ಮಣ್ಣಿಗೆ ಒಂದು ಜೀವ ಚೈತನ್ಯ ಎಂಬುದಿದೆ. ಮಣ್ಣಿನ ಜೀವಾಣುಗಳಿಗೆ ಬದುಕಲು ಸೂಕ್ತವಾದ ವಾತಾವರಣ ಬೇಕು. ಅದೇ ರೀತಿಯಾಗಿ ತೇವಾಂಶ ಭರಿತ ತಂಪಾದ ವಾತಾವರಣವೂ ಬೇಕು. ಇದನ್ನು ಒದಗಿಸಿಕೊಡುವಂತದ್ದೇ ಬಯೋ ಚಾರ್. ಅರೆ ಸುಟ್ಟ ಕೃಷಿ ತ್ಯಾಜ್ಯಗಳು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ, ಮಣ್ಣಿಗೆ ಜೀವ ಚೈತನ್ಯವನ್ನು ಕೊಡುತ್ತದೆ.
- ಮಣ್ಣಿಗೆ ಒಂದಷ್ಟು ತರಗೆಲೆ ಹಾಕಿ. ಅದು ಮಣ್ಣಿನಲ್ಲಿರುವ ಅಸಂಖ್ಯಾತ ಜೀವಾಣುಗಳ ಸಹಯೋಗದಿಂದ ಕರಗಿ ಮಣ್ಣಾಗುತ್ತದೆ.
- ಹೆಚ್ಚೆಂದರೆ ವರ್ಷ ತನಕ ಇರಬಹುದು. ಅದೇ ರೀತಿಯಲ್ಲಿ ಒಂದು ಕಟ್ಟಿಗೆಯನ್ನು ಹಾಕಿದರೂ ಸಹ ಅದು ಒಂದೆರದು ವರ್ಷದಲ್ಲಿ ಕರಗಿ ಮಣ್ಣಾಗಿ ಪರಿವರ್ತನೆಯಾಗುತ್ತದೆ.
- ಆದರೆ ಬಯೋ ಚಾರ್ ಎಂಬ ಒಂದು ವಸ್ತು ಸಾವಿರಾರು ವರ್ಷಗಳಾದರೂ ಕರಗದೆ ಹಾಗೇ ಉಳಿಯುತ್ತದೆ.
- ಮಣ್ಣಿನಲ್ಲಿ ಗಾಳಿಯಾಡುವಿಕೆಯನ್ನು ಹೆಚ್ಚಿಸಿ ಮಣ್ಣಿನ ಜೈವಿಕ ಗುಣಧರ್ಮವನ್ನು ಹೆಚ್ಚಿಸಿಕೊಡುತ್ತದೆ.
ಬಯೋಚಾರ್ ನಿಂದ ಪ್ರಯೋಜನ:
- ಬಯೋಚಾರ್ ಎಂಬುದು ಮಣ್ಣಿನ ಸ್ಥಿತಿಗತಿ ಸುಧಾರಣೆಗೆ ಇರುವಂತಹ ವಸ್ತು.ಮಣ್ಣು ಎಂಬುದು ನಮ್ಮ ಬೇಸಾಯ ಕ್ರಮಗಳು ಮತ್ತು ಕೆಲವು ರಾಸಾಯನಿಕಗಳ ಬಳಕೆಯಿಂದ ಗುಣಧರ್ಮಗಳು ವ್ಯತ್ಯಾಸವಾಗುವುದು ಸಹಜ.
- ಇದನ್ನು ಸರಿಪಡಿಸುವಲ್ಲಿ ಬಯೋಚಾರ್ ಗಳು ನೆರವಾಗುತ್ತದೆ.
- ಇದರ ಬಳಕೆಯಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಳವಾಗುತ್ತದೆ.
- ಯಾವುದೇ ರಾಸಾಯನಿಕ ವಿಷಾಂಶಗಳು ( Toxic eliments) ವಿಭಜನೆಗೊಳ್ಳಲು ಇದು ಸಹಕಾರಿಯಾಗುತ್ತದೆ.
- ಬೆಳೆಗಳಿಗೆ ನಾವು ಬಳಸುವ ಪೋಷಕಾಂಶಗಳು ವಿನಿಮಯಕ್ಕೊಳಗಾಗಲು ಮತ್ತು ಸಮರ್ಪಕವಾಗಿ ಲಭ್ಯವಾಗಲು ಬಯೋಚಾರ್ ಗಳು ನೆರವಾಗುತ್ತದೆ.
- ಇದೆಲ್ಲವೂ ಧೀರ್ಘ ಕಾಲಿಕ ಪರಿಣಾಮಗಳಾಗಿರುತ್ತವೆ,
ಬಯೋಚಾರ್ ಹೊಸತಲ್ಲ:
- ಬಯೋ ಚಾರ್ ಗೂ ನಮ್ಮ ಸಾಂಪ್ರದಾಯಿಕ ಸುಡುಮಣ್ಣಿಗೂ ಅಲ್ಪ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇದೆ.
- ಕ್ರಮಪ್ರಕಾರದ ಸುಡುಮಣ್ಣು ಎಂದರೆ ಅದಕ್ಕಾಗಿ ಬಳಸಿದ ಸಾವಯವ ತ್ಯಾಜ್ಯಗಳಾಗಲೀ, ಮಣ್ಣಾಗಲೀ ಸುಡಬಾರದು. ಬರೇ ಬಿಸಿಯಾಗಿ ಅದರ ತೇವಾಂಶ ಹೋಗಬೇಕು.
- ಬಹುತೇಕ ಸಾವಯವ ತ್ಯಾಜ್ಯಗಳು ಕರಕಲಾಗಬೇಕೇ ಹೊತರು ಸುಡಬಾರದು.
- ಅದಕ್ಕಾಗಿ ಸುಡುಮಣ್ಣು ಮಾಡುವಾಗ ಆಗಾಗ ಅದನ್ನು ಬಿಡಿಸಿ ಸುಟ್ಟು ಬೂದಿಯಾಗದಂತೆ ಮಾಡಲಾಗುತ್ತದೆ.
ಅಮೇಜಾನ್ ಜಲಾನಯನ ಪ್ರದೇಶಗಳಲ್ಲಿ ಈ ವಿಧಾನ ಸಾವಿರಾರು ವರ್ಷಗಳ ಹಿಂದೆಯೇ ಚಾಲ್ತಿಯಲ್ಲಿತ್ತಂತೆ. ಅಲ್ಲಿನ ದ್ವೀಪವೊಂದರಲ್ಲಿ ಸ್ಥಳೀಯ ಜನರು ಅಡುಗೆಗೆ ಬೆಂಕಿ ಮಾಡಿ ಉದ್ದೇಶ ಪೂರ್ವಕವಾಗಿ ಇದ್ದಿಲನ್ನು ಮಣ್ಣಿಗೆ ಸೇರಿಸುತ್ತಿದ್ದರಂತೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ತಿಳಿಯಲಾಗುತ್ತಿತ್ತು. ಈ ಅರೆ ಸುಟ್ಟ ಇದ್ದಿಲಿನಲ್ಲಿ ಇಂಗಾಲದ ಅಂಶ ಹೇರಳವಾಗಿರುವ ಕಾರಣ ಅಲ್ಲಿ ಬೆಳೆದ ಬೆಳೆಗಳಲ್ಲಿ ಬರಪೂರ ಇಳುವರಿ ಬರುತ್ತಿತ್ತಂತೆ.
- ಮಾನವ ಶಾಸ್ತ್ರ ಅಧ್ಯಯನಕಾರರ ಪ್ರಕಾರವೂ ಇಂಥಹ ಅರೆಸುಟ್ಟ ವಸ್ತು ಸೇರಲ್ಪಟ್ಟ ಮಣ್ಣಿನಲ್ಲಿ ಅತ್ಯಧಿಕ ಫಲವತ್ತತೆ ಮತ್ತು ಇಂಗಾಲದ ಅಂಶ ಇರುತ್ತದೆ ಎಂಬ ದಾಖಲೆ ಇದೆ.
- ಬ್ರೆಜಿಲ್ ನಲ್ಲಿ ಬರೇ ಈ ಮಣ್ಣನ್ನು ಅಗೆದು ಕುಂಡಗಳಲ್ಲಿ ಬೆಳೆಸುವ ಸಸ್ಯಗಳಿಗೆ ಬೇಕಾಗುವ ಫಲವತ್ತಾದ ಮಣ್ಣಾಗಿ ಮಾರಾಟ ಮಾಡುವುದೂ ಇದೆಯಂತೆ.
- ಇದನ್ನು ಮಣ್ಣಿನ ಅತ್ಯುತ್ತಮ ಸ್ನೇಹಿತ ಎಂದೇ ಬಣ್ಣಿಸಲಾಗಿದೆ.
- ಇದರ ಭೌತಿಕ ಮತ್ತು ರಾಸಾಯನಿಕ ಗುಣವು, ತೇವಾಂಶ, ಪೋಷಕಾಂಶಗಳು ಮತ್ತು ಕೃಷಿ ರಾಸಾಯನಿಕಗಳನ್ನು ಆಕರ್ಷಿಸಲು ಮತ್ತು ಹಿಡಿದಿಡುವ ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತದೆ.
- ಸಾರಜನಕ ಮತ್ತು ರಂಜಕದಂತಹ ಪೋಷಕಾಂಶಗಳನ್ನು ಹಿಡಿದಿಡಲು ಸಹಕರಿಸುತ್ತದೆ.
- ಸಾರಜನಕವು ಸಾಮಾನ್ಯ ಮಣ್ಣಿನಲ್ಲಿ ಇಳಿದು ನಷ್ಟವಾಗುತ್ತದೆ. ಇದು ಅದನ್ನು ತಡೆಯುತ್ತದೆ.
- ಬಯೋಚಾರ್ ಅನಿಲಗಳನ್ನು ಸಹ ಹೊಂದಿದೆ.
ಇತ್ತೀಚಿನ ಸಂಶೋಧನೆಗಳಾ ಪ್ರಕಾರ ಬಯೋಚಾರ್ ನಿಂದ ಪುಷ್ಟೀಕರಿಸಿದ ಮಣ್ಣು, ಇಂಗಾಲದ ಡೈಆಕ್ಸೈಡ್ (Co 2) ಮತ್ತು ನೈಟ್ರಸ್ ಆಕ್ಸೈಡ್ (N 2 O) ಹೊರಸೂಸುವಿಕೆಯನ್ನು 50-80% ರಷ್ಟು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. N2O ಗಮನಾರ್ಹ ಹಸಿರುಮನೆ ಅನಿಲವಾಗಿದೆ, ಇದು CO2 ಗಿಂತ 310 ಪಟ್ಟು ಹೆಚ್ಚು ಪ್ರಬಲವಾಗಿದೆ.
ಬಯೋ ಚಾರ್ ಮಾಡುವುದು ಕಷ್ಟವಿಲ್ಲ:
- ಕಟ್ಟಿಗೆ ತರಗೆಲೆ ಯಾವುದೇ ಒಣ ವಸ್ತುವನ್ನು ಉರಿಸಿದಾಗ (300 ರಿಂದ 700 ಡಿಗ್ರಿ ಉಷ್ಣತೆಯಲ್ಲಿ) ಅದರಲ್ಲಿ ಮರದ ಅನಿಲ ಬಿಡುಗಡೆಯಾಗುತ್ತದೆ.
- ಆಗ ಅದಕ್ಕೆ ಬೆಂಕಿ ಹತ್ತಿಕೊಳುತ್ತದೆ. ಈ ಬೆಂಕಿ ಹತ್ತಿಕೊಂಡು ಉರಿಯುವ ಸಮಯದಲ್ಲಿ ಆಮ್ಲಜನಕದ ಸರಬರಾಜನ್ನು ನಿಲ್ಲಿಸಿದರೆ ಅದರ ಉರಿಯುವಿಕೆ ಸ್ಥಗಿತಗೊಳೂತ್ತದೆ.
- ಅದನ್ನು ಹೊರ ತೆಗೆದು ಮತ್ತೆ ಆಮ್ಲ ಜನಕದ ಸಹಯೋಗದಿಂದ ಉರಿಯದಂತೆ ನೀರನ್ನು ಚಿಮುಕಿಸಿದಾಗ ಅದು ಬಯೋ ಚಾರ್ ಅಗಿ ಪರಿವರ್ತನೆಯಾಗುತ್ತದೆ.
ಇದನ್ನು ಮಾಡಲು ಈಗ ಸರಳ ಸಾಧನಗಳು ಲಭ್ಯವಿದೆ. ಹೆಚ್ಚಿನ ಬಿಸಿಯಲ್ಲಿ ಇದು ವೇಗವಾಗಿ ಬಯೋಚಾರ್ ತಯಾರಾಗುವಂತೆ ಮಾಡುತ್ತದೆ. ಇದನ್ನು ಸಾಗರದ ಬಂದಗದ್ದೆಯ ಮಥನ ಹೋಮ್ ಇಂಡಸ್ಟ್ರೀಸ್ ಇವರು ತಯಾರಿಸಿದ್ದಾರೆ. ಕೇವಲ 1 ರಿಂದ 1.5 ಗಂಟೆಯಲ್ಲಿ ಬಯೋ ಚಾರ್ ಉತ್ಪಾದನೆ ಮಾಡಬಹುದು. ಯಾವುದೇ ಬಿಸಿಯ ತಗಲುವಿಕೆಯ ಅಪಾಯದ ಅಂಜಿಕೆ ಇಲ್ಲ.
- ಸಾಗರದ ಸೊರಬ ತಾಲೂಕಿನ ತಂಡಿಗೆಯಲ್ಲಿರುವ ದೀಪಕ್ ಇವರು ಈ ಬಯೋಚಾರ ಅನ್ನು ಕಳೆದ ಎರಡು ವರ್ಷಗಳಿಂದ ತಯಾರಿಸಿ ಬಳಸುತ್ತಿದ್ದು,
- ಇದು ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗೆ ಅನುಕೂಲಕರ. ನೀರು ಹಿಡಿದಿಟ್ಟುಕೊಳ್ಳುತ್ತದೆ.
- ಮಣ್ಣಿನಲ್ಲ್ಲಿ ಸಾಕಷ್ಟು ಸಾವಯವ ಇಂಗಾಲ ಉಂಟಾಗಿ ಫಲವತ್ತತೆ ಹೆಚ್ಚಳವಾಗಿ ಇಳುವರಿ ಹೆಚ್ಚುತ್ತದೆ ಎನ್ನುತ್ತಾರೆ.
ತೆಂಗಿನ ಕಾಯಿಯ ಗೆರಟೆಯ ಚಾರ್ಕೋಲ್ ಮಾಡುವುದು ಇದೇ ವಿಧಾನದಲ್ಲಿ. ದೊಡ್ಡ ದೊಡ್ಡ ಪ್ರಮಾಣದಲ್ಲಿ ಮಾಡುವ ವ್ಯವಸ್ಥೆಗಳೂ ಇವೆ. ಕೆಲವು ಸಾಧನಗಳಲ್ಲಿ ಮರದ ಎಣ್ಣೆಯನ್ನೂ ಸಹ ಸಂಗ್ರಹಿಸುವ ವ್ಯವಸ್ಥೆ ಇದೆ. ಇದು ಕೃಷಿಕರಿಗೆ ಅನುಕೂಲವಾಗುವ ಒಂದು ವ್ಯವಸ್ಥೆ.
end of the article: ———————————————————————-
search words: biochar# half burnt agriculture waste # Soil conditioner# Carbon material for soil conditioning # CN ratio# soil Microbes# soil amendment#