ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.

ಸ್ಥಳೀಯ ರಾಮ ಫಲ ಹಣ್ಣು

ರಾಮಫಲ ಹಣ್ಣಿನ  ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ  ರೂ.50 ಸಿಗುವುದಕ್ಕೆ ತೊಂದರೆ  ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ  ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು.

  •  ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ.
  • ನಮ್ಮ ಸುತ್ತಮುತ್ತ ಬೆಳೆಯುತ್ತಿರುವ ಕೆಲವು ಹಣ್ಣಿನಲ್ಲಿ  ವಿದೇಶೀ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಒಳಗೊಂಡಿವೆ.
  •  ಒಣ ಭೂಮಿಯಲ್ಲಿ ಬೆಳೆಯಬಹುದಾದ ಹಣ್ಣು ಇದು  

ವಿಷೇಷ ಹಣ್ಣು:

ಸ್ಥಳೀಯ ರಾಮ ಫಲ ಹಣ್ಣು

  • ಸಾಂಪ್ರದಾಯಿಕ ಹಣ್ಣುಹಂಪಲುಗಳಲ್ಲಿ ಮಾವು,  ಸಪೋಟಾದಂತೆ ಸೀತಾಫಲರಾಮಫಲವೂ ಒಂದು
  • ಸೀತಾಫಲ ಜಾತಿಯ  ಹಣ್ಣುಗಳು ಕಡಿಮೆ ನೀರಿನಲ್ಲಿ ಉತ್ತಮವಾಗಿ ಬೆಳೆಯಲ್ಪಡುವ ಬೆಳೆ.
  • ಮಳೆ ಕಡಿಮೆ ಇರುವ ಕಡೆ ಸೀತಾಫಲ ಉತ್ತಮವಾಗಿ ಬೆಳೆದರೆ, ಕರಾವಳಿಯ  ಜಿಲ್ಲೆಗಳ ಮಳೆಗೆ ಸರಿಯಾಗಿ ಹೊಂದಿಕೆಯಾಗದು.
  • ಇಲ್ಲಿ ಅದನ್ನು ಬೆಳೆಸುವುದು ವ್ಯರ್ಥ ಪ್ರಯತ್ನ.
  • ಅದರ ಬದಲಿಗೆ ರಾಮಫಲ ಎಂಬ ಸೀತಾಫಲ ಜಾತಿಯ ಸಸ್ಯವನ್ನು ಬೆಳೆಸಿ ಉತ್ತಮ ಫಸಲು ಪಡೆಯಬಹುದು.
  • ಇದರ ಸಸ್ಯ ಶಾಸ್ತ್ರೀಯ ಹೆಸರು   Annona reticulate.  bullock’s heart, wild-sweetsop. bull’s heart, ox-heart  ಎಂಬುದಾಗಿಯೂ ಕರೆಯುತ್ತಾರೆ.
  • ಅನೋನೇಸೀ ಕುಟುಂಬಕ್ಕೆ ಸೇರಿದ ಫಲ ವೃಕ್ಷ.
  • ಸೀತಾಫಲದಂತೇ  ರುಚಿ ಹೊಂದಿದೆ.
  • ಸೀತಾಫಲ ಸಸ್ಯಕ್ಕಿಂತ ದೊಡ್ಡದಾಗಿ  (25-30 ಅಡಿ ತನಕವೂ) ಬೆಳೆಯುತ್ತದೆ
  • ಅಧಿಕ ಹಣ್ಣುಗಳನ್ನೂ ಕೊಡುತ್ತದೆಆದರೆ ಸೀತಾಫಲದಷ್ಟು  ಪ್ರಚಾರವನ್ನು ಪಡೆದಿಲ್ಲ.
  • ಸೀತಾಫಲಕ್ಕೆ ಹೋಲಿಸಿದರೆ  ಹಣ್ಣಿನಲ್ಲಿ ವೇಸ್ಟೇಜ್ ಕಡಿಮೆ.
  • ಇದರ ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳು ಅಡಕವಾಗಿದೆ
  • ಇದನ್ನು  ಹಾಗೆಯೇ ತಿನ್ನಬಹುದು. ಹಣ್ಣಾದ ಮೇಲೆ ಗುಂಜನ್ನು ಎಳೆದರೆ  ಸಿಗುವುದೆಲ್ಲಾ ತಿನ್ನುವ ತಿರುಳು.
  • ತಿನ್ನುವಾಗ  ಬೀಜ  ಮಾತ್ರ ಬಿಸಾಡುವಂತದ್ದು.
  • ಜ್ಯೂಸ್ ಮಾಡಿಯೂ  (ಮಿಲ್ಕ್ ಶೇಕ್ಸೇವಿಸಬಹುದು.
  • ಕತ್ತಿ, ಚಾಕುವಿನಿಂದ ಕೊರೆಯಬೇಕಾಗಿಲ್ಲ.
  • ಕೈಯಲ್ಲೇ ತುಂಡು ಮಾಡಬಹುದು, ಎಲ್ಲಿ ಬೇಕಲ್ಲಿ ತಿನ್ನಬಹುದು.
  • ಇದಲ್ಲಿ ಬಿಳಿ ತಿರುಳು, ಕೆಂಪು ತಿರುಳು ಉಳ್ಳ ವಿಧ ಇದೆ. ರುಚಿ ಸಿಹಿ.

ಆರೋಗ್ಯಕ್ಕೆ ಉತ್ತಮ:

ಬಿಸಿಲು ಚೆನ್ನಾಗಿ ಇದ್ದಲ್ಲಿ ಉತ್ತಮ ಇಳುವರಿ
ಬಿಸಿಲು ಚೆನ್ನಾಗಿ ಇದ್ದಲ್ಲಿ ಉತ್ತಮ ಇಳುವರಿ
  • ಹಣ್ಣು ಹಂಪಲುಗಳೆಲ್ಲವೂ ಆರೋಗ್ಯಕ್ಕೆ ಉತ್ತಮವೇ.
  • ಆದರೆ ಅದನ್ನು ಬೆಳೆಯುವಾಗ ಬೆಳೆ  ಉಳಿಸಿಕೊಳ್ಳುವ ಸಲುವಾಗಿ ಮತ್ತು ಗ್ರಾಹಕರಿಗೆ ಒಪ್ಪುವ ನೋಟ ಪಡೆಯುವುದಕ್ಕಾಗಿ ಕೀಟನಾಶಕ, ರೋಗನಾಶಕ, ಹಾರ್ಮೋನುಗಳನ್ನು ಬಳಸಲೇ ಬೇಕಾಗುತ್ತದೆ.
  • ರಾಮಫಲ ಹಣ್ಣಿಗೆ ಅಂಥಹ ಯಾವುದೇ ರೋಗಗಳಿಲ್ಲ. ಕೀಟಗಳಿಲ್ಲ.
  • ಹಿಟ್ಟು ತಿಗಣೆ ಒಂದು ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಇರುವುದಿಲ್ಲ. ನೈಸರ್ಗಿಕವಾಗಿಯೇ ಬೆಳೆಯುತ್ತದೆ. 
  • ಸೀಲಾಫಲ, ಹನುಮಫಲ ಮುಂತಾದ ಹಣ್ಣಿನ ಆರೋಗ್ಯ  ಅಥವಾ ರೋಗ ನಿವಾರಕ ಗುಣದ ಬಗ್ಗೆ ಪ್ರಚಾರ ಇದ್ದರೆ  ಇದರದ್ದು ಪ್ರಚಾರ ಇಲ್ಲ.
  • ಅದೇ ಕುಟುಂಬದ ಹಣ್ಣಾಗಿದ್ದು, ಇದಕ್ಕೂ ಆರೋಗ್ಯ ರಕ್ಷಕ ಗುಣ ಇದೆ.
  • ಹಣ್ಣಿನಲ್ಲಿ ನೋವು ನಿವಾರಕ, ಉರಿ ನಿವಾರಕ,  ಗಾಯ ವಾಸಿಯಾಗುವ, ಜ್ವರ ನಿವಾರಕ, ಅಲ್ಲದೆ ಆಂಟೀ ಆಕ್ಸಿಡೆಂಟ್ ಗಳು  ಸಂಮೃದ್ಧವಾಗಿವೆ.
  • ಸಾಂಪ್ರದಾಯಿಕವಾಗಿ ಹೊಟ್ಟೆ ನೋವು, ಹೊಟ್ಟೆ ಹುಳ, ಅಲ್ಸರ್, ಜಂತು ಹುಳ ನಿವಾರಕವಾಗಿ ಇದನ್ನು ಬಳಸುತ್ತಿದ್ದರು.

100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳು

  • ಶಕ್ತಿ  101 ಕ್ಯಾಲೊರಿಗಳು, ಕಾರ್ಬೋ ಹೈಡ್ರೇಟುಗಳು -25 ಗ್ರಾಂ, ಕರಗಬಲ್ಲ  ನಾರು  – 2.4 ಗ್ರಾಂಕೊಬ್ಬು-0 .6 ಗ್ರಾಂ, ಪೆÇ್ರಟೀನು – 1.7 ಗ್ರಾಂವಿಟಮಿನ್ ಬಿ1 -7% , ವಿಟಮಿನ್ ಬಿ2- 8%, ವಿಟಮಿನ್ ಬಿ3 – 3%, ವಿಟಮಿನ್ ಬಿ5 – 3%, ವಿಟಮಿನ್ ಬಿ6 -17%  ವಿಟಮಿನ್ ಸಿ – 23%,  ಕ್ಯಾಲ್ಸಿಯಂ 3% , ಮೆಗ್ನೀಶಿಯಂ -5 ಕಬ್ಬಿಣಾಂಶ-5% , ಮತ್ತು ಫೆÇೀಸ್ಫೊರಸ್-3%. ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.
ಇಳುವರಿ ಮಾರಾಟದ ಅಂಗಡಿಗಳಲ್ಲಿ ಸ್ಥಳೀಯ ರಾಮ ಫಲ ಹಣ್ಣು
ಇಳುವರಿ ಮಾರಾಟದ ಅಂಗಡಿಗಳಲ್ಲಿ ಸ್ಥಳೀಯ ರಾಮ ಫಲ ಹಣ್ಣು

 ಎಲ್ಲಾ ಕಡೆ ಬೆಳೆಯಬಹುದು:

  • ಕರಾವಳಿ ಮಲೆನಾಡಿನಲ್ಲಿ  ಹಾಗೆಯೇ ಬಯಲು ಸೀಮೆಯಲ್ಲೂ ಇದು ಬೆಳೆಯುತ್ತದೆ
  • .ಇದನ್ನು ಬೀಜದಿಂದ  ಸಸ್ಯಾಭಿವೃದ್ದಿ ಮಾಡಬಹುದು.
  • ಆಳವಾದ ಸಡಿಲ ಮ ಣ್ಣಿನಲ್ಲಿ ನೆಟ್ಟು 3 ವರ್ಷಕ್ಕೆ ಫಲ ಕೊಡುತ್ತದೆ. 50  ವರ್ಷಕ್ಕೂ ಹೆಚ್ಚು ಬದುಕುತ್ತದೆ.
  • ಯಾವುದೇ ರೋಗ ರುಜಿನಗಳು ಇಲ್ಲ. ಆರೋಗ್ಯಕ್ಕೆ ಉತ್ತಮ ಹಣ್ಣು ಆದ ಕಾರಣ ಬೇಡಿಕೆ ಚೆನ್ನಾಗಿದೆ
  • ನೀರೊತ್ತಾಯ ಇದ್ದಾಗಲೂ ಚೆನ್ನಾಗಿ ಬೆಳೆಯುತ್ತದೆ.
  • ಗೊಬ್ಬರ ನೀರಿಗೆ ಚೆನ್ನಾಗಿ ಸ್ಪಂದಿಸಿ ಅಧಿಕ ಇಳುವರಿಯನ್ನೂ ನೀಡುತ್ತದೆ
  • ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದ್ದು, ಭಾರತದಲ್ಲಿ  ಇದನ್ನು  ರಾಮಫಲ ಎಂದು ಕರೆಯುತ್ತಾರೆ.

ತೋಟದ ಬದಿಯಲ್ಲಿ, ನಿರುಪಯುಕ್ತ ಭೂಮಿಯಲ್ಲಿ  ಇದನ್ನು ಬೆಳೆಸಿ ಹಣ್ಣು ಹಂಪಲಿನ ಅಂಗಡಿಗೆ  ಮಾರಾಟ ಮಾಡಬಹುದು. ಹಣ್ಣಿನ ಲಭ್ಯತೆ ಇಲ್ಲದ ಕಾರಣ ಸೀತಾಫಲದಂತೆ  ಮಾರುಕಟ್ಟೆ  ಇಲ್ಲ. ಮಹಾರಾಷ್ಟ್ರದ, ಮಹಾಬಲೇಶ್ವರದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ಬೇರೆ ಬೇರೆ ಕಡೆಗೆ ಇಲ್ಲಿಂದಲೇ ಬರುತ್ತದೆ. ಔರಂಗಾಬಾದ್ ಸುತ್ತಮುತ್ತ  ಇದನ್ನು ರಸ್ತ್ರೆ ಬದಿಯಲ್ಲಿ  ಮಾರಾಟ ಮಾಡುತ್ತಾರೆ

ರೈತರು ಬರೇ ವಾಣಿಜ್ಯ,ಆಹಾರ ಬೆಳೆಗಳನ್ನು ಮಾತ್ರವಲ್ಲ. ಇಂಥಹ ಹಣ್ಣಿನ ಬೆಳೆಗಳನ್ನು ಅಲ್ಪ ಸ್ವಲ್ಪವಾದರೂ ಬೆಳೆಯಬೇಕು. ಸಾಂಪ್ರದಾಯಿಕ ಹಣ್ಣುಗಳಿಗೆ ಈಗ ಬೇಡಿಕೆ  ಚೆನ್ನಾಗಿದೆ

Leave a Reply

Your email address will not be published. Required fields are marked *

error: Content is protected !!