
ಮಣ್ಣಿನ ಸ್ನೇಹಿತ -ಬಯೋ ಚಾರ್.
ಮಣ್ಣಿಗೆ ಒಂದು ಜೀವ ಚೈತನ್ಯ ಎಂಬುದಿದೆ. ಮಣ್ಣಿನ ಜೀವಾಣುಗಳಿಗೆ ಬದುಕಲು ಸೂಕ್ತವಾದ ವಾತಾವರಣ ಬೇಕು. ಅದೇ ರೀತಿಯಾಗಿ ತೇವಾಂಶ ಭರಿತ ತಂಪಾದ ವಾತಾವರಣವೂ ಬೇಕು. ಇದನ್ನು ಒದಗಿಸಿಕೊಡುವಂತದ್ದೇ ಬಯೋ ಚಾರ್. ಅರೆ ಸುಟ್ಟ ಕೃಷಿ ತ್ಯಾಜ್ಯಗಳು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ, ಮಣ್ಣಿಗೆ ಜೀವ ಚೈತನ್ಯವನ್ನು ಕೊಡುತ್ತದೆ. ಮಣ್ಣಿಗೆ ಒಂದಷ್ಟು ತರಗೆಲೆ ಹಾಕಿ. ಅದು ಮಣ್ಣಿನಲ್ಲಿರುವ ಅಸಂಖ್ಯಾತ ಜೀವಾಣುಗಳ ಸಹಯೋಗದಿಂದ ಕರಗಿ ಮಣ್ಣಾಗುತ್ತದೆ. ಹೆಚ್ಚೆಂದರೆ ವರ್ಷ ತನಕ ಇರಬಹುದು. ಅದೇ ರೀತಿಯಲ್ಲಿ ಒಂದು ಕಟ್ಟಿಗೆಯನ್ನು ಹಾಕಿದರೂ…