ಹೊಲದಲ್ಲಿ ಅಣಬೆ ಯಾಕೆ ಬೆಳೆಯುತ್ತದೆ?  ಕೃಷಿಗೆ ಇದರ ಲಾಭ ಏನು?

ಹೊಲದಲ್ಲಿ ಯಾಕೆ ಅಣಬೆ ಯಾಕೆ ಬೆಳೆಯುತ್ತದೆ? ಅದರಿಂದ ಕೃಷಿಗೆ ಲಾಭ ಏನು?

ನಾವೆಲ್ಲ ಮಳೆಗಾಲದಲ್ಲಿ ನೆಲದಲ್ಲಿ, ಮರದ ದಿಮ್ಮಿಗಳಲ್ಲಿ, ಗೊಬ್ಬರದಲ್ಲಿ ಹಾಗೆಯೇ ಎಲ್ಲಾ ನಮೂನೆಯ ಸಾವಯವ ವಸ್ತುಗಳಲ್ಲಿ ಅಣಬೆ ಬೆಳೆಯುವುದನ್ನು ಕಂಡಿದ್ದೇವೆ. ಈ ಅಣಬೆಗಳು ರೈತನಗೆ ಹೇಗೆ ಆಪ್ತ ಮಿತ್ರಗೊತ್ತೇ? ಎಲ್ಲರೂ ಎರೆಹುಳು ರೈತನ ಮಿತ್ರ ಎನ್ನುತ್ತೇವೆ. ಎರೆಹುಳುವಿಗಿಂತಲೂ  ಪ್ರಾಮುಖ್ಯವಾದ ಆಪ್ತಮಿತ್ರ ಎಂದರೆ ಅಣಬೆಗಳು. ಇವು ರೈತನ ಕೃಷಿಗೆ ಏನೆಲ್ಲಾ ನೆರವನ್ನು ನೀಡುತ್ತವೆ. ಇವುಗಳ ಅಸ್ತಿತ್ವ ಇಲ್ಲದಿದ್ದರೆ ಏನಾಗಬಹುದು ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ.

ಶಿಲೀಂದ್ರಗಳು ,ಅಣಬೆಗಳು  ಏಕಕೋಶ ಮತ್ತು ಸಂಕೀರ್ಣವಾದ ಬಹುಕೋಶೀಯ ಜೀವಿಗಳು. ಇವುಗಳಲ್ಲಿ ಪತ್ತೆ ಹಚ್ಚಿದ ಜಾತಿಗಳಿಗಿಂತ (ಸುಮಾರು  1,00,000) ಇನ್ನೂ ಹೆಚ್ಚು ಪತ್ತೆ ಹಚ್ಚಲಿಕ್ಕಿದೆ ಎನ್ನುತ್ತಾರೆ ವಿಜ್ಞಾನಿಗಳು. ಇವುಗಳು ಜೀವ ವೈವಿಧ್ಯದ ಪ್ರಮುಖ ಭಾಗವಾಗಿದೆ. ಪರಿಸರದಲ್ಲಿ ಸಸ್ಯವರ್ಗ , ಇಂಗಾಲ ಮತ್ತು ಪೋಷಕಾಂಶಗಳ ಪುನರ್ಬಳಕೆಗೆ ಸಹಕರಿಸುವ ಜೀವಿಗಳು. ಈ ಕ್ರಿಯೆಯಿಂದಾಗಿ ಮಣ್ಣಿನ ಪೋಷಕಾಂಶ ವೃದ್ದಿಗೆ ಇವು ಪ್ರಮುಖ ಚಾಲಕ ಶಕ್ತಿಯೆನಿಸುತ್ತದೆ. ಶಿಲೀಂದ್ರಗಳು ಅಥವಾ ಪೋಷಕಾಂಶಗಳನ್ನು ಸಸ್ಯಗಳಿಗೆ ಒದಗುವಂತೆ ಪರಿವರ್ತಿಸಿಕೊಡಲು ನೆರವಾಗುತ್ತವೆ.ಶಿಲೀಂದ್ರಗಳು ಕೊಳೆತಾಗ ಅದರಲ್ಲಿ  ಸಸ್ಯ  ಮತ್ತು ಪ್ರಾಣಿ ಅವಶೇಶಗಳನ್ನು ಒಡೆಯುತ್ತದೆ. ಪೋಷಕಾಶಗಳಾದ ಸಾರಜನಕ ಸ್ಥಿರೀಕರಣ ರಂಜಕ ಚಲನೆಯನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಇವು ಸಹಕಾರಿ.

  • ಅಣಬೆ, ನಾಯಿಕೊಡೆ ಶಿಲೀಂದ್ರ, ಫಂಗಸ್ ಎಂಬುದು ಒಂದು ಸೂಕ್ಷ್ಮ ಜೀವಿ.
  • ಶಿಲೀಂದ್ರ ಸಾಮ್ರಾಜ್ಯದಲ್ಲಿ  ಸುಮಾರು 9 ವಂಶಗಳನ್ನು ಗುರುತಿಸಲಾಗಿದೆ.
  • ಅವುಗಳಲ್ಲಿ ಲಕ್ಷಾಂತರ ಜಾತಿಗಳಿವೆ. ಕೆಲವು ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ಕಾಣಬಹುದಾದಷ್ಟು ಚಿಕ್ಕದಿರುತ್ತವೆ.
  • ಕೆಲವು ರೋಗಕಾರಕಗಳು, ಮತ್ತೆ ಕೆಲವು ರೋಗ ನಿಯಂತ್ರಕಗಳೂ ಇವೆ.
  • ಕೆಲವು ಔಷಧೀಯವೂ ಇವೆ.
  • ನಾವು ಇಲ್ಲಿ ಪ್ರಸ್ತಾಪಿಸಲಿರುವ ರೈತ ಮಿತ್ರ ಅಣಬೆಗಳು ಭೂ ವಾಸಿಗಳಾಗಿದ್ದು, ಭೂಮಿಯ ಮೇಲ್ಮೈಯಲ್ಲಿ ಕಣ್ಣಿಗೆ ಕಾಣುವ ತರಹ ಸಾವಯವ ವಸ್ತುಗಳಲ್ಲಿ ಕೊಳೆತಿನಿಗಳಾಗಿ ಬದುಕುವಂತವುಗಳು.
  • ನಾವೆಲ್ಲಾ ತೋಟದಲ್ಲಿ,ಕಾಡುಗಳಲ್ಲಿ ಗುಡ್ಡ ಬೆಟ್ಟಗಳಲ್ಲಿ ಅಲ್ಲಲ್ಲಿ ಕೆಲವು ನಮೂನೆಯವುಗಳು ಹುಟ್ಟುವುದು, ಬೆಳೆಯುವುದು, ಹಾಗೆಯೇ ಸಾಯುವುದನ್ನು ಕಂಡಿದ್ದೇವೆ.
  • ಇವು ಯಾಕೆ ಹುಟ್ಟುತ್ತವೆ. ಹೇಗೆ ಬೆಳೆಯುತ್ತವೆ. ಇದರ ಹುಟ್ಟು ಮತ್ತು ಬೆಳವಣಿಗೆಗೆ ಕಾರಣ ಏನು, ಇವುಗಳಿಂದ ಕೃಷಿಕರಾದ ನಮಗೆ ಪ್ರಯೋಜನ ಏನು ಒಂದು ವೇಳೆ ಇಂತಹ ಇವುಗಳು ಇಲ್ಲದೆ ಹೋದರೆ ಏನಾಗುತ್ತಿತ್ತು ಎಂಬುದರ ಬಗ್ಗೆ ತಿಳಿಯೋಣ.
ಭೂಮಿಯ ಮೇಲ್ಮೈಯಲ್ಲಿ ಕಣ್ಣಿಗೆ ಕಾಣುವ ತರಹ ಸಾವಯವ ವಸ್ತುಗಳಲ್ಲಿ ಕೊಳೆತಿನಿಗಳಾಗಿ ಬದುಕುವಂತವುಗಳು
ಭೂಮಿಯ ಮೇಲ್ಮೈಯಲ್ಲಿ ಕಣ್ಣಿಗೆ ಕಾಣುವ ತರಹ ಸಾವಯವ ವಸ್ತುಗಳಲ್ಲಿ ಕೊಳೆತಿನಿಗಳಾಗಿ ಬದುಕುವಂತವುಗಳು

ಸಾವಯವ ವಸ್ತುಗಳನ್ನು ಜೀರ್ಣಿಸಿಕೊಡುತ್ತವೆ:

  • ಅಣಬೆಗಳ ಆಶ್ರಯ ವಸ್ತು ಎಂದರೆ ಸಾವಯವ ವಸ್ತುಗಳು.
  • ನಿರ್ಜೀವ ಮರಮಟ್ಟು, ಸೊಪ್ಪು, ಇತ್ಯಾದಿಗಳಲ್ಲಿ ಇವು ಆಶ್ರಯಿಸಿ, ಅನುಕೂಲ ಸ್ಥಿತಿ ಒದಗಿಬಂದಾಗ ಅಲ್ಲಿ ಮೊಳಕೆಯೊಡೆಯುತ್ತವೆ.
  • ಯಾವುದೆ ಒಂದು ಸಾವಯವ ವಸ್ತು ತೇವಾಂಶದ ಸೆಳೆತಕ್ಕೆ ಒಳಗಾದಾಗ ಅದರಲ್ಲಿ ಶಿಲೀಂದ್ರಗಳು ಹುಟ್ಟಿಕೊಳ್ಳುತ್ತವೆ. 
  • ತೇವದ ಅಂಶ ಹೆಚ್ಚಾದರೆ ಅದರಲ್ಲಿ ಅವುಗಳ ಸಂತಾನಾಭಿವೃದ್ದಿಯಾಗುತ್ತಾ ಇರುತ್ತದೆ. 
  • ಅದೇ ಕಾರಣಕ್ಕೆ ಮಳೆಗಾಲದಲ್ಲಿ ಹೆಚ್ಚಿನ ಕಡೆ ಹೆಚ್ಚಿನ ಪ್ರಮಾಣದಲ್ಲಿ  ಹುಟ್ಟುವುದು.
  • ನೆಲಕ್ಕೆ ಬಿದ್ದ, ಅಥವಾ ಜೀವ ಕಳೆದುಕೊಂಡ ಯಾವುದೇ ಸಾವಯವ ವಸ್ತು ಇದ್ದರೂ ಅದನ್ನು ಮೊದಲು ಆಶ್ರಯಿಸುವುದು ಶಿಲೀಂದ್ರ ಬೀಜಗಳು.
  • ಹಿತಮಿತವಾದ ತೇವಾಂಶಕ್ಕೆ ಒಳಪಟ್ಟರೆ ಬರಿಕಣ್ಣಿಗೆ ಕಾಣದಂತೆ ಶಿಲೀಂದ್ರಗಳು ಅದರಲ್ಲಿ  ಹುಟ್ಟಿಕೊಳ್ಳುತ್ತವೆ.
  • ಇದನ್ನು ನಾವು ಬೂಸ್ಟ್ ಎಂದು ಕರೆಯುತ್ತೇವೆ.
  • ತೇವಾಂಶ ಹೆಚ್ಚು  ಲಭ್ಯವಾದಾಗ  ಕಣ್ಣಿಗೆ ಕಾಣುವಂತೆ ಬೆಳೆದಿರುತ್ತವೆ. ಕಳಿಯಿಸುವ ಕ್ರಿಯೆಯಲ್ಲಿ ಭಾಗಿಯಾಗುವ ನೂರಾರು ನಮೂನೆಯಗಳು ಇವೆ.
  • ಕೆಲವು ಸಣ್ಣದಾಗಿಯೂ ಕೆಲವು ಸ್ವಲ್ಪ ದೊಡ್ಡದಾಗಿಯೂ, ಕೆಲವು ಉಂಡೆಯಾಕಾರದಲ್ಲೂ.
  • ಇನ್ನು ಕೆಲವು ಕಡ್ಡಿಯಾಕಾರದಲ್ಲೂ ವೈವಿಧ್ಯಮಯವಾಗಿ ಸುಂದರವಾಗಿ  ಇರುತ್ತವೆ.
  • ಇವೆಲ್ಲದರ ತಳಿ ಬೇರೆ ಬೇರೆ ಇರುತ್ತದೆ. ಎಲ್ಲಾ ನಮೂನೆಯಗಳು ಸಾವಯವ ವಸ್ತುವನ್ನು ಮೊದಲಾಗಿ ಕೊಳೆಯಲು ಸಹಕರಿಸುವವುಗಳು.
  • ಅವುಗಳಿಗೆ ಬದುಕಲು ಈ ಸಾವಯವ ವಸ್ತುಗಳು ಆಶ್ರಯವಾದರೆ, ಇವು ಆಶ್ರಯ ಪಡೆದು ಬದುಕಿದ ಕಾರಣದಿಂದ ಅದು ಮೆದುವಾಗಿ ಉಳಿದ ಜೀವಿಗಳಿಗೆ  ಆಹಾರವಾಗಲು ಅನುಕೂಲ.
  • ಎರೆಹುಳು ಹಾಗೂ ಇನ್ನಿತರ ಸಾವಯವ ವಸ್ತುಗಳನ್ನು ಅವು ಜೀರ್ಣಿಸಿಕೊಳ್ಳುವ ಹಂತಕ್ಕೆ ತರುವವುಗಳು ಅಣಬೆಗಳು.
ಸಾವಯವ ವಸ್ತುಗಳು. ನಿರ್ಜೀವ ಮರಮಟ್ಟು, ಸೊಪ್ಪು, ಇತ್ಯಾದಿಗಳಲ್ಲಿ ಇವು ಆಶ್ರಯಿಸಿ ಈ ಅಣಬೆಗಳು ಹುಟ್ಟಿಕೊಳ್ಳುತ್ತವೆ
ಸಾವಯವ ವಸ್ತುಗಳು. ನಿರ್ಜೀವ ಮರಮಟ್ಟು, ಸೊಪ್ಪು, ಇತ್ಯಾದಿಗಳಲ್ಲಿ ಇವು ಆಶ್ರಯಿಸಿ ಈ ಅಣಬೆಗಳು ಹುಟ್ಟಿಕೊಳ್ಳುತ್ತವೆ

ಪೋಷಕಾಂಶಗಳಾಗಿ ಅಣಬೆಗಳು:

  • ಅಣಬೆಗಳು ಬೆಳೆದ ಮಣ್ಣು ಪೊಷಕಾಂಶ ಸಮೃದ್ಧ ಎಂದರೆ ತಪ್ಪಾಗಲಾರದು.
  • ಇವುಗಳಿಗೆ ಮಣ್ಣಿನಲ್ಲಿರುವ ಮತ್ತು ಸಾವಯವ ವಸ್ತುಗಳಲ್ಲಿ ಅಡಕವಾಗಿರುವ ಪೋಷಕಾಂಶಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡಿಕೊಡುವ ಶಕ್ತಿ ಇದೆ.
  • ಮಣ್ಣಿನ ಫಲವತ್ತತೆ ಎಂದರೆ ಅದರಲ್ಲಿ  ಸಾವಯವ ಇಂಗಾಲದ ಅಂಶ ಹೆಚ್ಚಾಗುವುದು. 
  • ಇವುಗಳು ಮಣ್ಣಿನ ಆಹಾರ ಜಾಲದ ಮೂಲಕ ಇಂಗಾಲವನ್ನು ಮಣ್ಣಿನಲ್ಲಿ ಹೆಚ್ಚಿಸಿಕೊಡುತ್ತವೆ.
  • ಕಸಗಳನ್ನು ಕೊಳೆಯುವಂತೆ ಮಾಡಿ ಕೊಳೆತ ವಸ್ತುಗಳಿಂದ ಇಂಗಾಲ ಚಕ್ರವನ್ನು ಮಾಡುತ್ತವೆ.
  • ಕೆಲವು ಸೂಕ್ಷ್ಮ ಜಾತಿಯ ಶಿಲೀಂದ್ರಗಳು ಬೇರಿನ ಸನಿಹದಲ್ಲಿ (Mycorrhizal fungi) ಸಹಜೀವನವನ್ನು ನಡೆಸಿ ಅಲ್ಲಿ  ಪೊಷಕಾಂಶವನ್ನು ಹೆಚ್ಚು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ. 
  • ಇವುಗಳು ಬದುಕಲು ಬೇರೆ ಸಸ್ಯ- ಪ್ರಾಣಿಗಳ ಆಸರೆ ಬೇಕು.
  • ಅದಕ್ಕಾಗಿ ಅವುಗಳನ್ನು ಪರಾವಲಂಭಿ (Heterocorpic organisams) ಜೀವಿಗಳು ಎನ್ನುತ್ತಾರೆ.
  • ಅವು ಉಸಿರಾಡಲು ಅಥವಾ ದ್ಯುತಿಸಂಸ್ಲೇಶಣ ಕ್ರಿಯೆಗೆ ಸೂರ್ಯನ ಬಿಸಿಲಿನ ಮೂಲಕ ಶಕ್ತಿಯನ್ನು ಪಡೆಯುತ್ತವೆ.
  • ಅಂದರೆ ಇಂಗಾಲದ ಡೈ ಆಕ್ಸೈಡ್,ನೀರು ಮತ್ತು ಸೂರ್ಯನ ಬೆಳಕನ್ನು ಬಳಸಿ ಗ್ಲೂಕೊಸ್, ಆಮ್ಲಜನಕ ಮತ್ತು ನೀರನ್ನು ಬಿಡುಗಡೆ ಮಾಡುತ್ತವೆ.
  • ವಾತಾವರಣದಿಂದ ಸೆರೆಹಿಡಿದ ಪೋಷಕಾಂಶಗಳನ್ನು ಧೀರ್ಘ ಸಮಯದ ತನಕ ಮಣ್ಣಿನಲ್ಲಿ ಉಳಿಸಿಕೊಡುತ್ತವೆ.
  • ಇದರಿಂದಾಗಿಯೇ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಸಾರಜನಕ ಹೆಚ್ಚು ಇರುವಲ್ಲಿ ಇವುಗಳ ಬೆಳವಣಿಗೆ ಹೆಚ್ಚಾಗಿರುತ್ತದೆ.
ಸಾವಯವ ವಸ್ತು ತೇವಾಂಶದ ಸೆಳೆತಕ್ಕೆ ಒಳಗಾದಾಗ ಅದರಲ್ಲಿ ಈ ಅಣಬೆಗಳು ಹುಟ್ಟಿಕೊಳ್ಳುತ್ತವೆ.
ಸಾವಯವ ವಸ್ತು ತೇವಾಂಶದ ಸೆಳೆತಕ್ಕೆ ಒಳಗಾದಾಗ ಅದರಲ್ಲಿ ಈ ಅಣಬೆಗಳು ಹುಟ್ಟಿಕೊಳ್ಳುತ್ತವೆ.

ಅಣಬೆ ಹುಟ್ಟಿಕೊಳ್ಳುವುದು ಹೇಗೆ?

  • ಅಣಬೆಗಳು ಎಲ್ಲಾ ಕಡೆಯಲ್ಲೂ ಹುಟ್ಟುವುದಿಲ್ಲ.ಎಲ್ಲಿ ಆಹಾರ ಇರುತ್ತದೆಯೋ ಅಲ್ಲಿ ಮಾತ್ರ ಹುಟ್ಟುತ್ತದೆ.
  • ಹುಟ್ಟಲು ಅಲ್ಲಿ ಬೀಜಾಣುಗಳು (Spores) ಇರಬೇಕು. ಈ ಬೀಜಾಣುಗಳು ವಾತಾವರಣದ ಮಳೆ, ಬಿಸಿಲು, ಸಿಡಿಲು ಮಿಂಚುಗಳ ಮೂಲಕ ಅಲ್ಲಿ ಸಂಗ್ರಹವಾಗುತ್ತದೆ.
  • ಸತ್ತ ಸಾವಯವ ವಸ್ತುಗಳಲ್ಲಿ ಅಣಬೆ ಬೀಜಗಳು ಸುಪ್ತಾವಸ್ಥೆಯಲ್ಲಿ ಇದ್ದು, ಅದು ತೇವಾಂಶ ದೊರೆತಾಗ ಮೊಳಕೆ ಒಡೆದು ಬೆಳೆಯುತ್ತದೆ.
  • ಕೆಲವು ನಿರ್ದಿಷ್ಟ ಕಡೆಗಳಲ್ಲಿ ವರ್ಷವರ್ಷವೂ ಕೆಲವು ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಹುಟ್ಟಿಕೊಳ್ಳುತ್ತವೆ.
  • ಅಲ್ಲಿ  ಅದರ ಬೀಜಾಣು ಇರುವ ಕಾರಣ ಅದು ಆ ಸಮಯಕ್ಕೆ ಸರಿಯಾಗಿ ಹುಟ್ಟಿಕೊಳ್ಳುತ್ತದೆ.
  • ಕುಮಟಾ,ಹೊನ್ನಾವರ,ಅಂಕೋಲ ಭಟ್ಕಳ,ಇಡಗುಂಜಿ,ಮುಂತಾದ ಕಡೆ,ನಾಗರ ಪಂಚಮಿಯ ಸುಮಾರಿಗೆ ಹುತ್ತದ ಒಳಗಿನ ಗೂಡಿನಿಂದ ಒಂದು ಜಾತಿಯ ಅಣಬೆ ಹುಟ್ಟುತ್ತದೆ.
  • ದೊಡ್ಡ ಗಾತ್ರದ ಇದಕ್ಕೆ ಭಾರೀ ಬೇಡಿಕೆ. ಹುತ್ತ, ಬಿದಿರು ಮೆಳೆ, ಇಲ್ಲೆಲ್ಲಾ ಇರುವ ಸಾವಯವ ವಸ್ತುಗಳ ಮೇಲೆ ಬಿಸಿಲು, ಮಳೆ ಬಂದಾಗ ಹುಟ್ಟಿಕೊಳ್ಳುತ್ತದೆ.
  • ಈ ಸನ್ನಿವೇಶಕ್ಕೆ ಇಲ್ಲಿನವರು ಅಳಂಬೋಮಳೆ ಎನ್ನುತ್ತಾರೆ. ( ವೈಜ್ಞಾನಿಕತೆ ಗಮನಿಸಿ)
ಅಣಬೆ

ಕಲ್ಲಣಬೆಗಳ ಹುಟ್ಟು:

ಹಳ್ಳಿಯ ಜನ ಕೆಲವು ಪ್ರದೇಶಗಳಲ್ಲಿ ದುಂಡಗಿನ ಕಲ್ಲಣಬೆ ಹೆಕ್ಕುವುದನ್ನು ನೋಡಬಹುದು. ಇವುಗಳು  ಹೆಚ್ಚಾಗಿ ಸಿಡಿಲು ಬಂದಾಗ ಹುಟ್ಟಿಕೊಳ್ಳುತ್ತವೆ.  ಸಿಡಿಲಿನ ಮೂಲಕ ಸಾರಜನಕ ಮಣ್ಣಿಗೆ ಸೇರಲ್ಪಟ್ಟು, ತೇವಾಂಶ ಇರುವ ಕಾರಣ ಅಲ್ಲಿ ಹುಟ್ಟಿಕೊಳ್ಳುತ್ತವೆ. ಇವು ನೆಲದಲ್ಲಿ ಮೂಡಿ ಒಂದು ದಿನ ಮಾತ್ರ  ತಾಜಾಸ್ಥಿತಿಯಲ್ಲಿರುತ್ತದೆ. ಮರುದಿನ ಒಳಗೆ ಕಪ್ಪಾಗಿ ಹಾಳಾಗುತ್ತದೆ.

ಅಣಬೆಗಳು ಮತ್ತು ಆಹಾರ:

ಎಂತಹ ಗಟ್ಟಿ ಮರಮಟ್ಟುಗಳಿದ್ದರೂ ಅದು ಶಿಥಿಲವಾಗಲು ಅಣಬೆ ಬೆಳೆಯಬೇಕು. ಸತ್ತ ಅಡಿಕೆ ಮರದಲ್ಲಿ ಬೆಳೆದ ಅಣಬೆ.
ಎಂತಹ ಗಟ್ಟಿ ಮರಮಟ್ಟುಗಳಿದ್ದರೂ ಅದು ಶಿಥಿಲವಾಗಲು ಅಣಬೆ ಬೆಳೆಯಬೇಕು. ಸತ್ತ ಅಡಿಕೆ ಮರದಲ್ಲಿ ಬೆಳೆದ ಅಣಬೆ.
  • ಅಣಬೆಗಳಲ್ಲಿ ಕೆಲವು ವಿಷಗುಣವನ್ನು ಪಡೆದವುಗಳು ಇವೆ. ಕೆಲವು ಔಷದೀಯವೂ ಆಗಿರುತ್ತವೆ.
  • ಪೌಷ್ಟಿಕ ಆಹಾರ ದೃಷ್ಟಿಯಿಂದ ಇವುಗಳ ಸೇವನೆ ಉತ್ತಮ.
  • ಮಾಂಸಾಹಾರಕ್ಕೆ ಸಮನಾದ ವಿಟಮಿನ್ B C D, ನಾರು,ಪೋಟಾಶಿಯಂ, ರಂಜಕ, ಮತ್ತು ಕ್ಯಾಲ್ಸಿಯಂ, ಮತ್ತು ಪ್ರೋಟೀನು ಮುಂತಾದ ಪೋಷಕಗಳನ್ನು  ಇದು ಒದಗಿಸಿಕೊಡುತ್ತದೆ.
  • ಇದನ್ನು ತರಕಾರಿ ಎಂದು ಪರಿಗಣಿಸಲಾಗಿದ್ದು, ಮಾಂಸ ತಿನ್ನದವರು ಇದನ್ನು ಬಳಸಬಹುದು.
  • ಕೃಷಿ ತ್ಯಾಜ್ಯಗಳಲ್ಲಿ ಇದನ್ನು ಬೆಳೆಸಿ ಅದನ್ನು ಬಳಸಬಹುದು.
  • ನಾಯಿಕೊಡೆಗಳು ಕೇವಲ ಮಣ್ಣಿಗೆ ಮಾತ್ರ ಪೊಷಕ ಒದಗಿಸುವುದಲ್ಲ.
  • ಅದು ಮಾನವನಿಗೂ ಪೌಷ್ಟಿಕ ಆಹಾರ. ಇದರಲ್ಲಿ 6% ದಷ್ಟು ಔಷಧೀಯ ಗುಣ ಪಡೆದಿವೆ.
  • ಕೆಲವು ವೈರಸ್ ಖಾಯಿಲೆಯನ್ನು , ಗಡ್ಡೆ ಬೆಳೆಯುವ ಖಾಯಿಲೆಯನ್ನೂ ವಾಸಿಮಾಡುವಂತವುಗಳಿವೆ.
  • ಕೃಷಿಯಲ್ಲಿ ರೋಗ ನಿಯಂತ್ರಕ ಗುಣ ಪಡೆದ  ಟ್ರೈಕೋಡರ್ಮಾ, ಸುಡೋಮೋನಸ್ , ಬ್ಯಾಸಿಲಸ್, ಮೈಕೋರೈಝಾ ಮುಂತಾದ ಶಿಲೀಂದ್ರಗಳಿದ್ದಂತೆ.
  • ಇದರಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಡಯಾಬಿಟಿಕ್ ಗುಣ ಹೇರಳವಾಗಿದೆ.   

ಅಣಬೆಗಳ ಸಹಾಯದಿಂದ ಪರಿಸರ ಪುನರುಜ್ಜೀವನವಾಗುತ್ತದೆ. ಮಣ್ಣು ಫಲವತ್ತಾಗಿ ಮತ್ತೆ ಸಸ್ಯಗಳು ಮರಮಟ್ಟುಗಳು ಹುಲುಸಾಗಿ ಬೆಳೆಯುತ್ತವೆ. ಕೀಟಗಳು, ರೋಗಗಳು, ಜಂತು ಹುಳಗಳ ನಿಯಂತ್ರಣವೂ ಆಗುತ್ತದೆ. ಸಾವಯವ ವಸ್ತುಗಳನ್ನು ಸುಡುವುದು, ಕಾಡಿಗೆ ಬೆಂಕಿ ಹಚ್ಚುವುದು, ಮುಂತಾದವುಗಳನ್ನು ಮಾಡದೆ ಇದ್ದರೆ ಇದರ ಸಂತತಿ ನಾಶವಾಗದೆ ಪರಿಸರ ಉಳಿಯುತ್ತದೆ.

Leave a Reply

Your email address will not be published. Required fields are marked *

error: Content is protected !!