ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

by | Nov 27, 2020 | Fruit Crop (ಹಣ್ಣಿನ ಬೆಳೆ), Custard Apple (ಸೀತಾಫಲ) | 0 comments

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ.

ಕೃಷಿ ಒಂದೇ ಅವಕಾಶವಾಗಿತ್ತು:

 • ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ.
 • ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ, ತೋಟಗಾರಿಕೆ ಹಾಗೂ ಕೃಷಿ ತಂತ್ರಜ್ಞರ ಮಾರ್ಗದರ್ಶ ಪಡೆದರು.
 • ತಮ್ಮ  ಮಧ್ಯಮ ಫಲವತ್ತತೆಯ ತಮ್ಮ ಒಂದು ಎಕರೆ ಜಮೀನನ್ನು ಯಾವ ರೀತಿಯಾಗಿ  ಮಾರ್ಪಡಿಸ ಬಹುದು ಎಂದು ತಿಳಿದುಕೊಂಡರು.
 • ತೋಟಗಾರಿಕಾ ಅಧಿಕಾರಿಯೊಬ್ಬರ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿದರು.
 • ತೆಲಂಗಾಣಾ ರಾಜ್ಯದ ಸಂಗಾರೆಡ್ಡಿಯಿಂದ 2009ರಲ್ಲಿ ಬಾಲಾನಗರ ತಳಿಯ 125 ಸೀತಾಫಲ ಸಸಿಗಳನ್ನು ತಂದಿದ್ದಾರೆ.
 •  ಅರ್ಧ ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 12X 12 ಅಡಿ ಅಂತರದಲ್ಲಿ  ನಾಟಿ ಮಾಡಿ ದ್ದಾರೆ.
 •  ಇದಕ್ಕೆಲ್ಲಾ ಸುಮಾರು 25000 ರೂ. ಖರ್ಚಾಗಿದೆ
 • ತಜ್ಞರ ಮಾಗದರ್ಶನದಂತೆ  ಬೆಳೆದಾಗ ಗಿಡಗಳು ಹುಲುಸಾಗಿ ಬೆಳೆದವು.
 • ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭವಾಯಿತು.
 • ಮೊದಲನೇ ಫಸಲಿನ 31.25 ಕ್ವಿಂಟಾಲ್ ಮಾರಾಟದಿಂದ 1.09 ಲಕ್ಷ ರೂ. ಲಾಭ ಪಡೆದರು.
ಶ್ರೀ ವೆಂಕಟ್ ರಾವ್ ಬಿರಾದಾರ್ ತಮ್ಮ ಸೀತಾಫಲ ಫಸಲನ್ನು ತೋರಿಸುವುದು.

ಶ್ರೀ ವೆಂಕಟ್ ರಾವ್ ಬಿರಾದಾರ್ ತಮ್ಮ ಸೀತಾಫಲ ಫಸಲನ್ನು ತೋರಿಸುವುದು.

ಹನಿ ನೀರಾವರಿ ವ್ಯವಸ್ಥೆ:

 • ನೀರಾವರಿಗಾಗಿ ಕೊಳವೆಬಾವಿಯಿದ್ದು, 2012ರಲ್ಲಿ ತೋಟಗಾರಿಕೆ ಇಲಾಖೆಯ ಶೇ.70 ಸಹಾಯಧನದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ.
 • ಸೀತಾಫಲದ  ಪ್ರತಿ ಗಿಡಕ್ಕೆ ವರ್ಷಕ್ಕೊಂದು ಸಲ 20 ಕೆ.ಜಿ.ಯಂತೆ ತಿಪ್ಪೆಗೊಬ್ಬರ ಕೊಡುತ್ತಾರೆ.
 • ಜೂನ್ಆಗಸ್ಟ್‍ನಲ್ಲಿ 3 ಕೆ.ಜಿ.ಯಂತೆ ಎನ್.ಪಿ.ಕೆ. ಗೊಬ್ಬರ ಕೊಡುತ್ತಾರೆ.
 • ಹದಿನೈದು ದಿನಕ್ಕೊಮ್ಮೆ ಒಂದು ಹಸುವಿನ ಸಗಣಿಯಿಂದ ತಯಾರಿಸಿದ ಜೀವಾಮೃತ, ಎಂಟು ದಿನಕ್ಕೊಮ್ಮೆ 10 ಗಿಡಗಳ ಎಲೆಗಳಿಂದ ತಯಾರಿಸಿದ ರಬಡಾ(ಕಷಾಯ) ಹಾಕುತ್ತಾರೆ.
 • ಬೆಳೆಗೆ ಬೇಸಿಗೆಯಲ್ಲಿ 5-6 ದಿನಕ್ಕೊಮ್ಮೆ, ಮಳೆಗಾಲದಲ್ಲಿ 15 ದಿನಕ್ಕೊಮ್ಮೆ ನೀರುಣಿಸುವುದು ಬೇಸಾಯ ಕ್ರಮ.

 ಇಳುವರಿ ಮತ್ತು ಆದಾಯ: 

ಸೀತಾಫಲ ಕಠಾವು ಮಾಡಿ ಮಾರುಕಟ್ಟೆಗೆ ರವಾನೆಗೆ ಸಿದ್ದತೆ.

ಸೀತಾಫಲ ಕಠಾವು ಮಾಡಿ ಮಾರುಕಟ್ಟೆಗೆ ರವಾನೆಗೆ ಸಿದ್ದತೆ.

 • ವರ್ಷಕ್ಕೊಂದು ಸಲ ಆಗಸ್ಟ್ 3ನೇ ವಾರದಿಂದ ಎರಡುವರೆ ತಿಂಗಳವರೆಗೆ ಪ್ರತಿ ಗಿಡದಿಂದ ಸರಾಸರಿ 50 ಕೆ.ಜಿ.ಯಂತೆ ಒಟ್ಟು 62 ಕ್ವಿಂಟಾಲ್ ಸೀತಾಫಲದ ಇಳುವರಿ ಪಡೆಯುತ್ತಾರೆ.
 • ಇದರಿಂದ ಸರಾಸರಿ ಎರಡುವರೆ ಲಕ್ಷ ರೂ. ಗಳಿಸುತ್ತಿದ್ದಾರೆ.
 • ಪ್ರಸಕ್ತ ವರ್ಷದ ಅತೀವೃಷ್ಟಿಯಿಂದ ಕೇವಲ 37 ಕ್ವಿಂಟಾಲ್ ಇಳುವರಿ ಬಂದಿದೆ.
 • ಆದರೂ  ಮಾರಾಟ ಬೆಲೆ ಚೆನ್ನಾಗಿದ್ದುದರಿಂದ  ಪ್ರತಿ ವರ್ಷದಂತೆ 2.50 ಲಕ್ಷ ರೂ. ಆದಾಯ ಪಡೆದಿದ್ದಾರೆ.
 • ಇವರದ್ದು ಗುಣಮಟ್ಟದ ಸೀತಾಫಲ.
 • ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೆ.ವಿ.ಕೆ ವಿಜ್ಞಾನಿಗಳ ಪ್ಯಾಕೇಜ್ ತಂತ್ರಜ್ಞಾನದನ್ವಯ ಸೀತಾಫಲ ಮಾಗುವ ಅವಧಿ ಪ್ರಕಾರ ವರ್ಗೀಕರಿಸುವರು.
 • ಒಂದು ಬುಟ್ಟಿಯಲ್ಲಿ 30 ರಂತೆ ಸೀತಾಫಲ ತುಂಬಿ ಪ್ರತಿ ಬುಟ್ಟಿಗೆ 750 ರೂ.ದಂತೆ ಕಲಬುರಗಿಯಲ್ಲೇ ಪೂನಾ, ಹೈದ್ರಾಬಾದ, ಕಲಬುರಗಿ ಮಾರಾಟಗಾರರು ಖರೀದಿಸುತ್ತಾರೆ.
 • ಇದಲ್ಲದೆ ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರಿಗೂ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ.
 • ಮುಂದಿನ ವರ್ಷ ತಮ್ಮದೇ ಅದ ಬ್ರ್ಯಾಂಡ್ ನಲ್ಲಿ ಸೀತಾಫಲ ಮಾರಾಟ ಮಾಡಲು ಯೋಜಿಸಿದ್ದಾರೆ.

ಅಂತರ ಬೆಳೆ ಬೆಳೆದು ಖರ್ಚು ಹೊಂದಿಸಿಕೊಂಡಿದ್ದಾರೆ:

ಆಪಲ್ ಬೇರ್ ಮತ್ತು ಸೀತಾಫಲ ಮಿಶ್ರ ಬೆಳೆ

ಆಪಲ್ ಬೇರ್ ಮತ್ತು ಸೀತಾಫಲ ಮಿಶ್ರ ಬೆಳೆ

 • ಪ್ರಾರಂಭಿಕ ಹಂತದಿಂದಲ್ಲಿ ಹವಾಮಾನ ಮತ್ತು ಮಾರುಕಟ್ಟೆಯಾಧಾರಿತ ಕೊತ್ತಂಬರಿ, ಪುದೀನಾ, ಮೆಂತ್ಯೆ, ಸಬ್ಬಸ್ಸಿಗೆ, ಫುಂಡಿ, ಪಾಲಕ್, ಈರುಳ್ಳಿ ಸೊಪ್ಪುಗಳನ್ನು   ಬೆಳೆದಿದ್ದಾರೆ
 • ಟೊಮ್ಯಾಟೋ, ಸೌತೆ, ಅವರೆ, ಹೂಕೋಸು ತರಕಾರಿಗಳನ್ನೂ  ಅಂತರ ಬೆಳೆಯಾಗಿ ಬೆಳೆದು ವಾರ್ಷಿಕ ಎರಡೂವರೆ ಲಕ್ಷ ರೂ. ಪಡೆಯುತ್ತಿದ್ದಾರೆ.
 • ಬದುಗಳ ಮತ್ತು ಜಮೀನು ಸುತ್ತಲೂ 40 ಕರಿಬೇವನ್ನು, 20 ನುಗ್ಗೆಯನ್ನು, ಉಳಿದರ್ಧ ಎಕರೆಯಲ್ಲಿ 200 ಆ್ಯಪ್ಪಲ್ ಬೆರ್, 7 ಸಪೋಟ, 5 ಮಾವು, 9 ನೇರಳೆ, 3 ನಿಂಬೆ, 2 ದಾಳಿಂಬೆ ಗಿಡಗಳನ್ನು ಬೆಳೆದಿದ್ದಾರೆ.
 • ಮಹಾರಾಷ್ಟ್ರದ ಮೊಹೊಳದಿಂದ 200 ಆ್ಯಪ್ಪಲ್ ಬೆರ್ ಸಸಿಗಳನ್ನು ಖರೀದಿಸಿ 2019ರಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 11X12 ಅಡಿ ಅಂತರದಲ್ಲಿ 18000 ರೂ. ವೆಚ್ಚದಿಂದ ನಾಟಿ ಮಾಡಿದ್ದಾರೆ.
 • ಇವು ಮುಂದಿನ ವರ್ಷದಿಂದ ಇಳುವರಿ ನೀಡಲಿವೆ
 • ಹಸುಗಳಿಗೆ ಬೇಕಾದ ಮೇವನ್ನೂ 15×80 ಅಡಿ ಜಾಗದಲ್ಲಿ ಬೆಳೆದಿದ್ದಾರೆ.

ಕೃಷಿಯಿಂದ ಸ್ವಾವಲಂಭನೆ ಸಾಧ್ಯ:

 • ಒಕ್ಕಲುತನ ಮಾಡುವುದೆಂದರೇ ಮೂಗು ಮುರಿಯುವಂಥ ಜನರೇ ಹೆಚ್ಚು.
 • ಭೂತಾಯಿಯನ್ನು ನಂಬಿ ಶ್ರದ್ಧಾಭಕ್ತಿಯಿಂದ ಹಗಲಿರುಳು ದುಡಿಯುತ್ತಿದ್ದುದರಿಂದ ಭೂತಾಯಿ ಒಲಿದು ನನ್ನ ಆರ್ಥಿಕಮಟ್ಟ ಗಣನೀಯವಾಗಿ ಸುಧಾರಿಸಿದೆ.
 • ನನ್ನ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳು ಕೃಷಿಕಾರ್ಯಗಳಲ್ಲಿ ನೆರವಾಗುತ್ತಿರುವುದರಿಂದ ಕೂಲಿಯಾಳು ಖರ್ಚಿಲ್ಲ.
 • ಸೀತಾಫಲ ಮತ್ತಿತರೆ ಹಣ್ಣು ತರಕಾರಿಯಿಂದ ಹಸನಾದ ಸುಂದರ ಬದುಕನ್ನು ರೂಪಿಸಿಕೊಂಡಿದ್ದೇನೆ.
 • ಎಲ್ಲ ರೈತರು ಸರ್ಕಾರದ ಸಹಾಯ ಸೌಲಭ್ಯ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಮೈಮುರಿದು ದುಡಿದರೆ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು.
 • ಇದಕ್ಕೂ ಮುನ್ನ ಮಳೆಯಾಧಾರಿತ ಕೃಷಿಯಿಂದ ತೀವ್ರ ಬಡತನ ಕಾಡುತ್ತಿತ್ತು.
 • ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಮತ್ತು ಉಪವಾಸ ಬೀಳುವಂಥ ಪರಿಸ್ಥಿತಿಯಿತ್ತು ಎನ್ನುತ್ತಾರೆ ವೆಂಕಟರಾವ ಬಿರಾದಾರ.
 • ಇವರ ಸಂಪರ್ಕ ಸಂಖ್ಯೆ 9740485727.

ಕೃಷಿ ಮಾಡುವಾಗ ನಮ್ಮಲ್ಲಿ ಯೋಜನೆ ಬೇಕು. ಯಾವ ಭೂಮಿ, ಯಾವ ಹವಾಗುಣ, ಇಲ್ಲಿಗೆ ಹೊಂದುವ ಬೆಳೆ, ಜೊತೆಗೆ ತಜ್ಞರ ಸಲಹೆ ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡರೆ  ಯಶಸ್ಸು ಇದೆ.
ವರದಿ:   ಮತ್ತು  ಚಿತ್ರಗಳು. ಜಿ.ಚಂದ್ರಕಾಂತ,ನಿವೃತ್ತ ಉಪನಿರ್ದೇಶಕರು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ,ಕಲಬುರಗಿ

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!