
ಆಷಾಢ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ- ಕುಂಭ ಮಾಸಕ್ಕೆ ಸ್ವಾಗತ.
ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ ಎನ್ನುತ್ತಾರೆ ಹಿರಿಯರು. ಇದರ ಅರ್ಥ ಕೃಷಿಕರಿಗೆ ಮಾತ್ರ ಅರ್ಥವಾಗಬಲ್ಲದು.ಮಕರ ಸಂಕ್ರಮಣ ಕಳೆದ ತರುವಾಯ ಎಲ್ಲವೂ ಹಚ್ಚ ಹಸುರು.ರೈತನ ಶ್ರಮಕ್ಕೆ ಹವಾಮಾನದ ಬೆಂಬಲ ದೊರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ. ಕೃಷಿ ಎಂಬ ವೃತ್ತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ಹಿರಿಯರು ತಿಳಿದಿದ್ದ ಕೆಲವು ಅನುಭವ ಸೂಕ್ಷ್ಮಗಳನ್ನು ಇಂದಿನ ವಿಜ್ಞಾನ ಅರ್ಥ ಬಿಡಿಸಿ ಜನತೆಗೆ ತಿಳಿಸಿದೆ. ಹಿರಿಯರ ಅನುಭವ ಇಂದಿನ ವಿಜ್ಞಾನಿಗಳ ತಿಳುವಳಿಕೆಗಿಂತ ಇಂದಿಗೂ ಮುಂದೆಯೇ ಇದೆ. ಆಟಿ (ಆಷಾಢ ಮಾಸ) ಕಳೆದರೆ …