ಜಾನುವಾರುಗಳಿಗೆ ಸಿಡುಬು ರೋಗ- ಪಶು ಸಂತತಿಯ ವಿನಾಶಕ್ಕೆ ಕಾರಣವಾಗಬಹುದೇ?
ಪಶುಗಳ ಅದರಲ್ಲೂ ದನಗಳ ಚರ್ಮಗಂಟು ರೋಗ ತೀವ್ರ ರೂಪ ತಳೆಯುತ್ತಿದ್ದು, ಈಗಾಗಲೇ ಸಾವಿರಾರು ಹಸುಗಳು ಮರಣ ಹೊಂದಿವೆ. ಸಾವಿರಾರು ಜೀವನ್ಮರಣ ಹೋರಾಟದಲ್ಲಿವೆ. ಕೊರೋನಾ, ಅಥವಾ ಸಿಡುಬು ತರಹದ ಸಾಂಕ್ರಾಮಿಕ ರೋಗವೊಂದು ಹಸು ಸಾಕುವರ ಮನೆಯಲ್ಲಿ ಸೂತಕದ ವಾತಾವರಣವನ್ನು ಉಂಟುಮಾಡಿದೆ. ಯಾವಾಗ ಯಾವುದಕ್ಕೆ ಬರಬಹುದೋ ಎಂಬ ಆತಂಕ ಉಂಟಾಗಿದೆ. ಹೊಸ ತಲೆಮಾರಿಗೆ ಕೊರೋನಾ ರೋಗ ಹೇಗೆ ಮನುಷ್ಯ ಮನುಷ್ಯರನ್ನು ದೂರ ದೂರ ಮಾಡುವ ಸನ್ನಿವೇಶ ಉಂಟು ಮಾಡಿತ್ತು ಎಂಬುದರ ಅರಿವು ಇದೆ. ಸುಮಾರು 70 ರ ದಶಕದಲ್ಲಿ ಸಿಡುಬು…