ಹಸುಗಳಿಗೂ ಬರಲಿದೆ ಚಾಕಲೇಟುಗಳು.
ಹೈನುಗಾರಿಕೆ ಮಾಡುವರು ಎದುರಿಸುವ ಕಡಿಮೆ ಹಾಲಿನ ಇಳುವರಿ ಹಾಗೂ ಪೌಷ್ಟಿಕ ಆಹಾರದ ಕೊರೆತೆ ನೀಗಿಸಲು ಈಗ ವಿಜ್ಞಾನಿಗಳು ಚಾಕಲೇಟನ್ನು ಒಂದರ ಸಂಯೋಜನೆಯನ್ನು ಪರಿಚಯಿಸಿದ್ದಾರೆ. ಇದು ಪ್ರೋಟೀನು , ಶಕ್ತಿ ಎಲ್ಲವನ್ನೂ ಒಳಗೊಂಡಿರುತ್ತದೆ. ಮನುಷ್ಯರು ಚಾಕಲೇಟ್ ತಿಂದರೆ ಶಕ್ತಿ ಹೆಚ್ಚುತ್ತದೆ. ಚಾಕಲೇಟಿನಲ್ಲಿರುವ ಸಕ್ಕರೆ ಹಾಗೂ ಇನ್ನಿತರ ಶಕ್ತಿ ವರ್ಧಕ ವಸ್ತುಗಳಿಂದಾಗಿ ಗಾತ್ರ ಸಣ್ಣದಾದರೂ ಅದರಿಂದ ಲಭ್ಯವಾಗುವ ಶಕ್ತಿ ಹೆಚ್ಚು. ಅದೇ ತತ್ವದಲ್ಲಿ ಪಶುಗಳಿಗೂ ಚಾಕಲೇಟು ತಯಾರಿಸಬಹುದಂತೆ. ಈ ಚಾಕಲೇಟುಗಳನ್ನು ಪಶುಗಳಿಗೆ ತಿನ್ನಿಸಿದರೆ ಅವುಗಳು ಹೆಚ್ಚು ಹಾಲು ಕೊಡಬಲ್ಲವು. ಶಾರೀರಿಕವಾಗಿ…