ಮುಂಗಾರು ಹಂಗಾಮಿಗೆ ಮಾಡಬೇಕಾದ ಪೂರ್ವ ಸಿದ್ದತೆಗಳು
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಗಳು ವಾಡಿಕೆಯಂತೆ ಆಗುತ್ತವೆ ಎಂಬುವುದು ಹವಾಮಾನ ತಜ್ಞರ ಅಭಿಪ್ರಾಯ. ಆದ್ದರಿಂದ ರೈತರು ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂಗಾರು ಬೆಳೆಗಳ ಯೋಜನೆಯನ್ನು ಹಮ್ಮಿಕೊಳ್ಳುವುದು ಸೂಕ್ತ. ಈಗಾಗಲೇ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕುಂಟೆ-ರಂಟೆಗಳನ್ನು ಹೊಡೆದು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೌಕ ಮಡಿಗಳನ್ನು ಮತ್ತು ದಿಂಡು ಸಾಲುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವುದರಿಂದ, ಬಂದ ಮಳೆ ನೀರು ಮಡಿಗಳಲ್ಲಿ ಮತ್ತು ಬೋದುಗಳಲ್ಲಿ ನಿಲ್ಲುವುದರಿಂದ ಮಣ್ಣಿನ ತೇವಾಂಶ ಹೆಚ್ಚು ಸಂಗ್ರಹವಾಗಿ…