ತೆಂಗು ಬೆಳೆಸುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ.
ಜಗತ್ತಿನ ಸುಮಾರು 80 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೆಳೆಸಲ್ಪಡುತ್ತಿರುವ ತೆಂಗಿಗೆ ಬೆಳೆಯಲ್ಲದೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಈಗಿನವರೆಗೂ ಜನ ತೆಂಗನ್ನು ನಂಬಿದ್ದಾರೆ. ನಂಬಿಕೆಗೆ ಯಾವಾಗಲೂ ಕುಂದು ತಾರದ ಬೆಳೆ ಎಂದರೆ ತೆಂಗು ಎನ್ನಬಹುದು. ತೆಂಗಿನ ಮೂಲ ಯಾವುದು: ಕೆಲವು ಪ್ರಕೃತಿಯ ನಿಘೂಢಗಳಲ್ಲಿ ತೆಂಗೂ ಒಂದು. ಇದು ಮೂಲತಹ ಎಲ್ಲಿ ಬೆಳೆಯುತ್ತಿತ್ತು, ಹೇಗೆ ಇದು ಬೆಳೆಯ ಸ್ಥಾನವನ್ನು ಪಡೆಯಿತು ಎಂಬ ಬಗ್ಗೆ ನಿಖರ ಉಲ್ಲೇಖ ಇಂದಿನ ತನಕವೂ ಇಲ್ಲ. ಭಾರತ ದೇಶದಲ್ಲಿ ವೇದಗಳ ಕಾಲದಿಂದಲೂ…