ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.
ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ. ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು. ಅದು…