
ಹವಾಮಾನ ಬದಲಾವಣೆಯಿಂದ ಅಂತರ್ಜಲ 3 ಪಟ್ಟು ಕುಸಿತವಾಗಲಿದೆ!
ಹವಾಮಾನ ಬದಲಾವಣೆ ಎಂದರೆ ಏನು ಎಂಬುದರ ಸಾಧಾರಣ ಚಿತ್ರಣ ನಮ್ಮ ಗಮನಕ್ಕೆ ಈಗಾಗಲೇ ಬಂದಾಗಿದೆ. ಇನ್ನು ಇದರ ಪರಿಣಾಮವನ್ನು ಒಂದೊಂದಾಗಿ ನಮ್ಮ ಅನುಭವಕ್ಕೆ ಬರಲಿದೆ. ಈ ಸನ್ನಿವೇಶದಿಂದಾಗಿ ಎಲ್ಲದಕ್ಕಿಂತ ಮುಂಚೆ ಅಂತರ್ಜಲದ ಮೇಲಿನ ಒತ್ತಡ ಹೆಚ್ಚಾಗಿ ಅದು ಭಾರೀ ಕುಸಿತವಾಗುವ ಸಂಭವ ಇದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವುದು ಅಥವಾ ಮಳೆಯ ಹಂಚಿಕೆ ವ್ಯತ್ಯಾಸವಾಗುವುದು ಮಾಮೂಲಿಯಾಗುತ್ತದೆ. ಇದೆಲ್ಲದ ಪರಿಣಾಮ ಕುಡಿಯಲು ಮತ್ತು ಕೃಷಿಗೆ ನೀರಿನ ಕೊರೆತೆ. ನೀರಿಗಾಗಿ ಅಂತರ್ಜಲಕ್ಕೆ ಕೈಹಾಕಿ ಅದನ್ನು ಇನ್ನೂ ಇನ್ನೂ ಬರಿದು ಮಾಡಬೇಕಾಗುತ್ತದೆ….