ಕಾಫೀ ಗಿಡದ ವೈಜ್ಞಾನಿಕ ಪ್ರೂನಿಂಗ್ ವಿಧಾನ.
ಕಾಫೀ ಸಸ್ಯ ಅದರಷ್ಟಕ್ಕೇ ಬೆಳೆದರೆ ಸಣ್ಣ ಮರವೇ ಆಗಬಲ್ಲುದು. ಆದರೆ ಕೊಯಿಲು ಮುಂತಾದ ನಿರ್ವಹಣೆಗೆ ಅದನ್ನು ವ್ಯವಸ್ಥಿತವಾಗಿ ಆಕಾರ ಕೊಡಬೇಕು. ಅದನ್ನೇ ಪ್ರೂನಿಂಗ್ ಎನ್ನುತ್ತಾರೆ. ಹಂತ ಹಂತವಾಗಿ ನೇರ ಚಿಗುರನ್ನು ತೆಗೆದು ರೆಕ್ಕೆ ಚಿಗುರನ್ನು ಮಾತ್ರ ಉಳಿಸುವ ಈ ವಿಧಾನ ಕಾಫಿ ಬೆಳೆಯ ಪ್ರಮುಖ ನಿರ್ವಹಣೆ. ಕಾಫೀ ಬೆಳೆಯ ನಾಡಿನಲ್ಲಿ ನಿತ್ಯ ಕಾಫೀ ತೋಟದ ಕೆಲಸ ಇದ್ದೇ ಇರುತ್ತದೆ. ಮಳೆಗಾಲ ಪ್ರಾರಂಭದಲ್ಲಿ ಮರದ ನೆರಳು ತೆಗೆಯುವ ಕೆಲಸವಾದರೆ ಮಳೆಗಾಲ ಮುಗಿಯುವಾಗ ಸಸ್ಯದಲ್ಲಿ ಬರುವ ಚಿಗುರು ತೆಗೆಯುವ ಕೆಲಸ….