ಬಸಿಗಾಲುವೆ – ಅಡಿಕೆ, ತೆಂಗಿನ ತೋಟಕ್ಕೆ ಇದು ಯಾಕೆ ತೀರಾ ಅಗತ್ಯ?
ಬಸಿಗಾಲುವೆ ಇಲ್ಲದ ಅಡಿಕೆ, ತೆಂಗಿನ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ನೆಲಕ್ಕೆ ಮಳೆಯ ಮೂಲಕ ಸೇರುವ ನೀರು ಮಣ್ಣನ್ನು ತೇವವಷ್ಟೇ ಮಾಡಿ ಸರಾಗವಾಗಿ ಹರಿದು ಹೋಗುತ್ತಿರಬೇಕು. ಆಗ ಸಸ್ಯಗಳ ಆರೋಗ್ಯಕ್ಕೆ ಅದು ಅನುಕೂಲಕರ. ಅಡಿಕೆ ತೆಂಗು, ತಾಳೆ, ಬಾಳೆ, ಕರಿಮೆಣಸು ಮುಂತಾದ ಏಕದಳ ಸಸ್ಯಗಳ ಬೇರು ನೀರಿಗೆ ಸೂಕ್ಷ್ಮ ಗ್ರಾಹಿಯಾಗಿದ್ದು, ಸ್ವಲ್ಪ ಹೆಚ್ಚಾದರೂ ತೊಂದರೆ ಉಂಟುಮಾಡುತ್ತದೆ. ಸಸ್ಯಗಳಿಗೆ ನೀರು ಬೇಕೇ? ಬೇಡ. ಸಸ್ಯಗಳಿಗೆ ಅವು ಬೇರು ಬಿಟ್ಟಿರುವ ಮಣ್ಣು ಎಂಬ ಮಾಧ್ಯಮ ತೇವಾಂಶದಿಂದ ಕೂಡಿದ್ದರೆ…