ಬೀಜದ ತೆಂಗಿನ ಕಾಯಿಯನ್ನು ಹೇಗೆ ಮೊಳಕೆ ಬರಲು ಇಡಬೇಕು?
ಯಾವುದೇ ಸಸಿ ಮಾಡುವಾಗ ಮೊದಲಾಗಿ ಬೀಜ ಮೂಲ ಒಳ್ಳೆಯದು ಆಗಿರಬೇಕು. ತೃಪ್ತಿಕರ ಗುಣಪಡೆದ ಮರದಿಂದ ಮಾತ್ರ ಬೀಜದವನ್ನು ಆಯ್ಕೆ ಮಾಡಬೇಕು. ಬೀಜದ ಆಯ್ಕೆಗೆ ಮೊದಲ ಸ್ಥಾನವಾದರೆ , ಆ ಬೀಜವನ್ನು ಸೂಕ್ತ ವಿಧಾನದಲ್ಲಿ ಮೊಳಕೆ ಬರಿಸುವುದು ಎರಡನೇ ಪ್ರಾಮುಖ್ಯ ಹಂತ. ಸಧೃಢ ಮೊಳಕೆಯ ಸಸಿ ಮಾತ್ರ ಆರೋಗ್ಯಕರವಾಗಿ ಬೆಳೆಯಬಲ್ಲುದು. ತೆಂಗಿನ ಬೀಜದ ಆಯ್ಕೆಯೂ ಇದಕ್ಕೆ ಹೊರತಲ್ಲ. ಉತ್ತಮ ಬೀಜವನ್ನು ಯೋಗ್ಯ ರೀತಿಯಲ್ಲಿ ಮೊಳಕೆಗೆ ಇಟ್ಟರೆ ಅದು ಉತ್ತಮ ಸಸಿಯಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ ಹಿರಿಯರು. ಅಂದರೆ…