ಕುರುವಾಯಿ ದುಂಬಿಯ ಕಾಟ ಹೆಚ್ಚಾಗಲು ಕೊಟ್ಟಿಗೆ ಗೊಬ್ಬರ ಕಾರಣ
ಯಾವಾಗಲೂ ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ ಒಂದು ದೊಡ್ದ ದುಂಬಿ ಬಂದು ನೆಲಕ್ಕೆ ಬೀಳುತ್ತದೆ. ಅದರಲ್ಲಿ ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು ಉಪಚರಿಸಿ ಬಳಕೆ ಮಾಡಬೇಕು. ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು….