ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ- ಬೆಳೆ ಸುಲಭ- ಲಾಭವು ಅಧಿಕ.

ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ

ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ.

ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ  ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ  ತುಂಬಾ ಕಡಿಮೆ  ಇರುವ  ಕಾರಣ ಬಳಕೆದಾರರಿಗೆ  ಬೇಕಾದಂತೆ  ಲಭ್ಯವಾಗದ ಸ್ಥಿತಿ ಇದೆ. ಸೇಬಿಗಿಂತಲೂ ಹೆಚ್ಚು ಬೆಲೆ ಇರುವ ಹಣ್ಣು.

  • ಸೀತಾಫಲದ ಹಣ್ಣು ಸಿಹಿ ರುಚಿ ಮತ್ತು ಮತ್ತು ಅದಕ್ಕೆ ವಿಶಿಷ್ಟ ಸುವಾಸನೆ ಸಹ ಇದೆ.
  • ಈ ಹಣ್ಣಿನ ಪ್ರಭೇಧದಲ್ಲಿ ರಾಮ ಫಲ ಹನುಮಫಲ ಎಂಬೆಲ್ಲಾ ವಿಧಗಳಿದ್ದು, ರಾಮಫಲAnnona reticulata  ಸಹ ಉತ್ತಮ ಹಣ್ಣೇ ಆಗಿದ್ದರೂ ಅದರ ಹಣ್ಣಿನ ತಿರುಳು ಬೀಜಕ್ಕೆ ಅಂಟಿಕೊಂಡಿರುತ್ತದೆ.
  • ಇದಕ್ಕೂ ಸುಮಾರು 200 -250 ರೂ. ತನಕ ಬೆಲೆ ಇದೆ.
  • ಹನುಮ ಫಲ ಸ್ವಲ್ಪ ಹುಳಿ. ಔಷಧೀಯ ಬಳಕೆಗೆ  ಮಾತ್ರ ಬಳಕೆ.
  • ಇದು Annona squamosa ಕುಟುಂಬಕ್ಕೆ ಸೇರಿದ ಸಸ್ಯ ವರ್ಗ.

ಎಲ್ಲಿ ಬೆಳೆಯಬಹುದು?

  • ಸೀತಾಫಲ ವನ್ನು ಅಂಗ್ಲ ಭಾಷೆಯಲ್ಲಿ cluserd appale ಎನ್ನುತ್ತಾರೆ.
  • ಒಣ ಭೂಮಿಯಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
  • ಮಹಾರಾಷ್ಟ್ರ , ರಾಜಸ್ಥಾನ ಆಂದ್ರ ಪ್ರದೇಶ, ತೆಲಂಗಾಣ, ಗುಜರಾತ್ ಮಧ್ಯ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು.
  • ಕರ್ನಾಟಕದಲ್ಲಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾಕಷ್ಟು  ಬೇಸಾಯ ಇದೆ.
  • ಇದನ್ನು ತೋಟ ಮಾಡಿಯೂ ಬೆಳೆಸಬಹುದು, ಬದುಗಳ ಸಸ್ಯವಾಗಿಯೂ ಬೆಳೆಸಬಹುದು.
  • ಒಂದು ಗಿಡದಲ್ಲಿ ಸುಮಾರು 1500 ರೂ. ತನಕ ಉತ್ಪತ್ತಿ ಮಾರುಕಟ್ಟೆಗೆ ಮಾರಾಟ ಮಾಡಿದಾಗ ಪಡೆಯಬಹುದು.
  • ಆನ್ ಲೈನ್ ಅಥವಾ ನೇರ ಮಾರುಕಟ್ಟೆ ಮಾಡಿದಾಗ  ಹೆಚ್ಚು ಸಿಗುತ್ತದೆ.
  • ಆಮೆಝಾನ್ ಮಾರುಕಟ್ಟೆಯಲ್ಲಿ ಕಿಲೋ ಹಣ್ಣಿಗೆ 250 ರೂ ತನಕ ಬೆಲೆ  ಇದೆ.
ಅರ್ಕಾ ಸುಹಾನ್ ಹಬ್ರೀಡ್ ತಳಿ
ಅರ್ಕಾ ಸುಹಾನ್ ಹಬ್ರೀಡ್ ತಳಿ

 ತಳಿಗಳು:

  • ಇದರಲ್ಲಿ  ಅರ್ಕಾ ಸುಹಾನ್ ಎಂಬ ಹಬ್ರೀಡ್ ತಳಿಯನ್ನು  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ಬಿಡುಗಡೆ ಮಾಡಿದ್ದಾರೆ.
  • ಇದರಲ್ಲಿ  1 ಕಿಲೋ ಗೂ ಹೆಚ್ಚು ತೂಕದ ಹಣ್ಣು ಬರುತ್ತದೆ.
  • ಇದು ಶುದ್ಧ ಸಿತಾಫಲ ಅಲ್ಲ.75 %  ಸೀತಾ ಫಲ ಮತ್ತು  25 %  ಚೆರಿಮೋಯೋ ಇದೆ.
  • ಇದು ದೇಶದಲ್ಲೇ ಅತ್ಯುತ್ಕೃಷ್ಟ ಹಣ್ಣು ಎಂದು ಗುರುತಿಸಲ್ಪಟ್ಟಿದೆ, ಮಹಾರಾಷ್ಟ್ರದಲ್ಲಿ ಸೂಪರ್ ಗೋಲ್ದ್ , ಹನುಮಾನ್ , ಸರಸ್ವತಿ ಸಿತಾಫಲ್  ಎನ್ ಎಂ ಕೆ  ಗೋಲ್ಡನ್  ಎಂಬ ಕೆಲವು  ವಿಶಿಷ್ಟ ಸೀತಾಫಲದ ತಳಿಗಳು ಇದ್ದು ಇದರಲ್ಲಿ ಬಣ್ಣದ ತಳಿಗಳೂ ಇವೆ.
  • ಸೊಲಾಪುರದಲ್ಲಿ ಸೀತಾಫಲದ ಸಸಿಗಳನ್ನು ಒದಗಿಸುವ ದೊಡ್ದ ದೊಡ್ಡ ನರ್ಸರಿಗಳಿದ್ದು, ಹೊಸ ಹೊಸ ತಳಿ ಪರಿಚಯಿಸುವಲ್ಲಿ ಇವರು ಮುಂದಿದ್ದಾರೆ.
  • ಪುಣೆಯ ಕಿಸಾನ್ ಕೃಷಿ ವಸ್ತು ಪ್ರದರ್ಶನದಲ್ಲಿ ಈ ತಳಿಗಳ ಹಣ್ಣು, ಸಸಿಗಳನ್ನು ಮಾರಾಟ ಸಹ ಮಾಡುತ್ತಾರೆ.
  • ಮಹಾಬಲೇಶ್ವರದಲ್ಲಿ ರಾಮ ಫಲ ಮತ್ತು ಸೀತಾಫಲವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.

ಅರ್ಕಾ ಸುಹಾನ್ ಹಬ್ರೀಡ್ ತಳಿ ಹಣ್ಣು

ಸೀತಾಫಲ ಹಣ್ಣಿನಲ್ಲಿ ಇರುವ ಆರೋಗ್ಯ ಗುಣಗಳು:

  • ಹಣ್ಣಿನಲ್ಲಿ

    ಅಧಿಕ ಕ್ಯಾಲೋರಿ ಒಳಗೊಂಡ ಹಣ್ಣು. ಇದರಲ್ಲಿ  ಸರಳ ಸಕ್ಕರೆ , ಗ್ಲೂಕೋಸ್ ಫ್ರುಕ್ಟೋಸ್ ಮುಂತಾದವು ಇರುವ ಕಾರಣ ಸೇವಿಸಿದ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ.

  • ಬಾಳೆ ಹಣ್ಣಿನಂತೆ. ಕಬ್ಬಿಣಾಂಶ ಹೆಚ್ಚಾಗಿರುವ ಕಾರಣ ಅನಿಮಿಯಾದಂತಹ ಖಾಯಿಲೆಗಳಿಗೆ ಇದು ಔಷಧಿ.
  • ಇದರಲ್ಲಿರುವ ವಿಟಮಿನ್ B5, ವಿಟಮಿನ್ C, ವಿಟಮಿನ್  A, ಸತು ಮತ್ತು ತಾಮ್ರದ ಅಂಶ  ಚರ್ಮ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
  • ಹುಣ್ಣು, ಮತ್ತು ತುರಿಕೆ ಮುಂತಾದ ಅಲರ್ಜಿ ಸಂಬಂಧಿತ ಸಮಸ್ಯೆ ಕಡಿಮೆಯಾಗಲು ಸೀತಾಫಲ ಸೇವಿಸಿದರೆ ಒಳ್ಳೆಯದು.
  • ಹಲವಾರು ಸಂಶೋಧನೆಗಳಿಂದ ದೃಡಪಟ್ಟಂತೆ ಇದು ಕ್ಯಾನ್ಸರ್ ರೋಗವನ್ನು ಸ್ವಲ್ಪ ಮಟ್ಟಿಗೆ ಹತ್ತಿಕ್ಕುವಲ್ಲಿ ಸಹಕಾರಿಯಾಗಿದೆ.
  • ನಿತ್ಯವೂ ಸೀತಾಫಲ ಸೇವಿಸುವುದರಿಂದ ಗದ್ದೆ ಬೆಳವಣಿಗೆ ಕುಂಠಿತವಾಗುತ್ತದೆ.
  • ಉರಿಯೂತ ಕಡಿಮೆಯಾಗುತ್ತದೆ. ಅದೇ ಕಾರಣಕ್ಕೆ ಇದೇ ಕುಟುಂಬದ ಲಕ್ಷ್ಮಣ ಫಲವನ್ನು ಕ್ಯಾನ್ಸರ್ ನಿವಾರಕ ಎಂದು ಪ್ರಚಾರ ಮಾಡಲಾಗುತ್ತದೆ.
  • ಸೀತಾಫಲದಲ್ಲಿ ಪಾಲಿಫಿನೋಲಿಕ್ ಎಂಬ ಅಂಶ ಈ ಹಣ್ಣಿನಲ್ಲಿ ಇರುವ ಕಾರಣ ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
  • ಹಾಗಾಗಿ ಡಯಬಿಟಿಸ್ ಖಾಯಿಲೆ ಬಾರದಂತೆ ಮಾಡಲು ಈ ಹನ್ಣು ಸೇವಿಸಬಹುದು.
  • ಈ ಹಣ್ಣಿನಲ್ಲಿರುವ ವಿಟಮಿನ್ B6 ಮೆದುಳಿನ ಚಟುವಟಿಕೆ ಹೆಚ್ಚಿಸಲು ಸಹಕಾರಿ. ನರಸಂಕೇತಗಳನ್ನು  ಉತ್ತಮಪಡಿಸಿ,ಮನಸ್ಸಿನ ಕೇಂದ್ರೀಕರಣ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
ಮಹಾರಾಷ್ಟ್ರದಲ್ಲಿ ಬೆಳೆಯುವ  ಸೂಪರ್ ಗೋಲ್ದ್  ತಳಿ
ಮಹಾರಾಷ್ಟ್ರದಲ್ಲಿ ಬೆಳೆಯುವ ಸೂಪರ್ ಗೋಲ್ದ್ ತಳಿ
  • ಹೃದಯದ ಸಮರ್ಪಕ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿರುತ್ತದೆ. ಅಸಂತ್ರೂಪ್ತ ಕೊಬ್ಬು ಮತ್ತು ಒಮೇಗಾ 6 ಪ್ಯಾಟೀ ಅಸಿಡ್  ಇರುವ ಕಾರಣ ಹೃದಯ ವ್ಯವಸ್ಥೆಯನ್ನು ಬಲಪಡಿಸುವುದು.
  • ವಿಟಮಿನ್ c  ಹೇರಳವಾಗಿರುವ ಕಾರಣ  ಸೀತಾಫಲವು ಆರೋಗ್ಯಕ್ಕೆ ಹಾನಿಕರ ಸೂಕ್ಷ್ಮಾಣು ಜೀವಿಗಳನ್ನು ದೇಹದ ಒಳಗೆ ಪ್ರವೇಶಿಸಲು ಅಡ್ಡಿಪಡಿಸುತ್ತದೆ.
  • ದೇಹದೊಳಗಿನ ವಿಷಾಂಶ ಮತ್ತು ಸ್ವತಂತ್ರ ರಾಡಿಕಲ್ಸ್ ಗಳನ್ನು ಹೊರ ಹಾಕುತ್ತದೆ.
  • ಕಣ್ಣಿನ ದೃಷ್ಟಿ ಉತ್ತಮವಾಗಿರಿಸಲೂ ಸಹ ಈ ಹಣ್ಣು ಸೇವನೆ ಉತ್ತಮ.ವಿಟಮಿನ್ C ಹೇರಳವಾಗಿರುವ ಕಾರಣ ಕಣ್ಣಿಗೆ ಸಂಬಂಧಿಸಿದ ನರಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ  ದೃಷ್ಟಿ ಹಾಳಾಗದಂತೆ ರಕ್ಷಿಸುತ್ತದೆ.
  • ಇದಷ್ಟೇ ಅಲ್ಲದೆ ಅಧಿಕ ನಾರಿನ ಅಂಶ ಇರುವ ಕಾರಣ ಜೀರ್ಣ ಕ್ರಿಯೆಗೆ ಒಳ್ಳೆಯದು. ಮಲವಿಸರ್ಜನೆ ಉತ್ತಮವಾಗಿರುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ಕಡಿಮೆಯಾಗುತ್ತದೆ.
ಕೆಂಪು ಸೀತಾಫಲ
ಲಾಲ್ ಸೀತಾಫಲ

ಸಾಂಗ್ಲಿ ಜಿಲ್ಲೆಯ ಜೆತ್ತಡ್ಕದ ಸಿದ್ದಣ್ಣ ಎಂಬವರು  ಬರೇ 11  ಗಿಡಕ್ಕೆ 18000  ರೂ ಆದಾಯ ಪಡೆದಿದ್ದಾರೆ. 2 ಕಿಲೋ ತನಕದ ಕಾಯಿಯನ್ನೂ ಪಡೆದಿದ್ದಾರೆ. ಒಂದು ಗಿಡದಲ್ಲಿ  50 ರಷ್ಟು ಕಾಯಿಗಳು ಬಂದಿವೆ ಎಂಬ ವರದಿ ಇದೆ.

  • ಅರ್ಕಾ ಸುಹಾನ ಒಂದು ಉತ್ತಮ ತಳಿ. ಇದರಲ್ಲಿ  ಬೀಜ ಕಡಿಮೆ.  ಚಮಚದಲ್ಲಿ ತಿನ್ನಬಹುಹುದು.  ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹಣ್ಣು ಸಿಗುತ್ತದೆ.
  • ಸೀತಾಫಲ ವರ್ಷಕ್ಕೆ ಒಮ್ಮೆ  ಮಾತ್ರ ಇಳುವರಿ ಕೊಡುವಂತದ್ದು.
  • ಮಾರುಕಟ್ಟೆಯಲ್ಲಿ ಬೇರೆ  ಹಣ್ಣುಗಳು ತುಂಬಾ ಕಡಿಮೆ  ಇರುವ ಸಮಯ ಸಪ್ಟೆಂಬರ್ – ಅಕ್ಟೋಬರ್ – ನವೆಂಬರ್ ಗೆ  ಫಸಲು ಸಿಗುತ್ತದೆ.

ನೆಟ್ಟು 3  ವರ್ಷಕ್ಕೆ  ಇಳುವರಿ ಪ್ರಾರಂಭವಾಗುತ್ತದೆ. ಕಸಿ ಮಾಡಿದ ಗಿಡಗಳಾಗಿರಬೇಕು. ಒಣ ಪ್ರದೇಶದಲ್ಲಿ ತೀರಾ ಕಡಿಮೆ  ನೀರಾವರಿಯಲ್ಲಿ ಬೆಳೆಯಬಹುದು. ಜ್ಯೂಸ್ ತಯಾರಿಕೆಗೆ ಅತೀ ಹೆಚ್ಚು ಬಳಕೆಯಾಗುತ್ತದೆ.

  •  ಜವಾರಿ ತಳಿಯಲ್ಲಿ ಬೀಜ ಜಾಸ್ತಿ.  ಜವಾರಿ ತಳಿ ಎಲ್ಲಾ ಮುಗಿದ ಮೇಲೆ  ಹೈಬ್ರೀಡ್ ತಳಿ  ಹಣ್ಣಾಗುತ್ತದೆ.
  • ಹೈಬ್ರೀಡ್ ತಳಿಯನ್ನು  ಹೆಚ್ಚು ಸಮಯ 8 ದಿನ ತನಕ ಇಡಬಹುದು.
  • ಹೂ ಬಿಟ್ಟು 3  ತಿಂಗಳಲ್ಲಿ ಬೆಳೆದು ಹಣ್ಣಾಗುತ್ತದೆ.

ಈ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಕ್ಯಾನ್ಸರ್ ಕೋಶಗಳನ್ನೂ ಸಹ ಸಾಯಿಸುತ್ತದೆ ಎನ್ನುತ್ತಾರೆ. ಒಣ ಭೂಮಿಯಲ್ಲಿ  ಬೆಳೆಯಬಹುದಾದ ಅತ್ಯಂತ ಲಾಭದಾಯಕ ಹಣ್ಣಿನ ಬೆಳೆ.ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ. ಒಣ ಭಾಗಗಳಲ್ಲಿ ಅತ್ಯುತ್ತಮವಾಗಿ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!