ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!
ತೆಂಗು ಬೆಳೆಗಾರರ ನೆರವಿಗೆ ಸರಕಾರ ಮತ್ತು ತೆಂಗಿನ ಉತ್ಪನ್ನ ಬಳಕೆದಾರರು ಬಾರದೆ ಇದ್ದರೆ ಕೆಲವೇ ಸಮಯದಲ್ಲಿ ತೆಂಗಿನ ಬೆಳೆಯನ್ನೇ ರೈತರು ಬಿಡುವ ಸ್ಥಿತಿ ಬರಬಹುದು. ಕಲ್ಪವೃಕ್ಷ ತೆಂಗು, ಯಾವತ್ತೂ ಭವಿಷ್ಯವಿರುವ ಬೆಳೆ ಎಂದು ನಂಬಿದ್ದ ಬೆಳೆಗಾರರಿಗೆ ಯಾವತ್ತೂ ಆಕರ್ಷಕ ಬೆಲೆ ಬರಲೇ ಇಲ್ಲ. ತೆಂಗಿನ ಬೆಳೆ ಕಡಿಮೆ ಇದ್ದ 30-40 ವರ್ಷಗಳ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಬೆಲೆ ಈಗ ತೆಂಗಿನ ಕಾಯಿಯದ್ದು. ಈ ಬೆಲೆಯಲ್ಲಿ ತೆಂಗು ಬೆಳೆಗಾರರು ಉಳಿಯುವುದು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಸರಕಾರ ತೆಂಗು…