ಬೆಂಬಲ ಬೆಲೆಯ ಹೆಚ್ಚಳ- ರೈತರಿಗೆ ಸರಕಾರದ ನೆರವು.
ಭಾರತ ಸರಕಾರವು ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲಯನ್ನು ಹೆಚ್ಚಿಸಿದೆ. ಭಾರತ ಸರಕಾರದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ದೇಶದ ವಿವಿಧ ಬೆಳೆಗಳಿಗೆ ಭರ್ಜರಿ ಬೆಂಬಲಬೆಲೆಯನ್ನು ಘೋಷಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿ ಆಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಇತ್ಯಾದಿ ಕೃಷಿ ಕೆಲಸಗಳಲ್ಲಿ ತೊಡಗಿದ್ದಾರೆ. ಕೆಲವು ಬೆಳೆಗಳಿಗೆ ಕೊರೋನಾ ಕಾರಣದಿಂದ ಸ್ವಲ್ಪ ಮಾರುಕಟ್ಟೆ ಸಮಸ್ಯೆ ಉಂಟಾಗಿದ್ದರೂ, ಸರಕಾರ ಕಳೆದ ವರ್ಷದಂತೆ ಬಿಗುವನ್ನು ಸಡಿಲಿಕೆ ಮಾಡಿದ್ದ…