ಕರಿಮೆಣಸು – ಯಾವ ಬಳ್ಳಿ ಸಾಯುತ್ತದೆ- ಯಾವುದನ್ನು ಉಳಿಸಬಹುದು?
ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಲೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು (Phytophthora foot rot) ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ. ಬುಡ ಭಾಗದಲ್ಲಿ ಎಲೆ ಉದುರಿದೆಯೇ: ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ. ರೋಗವು ಮೊದಲಾಗಿ ಬಳ್ಳಿಯ ಬೇರಿಗೆ…