ಹಸುಗಳಿಗೂ ಬರಲಿದೆ ಚಾಕಲೇಟುಗಳು.

ಹಸುಗಳು ಹುಲ್ಲು ಆಹಾರ ತಿನ್ನುವುದು

ಹೈನುಗಾರಿಕೆ ಮಾಡುವರು ಎದುರಿಸುವ ಕಡಿಮೆ ಹಾಲಿನ ಇಳುವರಿ ಹಾಗೂ ಪೌಷ್ಟಿಕ ಆಹಾರದ ಕೊರೆತೆ ನೀಗಿಸಲು ಈಗ ವಿಜ್ಞಾನಿಗಳು ಚಾಕಲೇಟನ್ನು ಒಂದರ ಸಂಯೋಜನೆಯನ್ನು  ಪರಿಚಯಿಸಿದ್ದಾರೆ. ಇದು ಪ್ರೋಟೀನು , ಶಕ್ತಿ ಎಲ್ಲವನ್ನೂ ಒಳಗೊಂಡಿರುತ್ತದೆ.

ಮನುಷ್ಯರು ಚಾಕಲೇಟ್ ತಿಂದರೆ ಶಕ್ತಿ ಹೆಚ್ಚುತ್ತದೆ. ಚಾಕಲೇಟಿನಲ್ಲಿರುವ ಸಕ್ಕರೆ  ಹಾಗೂ ಇನ್ನಿತರ ಶಕ್ತಿ ವರ್ಧಕ  ವಸ್ತುಗಳಿಂದಾಗಿ  ಗಾತ್ರ ಸಣ್ಣದಾದರೂ ಅದರಿಂದ ಲಭ್ಯವಾಗುವ ಶಕ್ತಿ ಹೆಚ್ಚು.  ಅದೇ ತತ್ವದಲ್ಲಿ  ಪಶುಗಳಿಗೂ ಚಾಕಲೇಟು ತಯಾರಿಸಬಹುದಂತೆ. ಈ ಚಾಕಲೇಟುಗಳನ್ನು  ಪಶುಗಳಿಗೆ ತಿನ್ನಿಸಿದರೆ ಅವುಗಳು ಹೆಚ್ಚು ಹಾಲು ಕೊಡಬಲ್ಲವು. ಶಾರೀರಿಕವಾಗಿ ದಷ್ಟಪುಷ್ಟವಾಗುವವು. ಗಬ್ಬ ನಿಲ್ಲದಾಗುವ ಸಮಸ್ಯೆ  ನಿವಾರಣೆಯಾಗುತ್ತದೆ.

 • ನಾವೆಲ್ಲಾ ಹೈನುಗಾರಿಕೆಯಾಗಿ ಪಶು ಪಾಲನೆ ಮಾಡುತ್ತೇವೆ. ಮನೆ ಬಳಕೆಯ ಹಾಲಿಗಾಗಿ ಪಶು ಪಾಲನೆ ಮಾಡುತ್ತೇವೆ.
 • ಎಲ್ಲರೂ ಎದುರಿಸುವ ಅತೀ ದೊಡ ಸಮಸ್ಯೆ ಎಂದರೆ  ಪಶು ಆಹಾರ.
 • ಪೌಷ್ಟಿಕ ಪಶು ಅಹಾರ ಕೊಟ್ಟರೆ ಮಾತ್ರ ಅವುಗಳು ಶಾರೀರಿಕವಾಗಿ ಸಧೃಢವಾಗಿರುತ್ತವೆ.
 • ಹಾಗೆಯೇ ಅಧಿಕ ಹಾಲನ್ನೂ ಕೊಡುತ್ತವೆ. ಆದರೆ ಪುಷ್ಟಿಕ ಆಹಾರ ಎಂಬುದೇ ಅತೀ ದೊಡ್ಡ ಸಮಸ್ಯೆ.

ಒಣ ಹುಲ್ಲು ಮತ್ತು ಸಮಸ್ಯೆಗಳು:

ಹಸುಗಳು ಆಹಾರ ತಿನ್ನುವುದು
 • ಪಶುಗಳಿಗೆ ನಾವು ಒಣ ಹುಲ್ಲು ಹಾಕುವುದು ರೂಢಿ. 
 • ಬೇಸಿಗೆಯ ನೀರೊತ್ತಾಯದ ಸಮಯದಲ್ಲಿ ಹಸಿ ಹುಲ್ಲು ಲಭ್ಯವಿಲ್ಲದ ಸಮಯದಲ್ಲಿ , ಮಳೆಗಾಲದ  ವಿಪರೀತ ಮಳೆಯ ಸಮಯದಲ್ಲಿ  ಒಣ ಭತ್ತದ ಹುಲ್ಲು, ಜೋಳದ ದಂಟುಗಳನ್ನು ಮೇವಾಗಿ ಕೊಡುತ್ತೇವೆ.
 • ಈ ಮೇವಿನಲ್ಲಿ ಪ್ರೋಟೀನು, ಖನಿಜಾಂಶ ಸತ್ವಗಳು ಇರುವುದಿಲ್ಲ.
 • ಪಶುಗಳು ತಮ್ಮ ಹೊಟ್ಟೆ ಹಸಿವಿಗಾಗಿ ಕೊಟ್ಟದ್ದನ್ನು ತಿನ್ನುತ್ತವೆ.
 • ಇದರಿಂದಾಗಿ  ಹಾಲಿನ ಇಳುವರಿ  ಕಡಿಮೆಯಾಗುತ್ತದೆ.   
 • ಸರಿಯಾದ  ಸಮಯಕ್ಕೆ ಗಬ್ಬಕ್ಕೆ ಬರುವುದಿಲ್ಲ.
 • ಇವು  ಜೀರ್ಣ ಶಕ್ತಿಗೂ ಸಹಾಯಕವಲ್ಲ. ಹಸುಗಳು ಎಮ್ಮೆಗಳು, ಕುರಿ ಮೇಕೆಗಳು ದೇಹದಲ್ಲಿ ಸಣಕಲಾಗುತ್ತವೆ.

ಚಾಕಲೇಟ್  ಪೋಷಕಾಂಶಗಳ ನಿಧಿ:

 • ಪಶುಗಳು ತಿನ್ನುವ ಈ ಚಾಕಲೇಟುಗಳಲ್ಲಿ ಎಲ್ಲಾ ಖನಿಜಾಂಶಗಳು, ಪ್ರೋಟೀನುಗಳು ಒಳಗೊಂಡಿವೆ. 
 • ಇದರಲ್ಲಿ 50% ದಷ್ಟು ಬೆಲ್ಲ, 7.5 % ಯೂರಿಯಾ, 10%  ಕ್ಯಾಲ್ಸಿಯಂ ಆಕ್ಸೈಡ್, 25% ತೌಡು ( ಧವಸ ದಾನ್ಯಗಳ ಹೊಟ್ಟು ಅಥವಾ ಪುಡಿ) ಹಾಗೂ 5 % ಉಪ್ಪನ್ನು ಸೇರಿಸಲಾಗುತ್ತದೆ.
 • ಇದು ಸಂಪೂರ್ಣ  ಸಮತೋಲನ ಆಹಾರವಾಗಿದೆ.  ಪಶುಗಳ ದೇಹ ತೂಕಕ್ಕನುಗುಣವಾಗಿ ಈ ಚಾಕಲೇಟನ್ನು  ಬಳಕೆ ಮಾಡಬೇಕು. 
 • ಇದನ್ನು ಬಿಸಿ ಮಾಡುವ (Hot method) ಮೂಲಕವೂ ತಯಾರಿ ಮಾಡಬಹುದು.
 • ಶೀತಲೀಕರಣ ವಿಧಾನದಲ್ಲೂ ತಯಾರಿಸಬಹುದು.45 -50 ಡಿಗ್ರಿ ಬಿಸಿಯಲ್ಲಿ ಇವೆಲ್ಲವನ್ನು ಮಿಶ್ರಣ ಮಾಡಿ  ಚಾಕಲೇಟು ತಯಾರಿಸಲಾಗುತ್ತದೆ.
 • ಶೀತಲೀಕರಣ ವಿಧಾನದಲ್ಲಿ  (Cold  method) ಮಾಡಲು ಇದಕ್ಕೆ 15 ದಿನ ಬೇಕಾಗುತ್ತದೆ.
 • ಅದನ್ನು ಸೂಕ್ತ ರೀತಿಯಲ್ಲಿ  ಸಂಗ್ರಹಣೆಯನ್ನೂ ಮಾಡಬೇಕು.
 • ಬಿಸಿ ವಿಧಾನದಲ್ಲಿ ಮಾಡಿದ ಚಾಕಲೇಟು ಹೆಚ್ಚು ಸಮಯ ದಾಸ್ತಾನು ಇಡಲಿಕ್ಕೆ ಆಗುತ್ತದೆ.

ಇದು ಒಂದೇ ಆಹಾರ ಆಲ್ಲ:

 • ಪಶು ಪಾಲನೆ ಮಾಡುವವರು ತಾವು ಕೊಡುವ ಇತರ ಆಹಾರಗಳ ಜೊತೆಗೆ ಇದನ್ನು  ತಿನ್ನಿಸಬೇಕು.
 • ಇದನ್ನೊಂದೇ ಕೊಡುವುದಲ್ಲ. ಒಣ ಹುಲ್ಲು, ಹಸಿ ಹುಲ್ಲು ಇನ್ಯಾವುದೇ ಮೇವನ್ನು ಕೊಡಿ.
 • ಅದರ ಜೊತೆಗೆ ಈ ಚಾಕಲೇಟನ್ನು ತಿನ್ನಿಸಿ. ಆ ವಸ್ತುಗಳು ಚೆನ್ನಾಗಿ ಜೀರ್ಣವಾಗುತ್ತದೆ.
 • ಹಸುಗಳು ಹೆಚ್ಚು ಹಾಲನ್ನೂ ಕೊಡುತ್ತವೆ.
 • ಬರೇ ಇದನ್ನೊಂದೇ ಕೊಟ್ಟರೆ ಇದರಲ್ಲಿರುವ ಯೂರಿಯಾ ಅಂಶ ಪಶುಗಳ ದೇಹಕ್ಕೆ  ತೊಂದರೆಯಾಗಿ ಪರಿಣಮಿಸಬಹುದು.
 • ಚಾಕಲೇಟು ಸೇವನೆಯಿಂದ 14% ಹಾಲು ಹೆಚ್ಚಳವಾಗುತ್ತದೆ.
 • ಶರೀರ  ಸಧೃಢವಾಗಿ ಕ್ರಮ ಪ್ರಕಾರ ಕರು ಹಾಕುತ್ತವೆ.
 • ದೇಹದ ತೂಕ, ಎಲುಬಿನ ಗಟ್ಟಿತನಕ್ಕೆ ಈ ಚಾಕಲೇಟು ನೆರವಾಗುತ್ತದೆ.
 • ಇದನ್ನು ಬಳಸುವುದರಿಂದ ದುಬಾರಿ ಬೆಲೆಯ ಖನಿಜ ಮಿಶ್ರಣ ಬಳಸಬೇಕಾಗಿಲ್ಲ.

ಇದನ್ನು ಯಾರೂ ತಯಾರಿಸಬಹುದು:

 • ಹೈನುಗಾರಿಕೆ ದುಬಾರಿಯಾಗುವುದಕ್ಕೆ ಮೂಲ ಕಾರಣ ಪಶು ಆಹಾರ.
 • ಲಭ್ಯವಿರುವ ಪಶು ಆಹಾರಗಳಲ್ಲಿ ಬೆಲೆಗೆ ತಕ್ಕುದಾದ ಗುಣಮಟ್ಟ ಇರುವುದಿಲ್ಲ.
 • ಹೈನುಗಾರರು  ತಾವೇ ಸ್ವತಹ ಪಶು ಆಹಾರ ತಯಾರಿಸಿಕೊಳ್ಳುವಂತಾದರೆ ಹೈನುಗಾರಿಕೆ ಸರಳವಾಗುತ್ತದೆ.
 • ಸ್ಥಳೀಯವಾಗಿ ದೊರೆಯುವ ಮೂಲವಸ್ತುಗಳನ್ನು ಬಳಸಿಕೊಂಡು ಸ್ವ ಸಹಾಯ ಸಂಘಗಳ ಮೂಲಕವೋ, ವೈಯಕ್ತಿಕವಾಗಿಯೋ ಇಂತಹ ಚಾಕಲೇಟು ರೂಪದ ಆಹಾರವನ್ನು ತಯಾರಿಸಿಕೊಂಡರೆ  ತುಂಬಾ ಪ್ರಯೋಜನ.

ಬೆಲ್ಲ, ಧವಸ ಧಾನ್ಯದ ಹೊಟ್ಟು, ಸುಣ್ಣ, ಉಪ್ಪು  ಮತ್ತು ಯೂರಿಯಾ ( ಯೂರಿಯಾ ಬದಲು ಶೇಂಗಾ ಹಿಂಡಿ ಬಳಕೆ ಮಾಡಬಹುದು) ಮುಂತಾರ ಎಲ್ಲಾ ಮೂಲವಸ್ತುಗಳೂ ಸ್ಥಳೀಯವಾಗಿ ದೊರೆಯುವ  ವಸ್ತುಗಳಾದ ಕಾರಣ ಇದನ್ನು ಸ್ಥಳೀಯವಾಗಿ ತಯಾರಿಸುವುದು ಕಷ್ಟವಿಲ್ಲ.

Leave a Reply

Your email address will not be published. Required fields are marked *

error: Content is protected !!