ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ ಇದೆಯೇ?
ಜಾಯೀ ಕಾಯಿ ಅಥವಾ ಜಾಯೀ ಸಾಂಬಾರದ ಸಸ್ಯಾಭಿವೃದ್ದಿಯಲ್ಲಿ ಕಸಿ ತಂತ್ರಜ್ಞಾನ ತೀರಾ ಅವಶ್ಯವೋ ಅಥವಾ ಸಾಂಪ್ರದಾಯಿಕ ಬೀಜದ ಸಸಿಗಳಿಂದಲೇ ಸಸ್ಯಾಭಿವೃದ್ದಿ ಸಾಕೇ ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಜಾಯೀ ಕಾಯಿ ಬೆಳೆಯನ್ನು ಅಂತರ ಬೆಳೆಯಾಗಿ ಅಡಿಕೆ, ತೆಂಗಿನ ತೋಟದಲ್ಲಿ ಬೆಳೆದು ಮರವೊಂದರ ವಾರ್ಷಿಕ 10000 ದಷ್ಟು ಆದಾಯ ಪಡೆಯುವ ಕೆಲವು ರೈತರು ಏನೆನ್ನುತ್ತಾರೆ. ಹಾಗೆಯೇ ಕಸಿ ಗಿಡದ ಬಗ್ಗೆ ಯಾಕೆ ಇಷ್ಟೊಂದು ಪ್ರಚಾರ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ. ಕಸಿ ತಾಂತ್ರಿಕತೆ ಎಂಬುದು ಎಲ್ಲಿ ಬೇಕೋ ಆಲ್ಲಿಗೆ …