ಆರೋಗ್ಯ ರಕ್ಷಕ ಸಾವಯವ ತರಕಾರಿಗಳು.
ಗಡ್ಡೆ ಗೆಣಸಿನ ಬೆಳೆ ಬಹಳ ಹಿಂದಿನದ್ದು. ಬಹುಷಃ ಮಾನವ ಬೇಯಿಸಿ ತಿನ್ನುವುದನ್ನು ಕಲಿಯುವ ಮುಂಚೆ ಕಂದ ಮೂಲಗಳನ್ನು ತಿಂದು ಬದುಕುತ್ತಿದ್ದರಂತೆ. ಇದರಷ್ಟು ಆರೋಗ್ಯಕರ ತರಕಾರಿ ಬೇರೊಂದಿಲ್ಲ. ಇದಕ್ಕೆ ರಾಸಾಯನಿಕಗಳ ಅಗತ್ಯವೇ ಇಲ್ಲ. ಸಂಪೂರ್ಣ ಸಾವಯವ ತರಕಾರಿ ಎಂದರೆ ಇದು. ಇವುಗಳನ್ನು ಮರೆತು ಹೋದ ತರಕಾರಿಗಳು ಎಂದು ಹೇಳಿದರೂ ತಪ್ಪಾಗಲಾರದು. ತಲೆಮಾರಿನಿದ ತಲೆಮಾರಿಗೆ ಬದಲಾವಣೆಯಾಗುವಾಗ ಕೆಲವು ಮರೆತು ಹೋಗುವ ವಿಚಾರಗಳಿರುತ್ತವೆ. ಅವುಗಳಲ್ಲಿ ಈ ಗಡ್ಡೆ ಗೆಣಸು ತರಕಾರಿಗಳ ಬೆಳೆ ಹಾಗೂ ಅಡುಗೆಯೂ ಸೇರಿದೆ. ಈ ತರಕಾರಿಗಳಲ್ಲಿ ಇರುವಷ್ಟು ಆರೋಗ್ಯ ಗುಣ…