ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಬ್ಲಾಕ್ ಆಗದಂತೆ ಮಾಡುವ ಸರಳ ವಿಧಾನ
ಬಹಳ ಜನ ರೈತರು ಡ್ರಿಪ್ ಮಾಡಿದರೆ ಅದು ಬ್ಲಾಕ್ ಆಗುತ್ತದೆ, ನೀರು ಸರಿಯಾಗಿ ಹೋಗದೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ. ಬ್ಲಾಕ್ ಆಗುವುದಕ್ಕೆ ಕಾರಣವನ್ನು ಗುರುತಿಸಿ ಅದಕ್ಕೆ ಬೇಕಾಗುವ ಸರಳ ಪರಿಹಾರಗಳನ್ನು ಮಾಡಿದರೆ ಅದು ಸಮಸ್ಯೆಯೇ ಆಗದು. ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದ ಕೆಲವು ಲವಣಗಳು ಸ್ವಲ್ಪ ಸ್ವಲ್ಪವೇ ಆಂಟಿಕೊಂಡು ನೀರು ಹರಿಯುವ ದ್ವಾರವನ್ನು ಮುಚ್ಚುತ್ತದೆ. ಇದು ಹೆಚ್ಚಿನವರು ಅನುಭವಿಸುವ ಸಮಸ್ಯೆ. ಈ ಲವಣಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸ್ವಚ್ಚತೆ ಮಾಡುತ್ತಿದ್ದರೆ ಆ ಸಮಸ್ಯೆಯಿಂದ ಪಾರಾಗಬಹುದು. ಮಳೆಗಾಲದಲ್ಲಿ ಯಾರೂ…