯಿಂದ ತಡೆಯಲು ಸಾಧ್ಯ.

  • ಕೀಟಗಳಲ್ಲಿ ಮುಖ್ಯವಾಗಿ ಕೆಂಪು ಮೂತಿ ಹುಳ, ಕುರುವಾಯಿ ಕೀಟಗಳು ಮುಖ್ಯವಾದವುಗಳು.
  • ಇವುಗಳನ್ನೂ  ಮುಂಜಾಗ್ರತಾ ಕ್ರಮದಿಂದ ನಿವಾರಿಸಲು ಸಾಧ್ಯ.
  • ಕೆಂಪು ಮೂತಿ ದುಂಬಿ ಮಾತ್ರ ಸ್ವಲ್ಪ ತೀವ್ರ ತರವಾದ ಕೀಟವಾಗಿದೆ.
  • ಎಲೆಗಳಿಗೆ ಭಾಧಿಸುವ ಕೀಟಗಳಿಂದ ಅಂತಹ ದೊಡ್ಡ ಹಾನಿ ಇರುವುದಿಲ್ಲ

ತಳಿಗಳು:

ಎಳನೀರಿಗೆ ಅತ್ಯಂತ ಆಪ್ಯಾಮಾನವಾದ ಕುಬ್ಜ ತಳಿ
ಎಳನೀರಿಗೆ ಅತ್ಯಂತ ಆಪ್ಯಾಮಾನವಾದ ಕುಬ್ಜ ತಳಿ
  • ತೆಂಗಿನಲ್ಲಿ ಎತ್ತರದ ತಳಿ ಮತ್ತು ಕುಬ್ಜ ತಳಿಗಳು ಎಂಬ ಎರಡು ವಿಧ.
  • ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಚೌಘಾಟ್ ಆರೆಂಜ್ ದ್ವ್ರಾರ್ಫ್ ಮತ್ತು ಚೌಘಾಟ್ ಗ್ರೀನ್ ಡ್ವಾರ್ಫ್ ಎಂಬ ಗಿಡ್ದ ತಳಿಗಳು ನಮ್ಮ ದೇಶದಲ್ಲಿ ಕಂಡು ಬಂದಿದ್ದರೆ,
  • ಮಲೇಶಿಯಾದಲ್ಲಿ ಮಲಯನ್ ಯಲ್ಲೋ ಡ್ವಾರ್ಫ್ ಎಂಬ ಎಂಬ ಗಿಡ್ದ ತಳಿ ಕಂಡು ಬಂದಿದೆ.
  • ಉಳಿದಂತೆ ನಮ್ಮಲ್ಲಿ ಇರುವ ಬಹುತೇಕ ತಳಿಗಳು ಎತ್ತರದ ತಳಿಗಳು.
  • ಕೋಟ್ಯಾಂತರ ವರ್ಷಗಳಿಂದ ನೈಸರ್ಗಿಕ ಕೃತಕ ಪರಾಗಸ್ಪರ್ಶದ ಫಲವಾಗಿ ಸಾಕಷ್ಟು ನೈಸರ್ಗಿಕ ಹೈಬ್ರೀಡ್ ಗಳು, ಹಾಗೆಯೇ ಬಂಜೆ ತಳಿಗಳೂ ಉತ್ಪಾದೆನೆಯಾಗಿವೆ.
ಭೂಮಿಯ ಮೇಲೆ ಅಮೃತ ಸಮಾನವಾದ ನೀರು ಕೊಡುವ ಎಳನೀರು
ಭೂಮಿಯ ಮೇಲೆ ಅಮೃತ ಸಮಾನವಾದ ನೀರು ಕೊಡುವ ಎಳನೀರು
  • ಎತ್ತರ ಮಧ್ಯಮ ಎತ್ತರ ಮುಂತಾದ ತಳಿಗಳು ಪ್ರಾಕೃತಿಕವಾಗಿಯೇ ಆಗಿದೆ.
  • ಕುಬ್ಜ ತಳಿಗಳೂ ಎತ್ತರದ ತಳಿಗಳಾದದ್ದೂ ಇದೆ.
  • ತಳಿ ವಿಜ್ಞಾನವು ಕೃತಕ ಪರಾಗಸ್ಪರ್ಶದ ಮೂಲಕ ಇಳುವರಿ ನಿಖರತೆ ಉಳ್ಳ ಹೈಬ್ರೀಡ್ ತಳಿಯನ್ನೂ ಉತ್ಪಾದಿಸಿವೆ.
  • ತೆಂಗಿನಲ್ಲಿ ನೂರಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಅದರ ಮೌಲ್ಯ ಹೆಚ್ಚಿಸಲಗಿದೆ.
  • ಎಳನೀರು ಎಂಬ ಆರೋಗ್ಯಕರ ಪೇಯ ತೆಂಗಿನ ಮಾರುಕಟ್ಟೆಯನ್ನು ಉಜ್ವಲಗೊಳಿಸಿದೆ.

ತೆಂಗು  ಬೆಳೆ ನಮ್ಮನ್ನು ಸಾಕುವ ಬೆಳೆ ಎಂದರೆ ಅತಿಶಯೋಕ್ತಿಯಲ್ಲ. ಒಂದು ತೆಂಗಿನ ಮರದ ಉತ್ಪಾದಕತೆ ಕಾಯಿಯಲ್ಲಿ ವಾರ್ಷಿಕ 1000 ರೂ. ಗಳಿಗಿಂತ ಹೆಚ್ಚು.ಅದಕ್ಕೆ ಮೆಣಸು ಬಿಟ್ಟರೆ ಮತ್ತೆ ಅದರಲ್ಲಿ 1000 ರೂ. ಸೇರಲ್ಪಡುತ್ತದೆ. ಇನ್ನು ಮಧ್ಯಂತರದಲ್ಲಿ ಬೇರೆ ಬೆಳೆಗಳನ್ನು ಬೆಳೆಸಿದರೆ ಮತ್ತೆ 1000 ರೂ ತನಕ ಹೆಚ್ಚು ಆದಾಯ ಗಳಿಸಬಹುದು. ಅದರಿಂದ ದೊರೆಯುವ ಇತರ ಅನುಕೂಲಗಳನ್ನು ( ಉರುವಲು, ಸಾವಯವ ಅಂಶ) ಲೆಕ್ಕಾಚಾರ ಹಾಕಿದರೆ ತೆಂಗಿನ ಬೆಳೆಯನ್ನು ಸಾಕುವುದು ಸುಲಭ.
End of the article:
search words: coconut# coconut pant# coconut seeds# coconut future# coconut hybrids# Coconut tree information#

Leave a Reply

Your email address will not be published. Required fields are marked *

error: Content is protected !!