
ಗಂಡು ಕರು ಸಾಕಿದರೆ ತಿಂಗಳಿಗೆ 1500 ರೂ. ಆದಾಯ.
ಹಸು ಗಂಡು ಕರು ಹಾಕಿತೆಂದರೆ ತಲೆಬಿಸಿ ಮಾಡಿಕೊಂಡು ಅದನ್ನು ತರಾತುರಿಯಲ್ಲಿ ಕಸಾಯಿಗೆ 500-1000ರೂ. ಗಳಿಗೆ ಮಾರಬೇಡಿ. ಅದರಿಂದ ತಿಂಗಳಿಗೆ 1500 ರೂ. ಆದಾಯ ಇದೆ ಎಂದರೆ ನಂಬುತ್ತೀರಾ? ನಿಜವಾಗಿಯೂ ಇದೆ. ಒಂದು ಗಂಡು ಕರು ದಿನಕ್ಕೆ ಒಂದು ಬುಟ್ಟಿ ಗೊಬ್ಬರ ತಯಾರಿಸುತ್ತದೆ. ಇಷ್ಟು ಗೊಬ್ಬರವನ್ನು ನಾವು ಖರೀದಿಸುವುದೇ ಆದರೆ ಅದಕ್ಕೆ ರೂ.50 ಕೊಡಬೇಕು. ನಾವೇ ಅದನ್ನು ಸಾಕಿದರೆ ಕೊಡುವ ರೂ.50 ಉಳಿಯುತ್ತದೆ. ವಾರ್ಷಿಕ 18,000 ರೂ. ಗಳ ಗೊಬ್ಬರ ನಮ್ಮಲ್ಲೇ ಉತ್ಪಾದಿಸಬಹುದು. ಬಹಳ ಜನ ಗಂಡು ಕರು…