15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!

by | Mar 6, 2020 | Water Conservation (ನೀರು ಸಂರಕ್ಷಣೆ)

ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ  15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು.

  •  ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ  ನೀರಿನ ಸಮಸ್ಯೆಯಿಂದ ಪಾರಾಗಬಹುದು.   
  • ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ. 
  • ಮಲ್ಚಿಂಗ್ ಶೀಟು ಹೊದಿಸಿದವರು ಈಗ ನೀರಿನ ಕೊರತೆಗೆ ತಲೆಬಿಸಿ ಮಾಡುತ್ತಿಲ್ಲ.
  • ಇರುವ ನೀರಿನಲ್ಲೇ  ಕೃಷಿ ಮಾಡಲು ಸಾಧ್ಯ.

ಸಸ್ಯ ಒಂದಕ್ಕೆ  ಬೇಕಾಗುವ ನೀರು ತುಂಬಾ ಕಡಿಮೆ. ಹೆಚ್ಚಿನ ನೀರು ನೆಲದಿಂದ ಆವಿಯಾಗಿಯೇ ನಷ್ಟವಾಗುವುದು. ಒಂದು ಸಣ್ಣ ಗಿಡಕ್ಕೆ  ಬಿಸಿಲಿನ ಅವಧಿಯಲ್ಲಿ ಪಾಲಿಥೀನ್ ಲಕೋಟೆಯನ್ನು ಹೊದಿಸಿ. ಅದರ ಬುಡ ಭಾಗವನ್ನು ಬಿಗಿಯಾಗಿ ಕಟ್ಟಿ. ಸಂಜೆ ಆದ ನಂತರ ಆ ಲಕೋಟೆಯಲ್ಲಿ ಸಂಗ್ರಹವಾದ ನೀರು ಎಷ್ಟು ಎಂದು ಗಮನಿಸಿ.ಅಷ್ಟೇ ನೀರು ಆ ಗಿಡಕ್ಕೆ ಬೇಕಾಗುವುದು.  

ಮಲ್ಚಿಂಗ್ ಶೀಟ್ ಬಳಕೆ:

  • ಶಿರಸಿಯ ಸಿದ್ದಾಪುರ ತಾಲೂಕು ಕ್ಯಾದಗಿಯ ಅರುಣ್ ಹೆಗಡೆ ಇವರು ತಮ್ಮ ತೋಟಕ್ಕೆ ಪೂರ್ತಿ ಮಲ್ಚಿಂಗ್ ಶೀಟು ಹೊದಿಸಿ  ಮೂರು ವರ್ಷ ಆಗಿದೆ.
  • ನೀರೇ ಉಣಿಸುತ್ತಿಲ್ಲ.
  • ಹಾಗೆಯೇ  ಪಕ್ಕದ ಹಳ್ಳಿ ಆಳುವಳ್ಳಿಯ ಬಿ ವಿ ಹೆಗಡೆಯವರು ‍ 6 ವರ್ಷದ  ಹಿಂದೆ ತೋಟದ ಪೂರ್ತಿ ಮಲ್ಚಿಂಗ್ ಶೀಟು ಹಾಕಿದ್ದು , ಅವರೂ ನೀರಾವರಿ ಬಿಟ್ಟಿದ್ದಾರೆ.
  • ಶಿರಸಿಯ ನೀರ್ನಳ್ಳಿ ಸೀತಾರಾಮ ಹೆಗಡೆಯವರು ಸಹ ಮಲ್ಚಿಂಗ್ ಶೀಟನ್ನು  ತೋಟದ ಪೂರ್ತಿ  ಹಾಕಿದ್ದಾರೆ.
  • ಅತೀ ಕಡಿಮೆ ನೀರು ಸಾಕಾಗುತ್ತದೆ ಎನ್ನುತ್ತಾರೆ.
  • ಶಿರಸಿಯಲ್ಲಿ ಅವರಲ್ಲದೆ  ಹಲವು ಜನ ಈಗ ಮಲ್ಚಿಂಗ್ ಶೀಟು ಹಾಕಿದ್ದುಂಟು.

ಹಲವಾರು ಜನ ಅಡಿಕೆ  ತೋಟಕ್ಕೂ ಮಲ್ಚಿಂಗ್ ಶೀಟು ಹೊದಿಸಿದ್ದಾರೆ. ಹೊಸನಗರದ  ಜಗದೀಶ್ ರಾವ್ ರವರು  ತಮ್ಮ ಅಡಿಕೆ  ಮರಗಳ ಬುಡಕ್ಕೆ  ಮಲ್ಚಿಂಗ್ ಶೀಟು ಹಾಕಿ  ಅದರಿಂದ ತುಂಬಾ ಪ್ರಯೋಜನ ಕಂಡುಕೊಂಡಿದ್ದಾರೆ.

ಅನುಕೂಲಗಳು:

  • ನೀರಿನ ಉಳಿತಾಯ, ಮಣ್ಣು ಕೊಚ್ಚಣೆ, ಫಲವತ್ತತೆ ನಾಶ,  ಮಣ್ಣು ಜನ್ಯ ರೋಗಗಳು, ಅತಿಯಾದ ಕಳೆ ಇತ್ಯಾದಿ ತೊಂದರೆಗಳಿಂದ ಪರಾಗಲು ಸೂಕ್ತ ವಿಧಾನ.
  • ಹೆಚ್ಚಿನ ಕಡೆ ಮಣ್ಣು ಸಪ್ಪೆಯಾಗಿಯೂ ಇಳುವರಿ ಕುಂಠಿತವಾಗುತ್ತದೆ.
  • ಹೀಗೆ ಮಾಡಿದರೆ ಆ ಸಮಸ್ಯೆ  ಇಲ್ಲ.
  • ಆಧುನಿಕ ತಾಂತ್ರಿಕತೆಗಳನ್ನು ಅದರಲ್ಲೂ ಮಲ್ಚಿಂಗ್ ಶೀಟು ಹೊದಿಸಿದಾಗ  ಮಳೆಗಾಲ -ಚಳಿಗಾಲ ಮತ್ತು ಬೇಸಿಗೆ ಕಾಲ ಈ ಮೂರೂ ಋತುಮಾನಗಳಲ್ಲಿ ನೆಲದ ತಾಪಮಾನವನ್ನು ಏಕಪ್ರಕಾರ ಉಳಿಸಿಕೊಂಡು ಸಸ್ಯ ಬೆಳೆವಣಿಗೆಗೆ  ಅನುಕೂಲಮಾಡಿಕೊಡಬಹುದು.
  •  ಖರ್ಚಿನ ಉಳಿತಾಯ, ನೀರಿನ ಉಳಿತಾಯ, ಉತ್ತಮ ಇಳುವರಿ ಮತ್ತು  ಕಳೆ ನಿರ್ವಹಣೆಗೆ ಹೊದಿಕೆ (malching sheet) ಹಾಕುವುದು ಸೂಕ್ತವೆಂದು ಕಂಡುಬಂದಿದೆ.
  • ಇದರಲ್ಲಿ ಮಣ್ಣು ಯಾವಾಗಲೂ ತೇವದಿಂದ ಬೆಚ್ಚಗಿರುತ್ತದೆ.
  • ಇದರಿಂದ ಬೇರು ಹೆಚ್ಚು ಬರುತ್ತದೆ.
Mulching to bottom of plant

ಬುಡಕ್ಕೆ ಹೊದಿಕೆ

  • ಮಣ್ಣಿಗೆ ಸೋಲರೈಸೇಶನ್ ಉಂಟಾಗಿ ಕೀಟ, ರೋಗ ಕಡಿಮೆಯಾಗುತ್ತದೆ.
  • ಕಳೆ ಬರುವುದಿಲ್ಲ. ನೀರು ಗಣನೀಯವಾಗಿ ಕಡಿಮೆ ಸಾಕಾಗುತ್ತದೆ.
  • ಗೊಬ್ಬರ ಪೋಲಾಗುವುದಿಲ್ಲ. ಸಸ್ಯ ಆರೋಗ್ಯ ಉತ್ತಮವಾಗುತ್ತದೆ.
  • ಒಂದು ಚದರ ಮೀಟರು ಪ್ಲಾಸ್ಟಿಕ್ ಹೊದಿಕೆ ಮಾಡಲು ಸುಮಾರು 3 ರೂ. ವೆಚ್ಚ ತಗಲುತ್ತದೆ. 
  • ಆದರೆ ಇದರಿಂದ ರೂ. 20ಕ್ಕೂ ಹೆಚ್ಚು ಪ್ರಯೋಜನವಾಗುತ್ತದೆ.

 ಇಲ್ಲಿ ಹನಿ ನೀರಾವರಿ ಮತ್ತು ಮಲ್ಚಿಂಗ್ ಶೀಟು ಒಂದೇ ನಾಣ್ಯದ ಎರಡು ಮುಖಗಳು.

  • ಯಾವುದೇ ಬೆಳೆಗಳು, ಉತ್ತಮವಾಗಿ ಬೇರು ಬಿಟ್ಟು  ಒಳ್ಳೆಯ ಫಸಲು ಕೊಡಬೇಕಿದ್ದರೆ  ಮಣ್ಣು ಅದಕ್ಕೆ ಅನುಗುಣವಾಗಿ ಇರಬೇಕು.
  • ಮಣ್ಣು ಬೆಚ್ಚಗಿದ್ದು , ಸದಾ ತೇವಾಂಶ ಇದ್ದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ.
  • ಇಳುವರಿಯೂ ಅಧಿಕವಾಗುತ್ತದೆ. ಸಸ್ಯಗಳ ಈ ಅವಶ್ಯಕತೆಯು ಪಾಲೀಶೀಟು ಹೊದಿಸಿದಾಗ ನೆರವೇರುತ್ತದೆ.
  • ಬಿತ್ತಿದ ಬೀಜಗಳೂ ಸಹ ಉತ್ತಮವಾಗಿ ಮೊಳೆಯುತ್ತವೆ.
  • ಇವು ಯು ವಿ  ಪ್ರತಿಭಂಧಕ ಶೀಟುಗಳಾಗಿದ್ದು ಬಿಸಿಲಿಗೆ ಹಾಳಾಗಲಾರವು.

 ವಿಲೇವಾರಿ:

  • ಪ್ಲಾಸ್ಟಿಕ್ ಮಲ್ಚಿಂಗ್ ಶೀಟು ಹೊದಿಸುವುದರಿಂದ ಅದರ ವಿಲೇವಾರಿ ಸಮಸ್ಯೆ ಉಂಟಾಗುತ್ತದೆ ನಿಜ.
  • ಅದಕ್ಕೆ  ಪರಿಹಾರ ಧೀರ್ಘ ಕಾಲ ಬಾಳ್ವಿಕೆ ಬರುವ ಶೀಟುಗಳನ್ನು ಬಳಸುವುದು. 
  • ಇದನ್ನು ಎಲ್ಲೆಂದರಲ್ಲಿ ಬಿಸಾಡುವುದು ಮಾಡದೆ  ಸುಟ್ಟು ಬೂದಿ ಮಾಡಿ ಬೆಳೆಗಳ ಬುಡಕ್ಕೆ ಹಾಕಿದರೆ ತೊಂದರೆ ಇಲ್ಲ.
  • ಪ್ಲಾಸ್ಟಿಕ್ ಗೋಣಿ ಚೀಲಗಳೂ ಸಹ ಮಲ್ಚಿಂಗ್  ಉದ್ದೇಶಕ್ಕೆ ಬಳಸಬಹುದಾಗಿದೆ. ಹಾಳಾಗುವ ಸೆಣಬಿನ ಚೀಲ, ರಟ್ಟು ಸಹ ತೇವಾಂಶ ರಕ್ಷಕ.
  • ಇದನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಹೀಗೆ ಬಳಸಿದರೆ ಬಿಸಿಲಿಗೆ ಅದು ಕರಗಿ ಮಣ್ಣಿನಲ್ಲಿ ಮಿಶ್ರಣವಾಗುತ್ತದೆ.
  • ಅನುಕೂಲ ಇದ್ದವರು ನೆಲದ ಮೇಲೆ ಅರ್ಧ ಅಡಿಯಷ್ಟು ಸಾವಯವ ತ್ಯಾಜ್ಯಗಳಾದ ತರಗೆಲೆ ಮುಂತಾದವುಗಳನ್ನು  ಹಾಸಿದರೆ  ಪಾಲಿಥೀನ್ ಶೀಟಿನ ಅಗತ್ಯ ಇರುವುದಿಲ್ಲ.

ಭವಿಷ್ಯದಲ್ಲಿ ನೀರು ಉಳಿಸಲು ಬೇಕಾಗುವ ಏಕಮಾತ್ರ ಉಪಾಯ ನೆಲದಿಂದ ಆವಿಯಾಗುವ ನೀರನ್ನು ತಡೆಯುವುದು. ಇದನ್ನು ಮಲ್ಚಿಂಗ್ ವಿಧಾನದ ಮೂಲಕ ಮಾಡಬಹುದು.

 
 

 
 
 
 

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!