ಇಂದಿನಿಂದ 4 ದಿನ  ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ. 

ಇಂದಿನಿಂದ 4 ದಿನ ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ.

ಬೆಂಗಳೂರಿಗೆ ಕೃಷಿಕರು ಹೋಗಬೇಕಿದ್ದರೆ ಅಲ್ಲಿ ಅವರ ಆಕರ್ಷಣೆಯ ವಿಷಯ ವಸ್ತು ಇರಬೇಕು. ಇಲ್ಲಿನ ಕೃಷಿ ವಿಶ್ವ ವಿಧ್ಯಾನಿಲಯವು ಕೃಷಿ ಮೇಳದ ಮೂಲಕ ರಾಜ್ಯ ಹೊರ ರಾಜ್ಯದ ಕೃಷಿಕರನ್ನು ಆಹ್ವಾನಿಸುತ್ತಿದೆ. ಇಂದಿನಿಂದ 4 ದಿನ ನವೆಂಬರ್  2022  ರ ದಿನಾಂಕ 3 -4-5-6 ರ ಗುರುವಾರ, ಶುಕ್ರವಾರ, ಶನಿವಾರ  ಮತ್ತು ಭಾನುವಾರಗಳಂದು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ  (ಜಿಕೆವಿಕೆ GKVK)  ನಡೆಸಲಾದ ಎಲ್ಲಾ ಕೃಷಿ, ತೋಟಗಾರಿಕೆ ಮುಂತಾದ  ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸಿಕೊಡುವ ಉತ್ಸವ ಇದಾಗಿರುತ್ತದೆ. ರೈತ ಇಲ್ಲಿಗೆ ಭೇಟಿ ಕೊಟ್ಟು ಹತ್ತು ಹಲವು ಮಾಹಿತಿಗಳನ್ನು ಪಡೆಯಬಹುದು. ತಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಳ್ಳಬಹುದು.

ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯ ಎಂದರೆ ಅದು ನಮ್ಮ ರಾಜ್ಯದ ಹಿರಿಯ ಕೃಷಿ ವಿಶ್ವವಿಧ್ಯಾನಿಲಯವಾಗಿರುತ್ತದೆ. ಇಲ್ಲಿ ನಡೆದ ಹಲವಾರು ಸಂಶೊಧನೆಗಳು ಜಗತ್ತಿನಾದ್ಯಂತ ಹೆಸರು ಮಾಡಿದೆ. ಇಲ್ಲಿನ ವಿಶಾಲ ಪ್ರಾತ್ಯಕ್ಷಿಕಾ ಕ್ಷೇತ್ರಗಳನ್ನು ಪ್ರತೀಯೊಬ್ಬನೂ  ಈ ದಿನಗಲ್ಲಿ ವಿಕ್ಷಿಸಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಬೆಳೆ ಪ್ರಾತ್ಯಕ್ಷಿಕೆ ಇರುತ್ತದೆ. ಪ್ರತೀಯೊಂದರ ಬಗ್ಗೆಯೂ ಮಾಹಿತಿ ಕೊಡುವ ವ್ಯವಸ್ಥೆ ಇರುತ್ತದೆ.  ವಿಶಾಲವಾದ ಸುಮಾರು  500 ಎಕ್ರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ ನೋಡಲು ನೂರಾರು ವಿಷಯ ವಸ್ತುಗಳಿರುತ್ತವೆ. ಇದನ್ನು ಯಾರೂ ತಪ್ಪಿಸಿಕೊಳ್ಳದೆ ಒಮ್ಮೆ ಭೇಟಿ ಕೊಡಿ. ಬೇಟಿಯ ನಂತರ ನಿಮ್ಮಲ್ಲೇ ಕೆಲವು ಬದಲಾವಣೆಗಳನ್ನು ಗುರುತಿಸಿ.

ಮೆಜೆಸ್ಟಿಕ್ ನಿಂದ ಯಲಹಂಕ ಹೋಗುವ ಎಲ್ಲಾ ಬಸ್ಸುಗಳೂ GKVK  ಗೇಟ್ ಎದುರು ಹೋಗುತ್ತವೆ. ಇಲ್ಲಿ ಇಳಿದ ತಕ್ಷಣ ಕೃಷಿ ಮೇಳ ನಡೆಯುವ ಜಾಗಕ್ಕೆ ಹಾಗೆಯೇ ಕ್ಷೇತ್ರ ಪ್ರಾತ್ಯಕ್ಷಿಕೆಗಳು ಇರುವ ಕಡೆಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ವಾಪಾಸು ಬರಬೇಕಾದರೂ ಬಸ್ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ  ಸಂಜೆ ಗಂಟೆ 6 ತನಕವೂ ಮೇಳ ನಡೆಯುತ್ತಿರುತ್ತದೆ. ಈ ತನಕವೂ ವಾಹನ ಸೌಕರ್ಯ ಇರುತ್ತದೆ.  ಸ್ವಂತ ವಾಹನದಲ್ಲಿ ಪ್ರಯಾಣಿಸುವವರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆಯೂ ಇದೆ.

ಕೃಷಿ ಮೇಳದಲ್ಲಿ ಏನು ಇರುತ್ತದೆ:

  • ಸಾಮಾನ್ಯವಾಗಿ ಆವು ಕೃಷಿ ಮೇಳ ಎಂದಾಕ್ಷಣ ಅಲ್ಲಿ ನೂರಾರು ಮಳಿಗೆಗಳು ಇರುತ್ತದೆ.
  • ಯಂತ್ರಗಳು, ಸಾಧನಗಳು, ಗೊಬ್ಬರಗಳು, ಕೃಷಿಕರ ಉತ್ಪನ್ನಗಳು ಹೀಗೆಲ್ಲಾ ಇರುತ್ತವೆ.
  • ಅದನ್ನು ನೋಡಿದರೆ ಕೃಷಿ ಮೇಳ ನೋಡಿದ್ದೇವೆ ಎಂದು ಸಂತೃಪ್ತಿಯಿಂದ ಹೊರ ಬರುತ್ತಾರೆ.
  • ಆದರೆ ಅದು ಕೃಷಿ ಮೇಳದಲ್ಲಿ ಒಂದು ಅಂಗ ಅಷ್ಟೇ.
  • ಖಾಸಗಿ ಕೃಷಿ ಮೇಳದಲ್ಲಿ ಹೃದಯಭಾಗ ಎಂದರೆ  ಈ ಮಳಿಗೆ ವ್ಯಾಪಾರಗಳೇ  ಆಗಿದ್ದರೂ ಕೃಷಿ ಸಂಶೋಧನಾ ಸಂಸ್ಥೆ, ವಿಶ್ವ ವಿಧ್ಯಾನಿಲಯಗಳ ಕೃಷಿ ಮೇಳ ಎಂದರೆ ಅದಕ್ಕಿಂತ ಭಿನ್ನ.
  • ಇಲ್ಲಿ  ಕ್ಷೇತ್ರ ಪ್ರಾತ್ಯಕ್ಷಿಕೆ ಗಳೂ ಇರುತ್ತವೆ. ಹೊಸತಾಗಿ ಬಿಡುಗಡೆಯಾದ ತಳಿಗಳ ಪ್ರಾತ್ಯಕ್ಷಿಕೆ ಇರುತ್ತದೆ.
  • ಮೇವಿನ ಹುಲ್ಲಿನಿಂದ ಹಿಡಿದು, ಭತ್ತ ರಾಗಿ, ಜೋಳ, ಅವರೆ ಉದ್ದು, ಹೆಸರು ಕಡಲೆ ಸೋಯಾ ಸೂರ್ಯಕಾಂತಿ, ಬಾಳೆ, ಪಪ್ಪಾಯ ಮಾವು ಹಲಸು, ದ್ರಾಕ್ಷಿ ಹೂವು ಎಲ್ಲದರ ಬೆಳೆ ಪ್ರಾತ್ಯಕ್ಷಿಕೆ ಇರುತ್ತದೆ.
  • ಈ ಎಲ್ಲಾ ಬೆಳೆಗಳಲ್ಲಿ ಅಳವಡಿಸಿಕೊಂಡ ತಾಂತ್ರಿಕತೆಯನ್ನು ಇಲ್ಲಿ ನೋಡಬಹುದು.
  • ವಿಷಯ ತಜ್ಞರಲ್ಲಿ ಸ್ಥಳದಲ್ಲೇ ಚರ್ಚಿಸಬಹುದು.ಪಾಲಿ ಹೌಸ್ ನಲ್ಲಿ ತರಕಾರಿ ಬೆಳೆಗಳು, ಬಾಳೆ ಬೆಳೆ, ತರಕಾರಿಗಳು ಇವುಗಳನ್ನೂ ಸಹ ಇಲ್ಲಿ ನೋಡಬಹುದು.
ಕೃಷಿ ಮೇಳದಲ್ಲಿ ಜನ ಸಂದಣಿ

ಮಳಿಗೆಗಳು:

  • ಮಳಿಗೆಗಳಲ್ಲಿ ನೀರಾವರಿ ಕುರಿತಂತೆ ವಿವಿಧ ನೀರಾವರಿ ಯಂತ್ರ ಸಾಧನಗಳ ಮಳಿಗೆಗಳು ಇರುತ್ತವೆ. ಹನಿ ನೀರಾವರಿ ಪೈಪುಗಳು, ಫಿಲ್ಟರುಗಳು ಸ್ರಿಂಕ್ಲರ್ ನೀರಾವರಿ ಸಾಧನಗಳು, ಪಂಪುಗಳು,  ಕೇಬಲ್ ಗಳು ಅಟೋಮೇಷನ್ ಹೀಗೆಲ್ಲಾ ಪ್ರದರ್ಶನ ಮಾಡುವ  50 ಕ್ಕೂ ಹೆಚ್ಚಿನ ಸ್ಟಾಲುಗಳು ಇರುತ್ತವೆ.
  • ರಸ ಗೊಬ್ಬರಗಳ ವಿವಿಧ  ತಯಾರಿಕೆಗಳು, ಸಾವಯವ ಗೊಬ್ಬರಗಳು, ಜೈವಿಕ ಗೊಬ್ಬರಗಳು ಆಧುನಿಕ ನ್ಯಾನೋ ತಂತ್ರಜ್ಞಾನದ ಗೊಬ್ಬರ ಮುಂತಾದ ಹಲವರು ಮಳಿಗೆಗಳು ಇರುತ್ತವೆ. ತರಹೇವಾರು ಜೈವಿಕ ಗೊಬ್ಬರ ತಯಾರರಕರ ಮಳಿಗೆ ಇಲ್ಲಿ ಇರುತ್ತದೆ.
  • ಸಾವಯವ ಉತ್ಪನ್ನಗಳಿಗಾಗಿಯೇ  ಪ್ರತ್ಯೇಕ ಮಳಿಗೆಗಳಿರುತ್ತವೆ. ಇಲ್ಲಿ ಸಾವಾವ ಉತ್ಪನ್ನ ತಯಾರಕರು ತಮ್ಮ ಉತ್ಪನ್ನದ ಮಾರಾಟ ಪ್ರದರ್ಶನವನ್ನು ಇಟ್ಟಿರುತ್ತಾರೆ.
  • ಬಿತ್ತನೆ ಬೀಜಗಳು ಮತ್ತು ಸಸ್ಯಗಳು: ಅಧಿಕ ವರಮಾನ ತಂದು ಕೊಡಬಲ್ಲ ಹೈಬ್ರೀಡ್ ತರಕಾರಿಗಳ ವಿವಿಧ ಬಿತ್ತನೆ ಬೀಜಗಳನ್ನು ಉತ್ಪಾದಿಸುವ ಹಲವಾರು ಕಂಪೆನಿಗಳು ತಮ್ಮ ಮಳಿಗೆಗಳನ್ನು ತೆರೆದಿರುತ್ತವೆ. ಅಂಗಾಂಶ ಕಸಿಯ ಸಸ್ಯೋತ್ಪಾದಕರೂ ತಮ್ಮ ಮಳಿಗೆ ತೆರೆದಿರುತ್ತಾರೆ.
ತಜ್ಞರಿಂದ ರೈತರ ಸಂದೇಹಗಳಿಗೆ ಪರಿಹಾರ
ತಜ್ಞರಿಂದ ರೈತರ ಸಂದೇಹಗಳಿಗೆ ಪರಿಹಾರ

ಸಂಶೋಧನಾ ಸಂಸ್ಥೆಗಳ ಮಳಿಗೆಗಳು:

  • ರಾಜ್ಯದಲ್ಲಿ ಹಲವಾರು ಕೃಷಿ ಸಂಶೊಧನಾ ಸಂಸ್ಥೆಗಳಿವೆ. ಕೃಷಿ ವಿಜ್ಞಾನ ಕೇಂದ್ರಗಳಿವೆ, ಕೃಷಿ ಕಾಲೇಜುಗಳು ಇವೆ.
  • ಕೃಷಿ, ತೋಟಗಾರಿಕಾ ವಿಶ್ವ ವಿದ್ಯಾನಿಲಯಗಳು ಇವೆ. ಕೇಂದ್ರೀಯ ಸಂಶೊಧನಾ ಸಂಸ್ಥೆಗಳು ಇವೆ.
  • ಇವರೆಲ್ಲಾ ತಮ್ಮ ಸಂಶೋಧನೆಗಳನ್ನು ಜನತೆಗೆ ತಿಳಿಸಿಕೊಡುವ  ತಮ್ಮ ಮಳಿಗೆಗಳನ್ನು ತೆರೆದಿರುತ್ತವೆ.
  • ಇಲ್ಲಿ ಸಾಕಷ್ಟು ವೀಕ್ಷಣೆಗೆ ಹೂರಣ ಗಳು ಇರುತ್ತವೆ. ಕೀಟಶಾಸ್ತ್ರ ರೋಗಶಾಸ್ತ್ರ, ಬೇಸಾಯಶಾಸ್ತ್ರ, ಕೃಷಿ ಇಂಜಿನಿಯರಿಂಗ್, ಕೊಯಿಲೋತ್ತರ ಸಂಸ್ಕರಣೆ ಎಲ್ಲದರ ಮಳಿಗೆಗಳು ಪಾತ್ಯೆಕ್ಷಿಕೆಗಳೊಂದಿಗೆ ಇರುತ್ತವೆ.
  • ಬ್ಬಿಗೆ ಹೆಸರುವಾಸಿಯಾದ ಮಂಡ್ಯ ವಿ ಸಿ ಫಾರಂ ಅಭಿವೃದ್ಧಿಪಡಿಸಿದ ವಿವಿಧ ಕಬ್ಬು ತಳಿ ಮತ್ತು ಬೇಸಾಯ ಕ್ರಮಗಳನ್ನು ಇಲ್ಲಿ ನೋಡಬಹುದು.
ಪಾಲಿ ಹೌಸ್ ಬೇಸಾಯ  ತಾಂತ್ರಿಕತೆ
ಪಾಲಿ ಹೌಸ್ ಬೇಸಾಯ ತಾಂತ್ರಿಕತೆ

ವಿಷಯ ತಜ್ಞರ ಜೊತೆ ಸಮಾಲೋಚನೆ:

ವಿಶ್ವ ವಿಧ್ಯಾನಿಲಯಕ್ಕೆ ಸಂಬಂಧಿಸಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೇರೆ ಬೇರೆ ವಿಷಯ ತಜ್ಞರು ಪ್ರತೀ ದಿನ ಬೆಳಗ್ಗಿನಿಂದ ಸಂಜೆ ತನಕ ರೈತರ ಯಾವುದೇ ಸಂದೇಹಗಳಿಗೆ ಉತ್ತರಿಸಲು ಹಾಜರಿರುತ್ತಾರೆ.

ಪಶು ಸಂಗೋಪನೆ ಮತ್ತು ಕುಕ್ಕುಟ ಶಾಸ್ತ್ರ:

  • ಪಶು ಸಂಗೋಪನೆಯಲ್ಲಿ ಬರುವ ಕುರಿ, ಮೇಕೆ, ಎಮ್ಮೆ, ಆಕಳು ಮೀನುಗಾರಿಕೆ ಮುಂತಾದವುಗಳ ಪ್ರಾತ್ಯ್ಯಕ್ಷಿಕೆ ಇರುತ್ತದೆ, ಬೇರೆ ಬೇರೆ ಕೋಳಿಗಳು, ಗೌಜುಗನ ಹಕ್ಕಿ, ಬಾತುಕೋಳಿಗಳು, ವಿವಿಧ್ ತಳಿಯ ಕುರಿಗಳು, ನಾಟೀ ಹಸುಗಳು ಇಲ್ಲಿ ಪ್ರದರ್ಶನಕ್ಕೆ ಇರುತ್ತದೆ. ಪಶು ಆಹಾರಗಳ ಮಳಿಗೆಗಳೂ ಇರುತ್ತವೆ.
  • ಸ್ವ ಉದ್ಯೋಗ ಮತ್ತು ಗೃಹ ಉದ್ದಿಮೆ: ಇಲ್ಲಿ ಸ್ವ ಸಹಾಯ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳು ಉದ್ದಿಮೆಯಲ್ಲಿ ತೊಡಗಿಸಿಕೊಂಡು ತಾವು ತಯಾರಿಸುವ ಉತ್ಪನ್ನಗಳು, ಬಟ್ಟೆ ಬರೆಗಳು, ಕುಸುರಿ ಕಲೆಗಳು, ತಿಂಡಿ ತಿನಿಸುಗಳ  ಪ್ರದರ್ಶನ, ಮಾರಾಟ ಸಹ ಇರುತ್ತದೆ.
  • ಕಾರ್ಯಕ್ರಮಗಳು  ಉಪನ್ಯಾಸಗಳು: ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇಲ್ಲಿ ನಿರಂತರವಾಗಿ ವಿಷಯ ತಜ್ಞರ ಮಾಹಿತಿ ವರ್ಗಾವಣೆ, ರೈತರ ಅನುಭವ ಹಂಚಿಕೆ, ಗಣ್ಯ ವ್ಯಕ್ತಿಗಳ ಹಿತನುಡಿಗಳು, ರೈತರಿಗೆ ಸನ್ಮಾನ, ಮುಂತಾದವುಗಳು ನಾಲ್ಕೂ ದಿನವೂ ನಡೆಯುತ್ತಾ ಇರುತ್ತದೆ.
ಹೊಸ ಹೊಸ ತಳಿಯ ಕುಕ್ಕುಟ
ಹೊಸ ಹೊಸ ತಳಿಯ ಕುಕ್ಕುಟ

ಯಂತ್ರೋಪಕರಣಗಳು:

  • ಆಧುನಿಕ ಕೃಷಿಯಲ್ಲಿ ಮಹತ್ತರವಾದ ಪಾತ್ರ ವಹಿಸುವ ವೈವಿಧ್ಯಮಯ ಸಣ್ಣ ದೊಡ್ಡ ಯಂತ್ರಸಾಧನಗಳ ಪಾತ್ಯಕ್ಷಿಕೆ ವಿಶಾಲವಾದ ಪ್ರದೇಶದಲ್ಲಿ ನೆಡೆಯುತ್ತಿರುತ್ತದೆ. 
  • ಬರೇ ಪ್ರದರ್ಶನವಲ್ಲದೆ ಪ್ರಾತ್ಯಕ್ಷಿಕೆಯೂ ಇರುತ್ತದೆ. ವಿವಿಧ  ತಯಾರಿಕೆಯ ಕಲ್ಟಿವೇಟರ್ ಗಳು, ನೇಗಿಲುಗಳು, ರೋಟವೇಟರ್ ಗಳು, ಸಣ್ಣ ಮಾದರಿಯ ಕಲ್ಟಿವೇಟರ್ ಗಳು, ಕಳೆ ಕೊಚ್ಚುವ ಸಾಧನಗಳು, ಮರ ಕೊಯ್ಯುವ ಗರಗಸಗಳು,
  • ಕೆಲಸದಾಳುಗಳ ಅವಲಂಭನೆಯನ್ನು ಕಡಿಮೆ ಮಾಡುವ ಬೇರೆ ಬೇರೆ ವ್ಯವಸ್ಥೆಗಳನ್ನು ಈ ಪ್ರದರ್ಶನ ವಠಾರದಲ್ಲಿ ನೋಡಬಹುದು.
ಮಾರಾಟ ಮಳಿಗೆಗಳು
ಮಾರಾಟ ಮಳಿಗೆಗಳು

ಕೃಷಿ ಮೇಳ ಹೋದವರು ಬರೇ ಮಳಿಗೆ ಮಾತ್ರ ನೋಡುವುದಲ್ಲ:

ಕೃಷಿ ವಿಶ್ವ ವಿಧ್ಯಾನಿಲಯ ವಿಶಾಲ ಸಸ್ಯ ಕ್ಷೇತ್ರಗಳನ್ನು ಹೊಂದಿದ್ದು,  ಇಲ್ಲೆಲ್ಲಾ ಬೇರೆ ಬೇರೆ ಬೆಳೆಗಳ ಪ್ರಾತ್ಯಕ್ಷಿಕೆಗಳು ಇವೆ. ಇವನ್ನೆಲ್ಲಾ ನೋಡುವುದು ಉತ್ತಮ. ತಮ್ಮ ಸಂದೇಹಗಳೇನಾದರೂ ಇದ್ದರೆ  ವಿಜ್ಞಾನಿಗಳ ಜೊತೆ  ಚರ್ಚಿಸಬಹುದು. ಕೃಷಿ ಸಂಶೋಧನಾ ಸಂಸ್ಥೆಗಳ ಬೇರೆ ಬೇರೆ ಮಳಿಗೆಗಳಲ್ಲಿ  ತಮ್ಮ ವೃತ್ತಿ ಜೀವನಕ್ಕೆ ಸಹಾಯಕವಾಗುವ ಬಹಳಷ್ಟು ಮಾಹಿತಿಗಳಿರುತ್ತವೆ. ಇದನ್ನು ಸಾಕಷ್ಟು ಬಿಡುವು ಮಾಡಿಕೊಂಡು ನೋಡಿ.

ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ ಕೃಷಿಮೇಳಕ್ಕೆ ಹಲವಾರು ವರ್ಷಗಳ ಇತಿಹಾಸ ಇದ್ದು, ಇಲ್ಲಿನ ಅಚ್ಚುಕಟ್ಟು ವ್ಯವಸ್ಥೆ ಬೇರೆಲ್ಲೂ ಕಾಣಸಿಗದು.  ಜನಜಂಗುಳಿಯ ಅರಿವೇ ಆಗದಂತೆ ಇಲ್ಲಿ ವ್ಯವಸ್ಥೆಗಳನ್ನು ಮಾಡಿರುತ್ತಾರೆ. ತಂಪು ವಾತಾವರಣ ಹಾಗೆಯೇ ಎಲ್ಲಾ ಮೂಲಭೂತ ವ್ಯವಸ್ಥೆಗಳಿರುವ ಮಾದರಿ ಕೃಷಿ ಮೇಳ ಇದು.  

Leave a Reply

Your email address will not be published. Required fields are marked *

error: Content is protected !!