ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.
ರಾಮಫಲ ಹಣ್ಣಿನ ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ ರೂ.50 ಸಿಗುವುದಕ್ಕೆ ತೊಂದರೆ ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು. ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ….