ಕರಿಮೆಣಸು – ಯಾವ ಬಳ್ಳಿ ಸಾಯುತ್ತದೆ- ಯಾವುದನ್ನು ಉಳಿಸಬಹುದು?

by | Aug 25, 2020 | Spice Crop (ಸಾಂಬಾರ ಬೆಳೆ), Pepper (ಕರಿಮೆಣಸು) | 0 comments

ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಲೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು (Phytophthora foot rot) ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ  ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ.

ಬುಡ ಭಾಗದಲ್ಲಿ ಎಲೆ ಉದುರಿದೆಯೇ:

ರೋಗದ ಪ್ರಾರಂಭಿಕ ಹಂತದಲ್ಲಿ ಉದುರಿದ ಎಲೆಗಳು

ರೋಗದ ಪ್ರಾರಂಭಿಕ ಹಂತದಲ್ಲಿ ಉದುರಿದ ಎಲೆಗಳು

  • ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ.
  • ರೋಗವು ಮೊದಲಾಗಿ ಬಳ್ಳಿಯ ಬೇರಿಗೆ ಬಾಧಿತವಾಗುತ್ತದೆ.
  • ಬೇರಿನ ಮೂಲಕ ಆ ರೋಗಾಣು ಸಸ್ಯದ ಎಲ್ಲಾ ಅಂಗಗಳಿಗೂ ಪ್ರಸಾರವಾಗುತ್ತದೆ.
  • ತಕ್ಷಣದ ಪರಿಣಾಮವಾಗಿ ಎಲೆಗಳು ಬಾಡಿದಂತಾಗಿ( ಬಿಸಿಲು ಇದ್ದರೆ) ಕಾಣಿಸಿ ಒಂದೆರಡು ದಿನದಲ್ಲಿ ಉದುರಲು ಪ್ರಾರಂಭವಾಗುತ್ತದೆ.
  • ಬುಡಭಾಗದಲ್ಲಿ 1-2 ಎಲೆ ತೊಟ್ಟು ಸಮೇತ ಉದುರಿದೆ ಎಂದರೆ ಅ ಬಳ್ಳಿಯ ಬೇರಿಗೆ ಶಿಲೀಂದ್ರ ಬಾಧೆ ಪ್ರಾರಂಭವಾಗಿದೆ ಎಂದರ್ಥ.

ಎಲೆ ಹಳದಿಯಾಗಿದೆಯೇ:

ಎಲೆಗಳು ಈ ಹಂತಕ್ಕೆ ಬಂದಿದ್ದರೆ ರೋಗ ಹೆಚ್ಚಾಗುತ್ತಿದೆ.

ಎಲೆಗಳು ಈ ಹಂತಕ್ಕೆ ಬಂದಿದ್ದರೆ ರೋಗ ಹೆಚ್ಚಾಗುತ್ತಿದೆ.

  • ಒಂದಷ್ಟು ಎಲೆಗಳು ಬುಡದಲ್ಲಿ ಉದುರಿ ಬಿದ್ದಿವೆ. ಬಳ್ಳಿಯಲ್ಲಿ ಎಲೆಗಳು ವಿರಳವಾಗಿದೆ, ಇರುವ ಎಲೆಗಳು ಹಳದಿಯಾಗಿದೆ ಎಂದಾದರೆ ಆ ಬಳ್ಳಿಯ ಬುಡ ಭಾಗ ಸಂಪೂರ್ಣವಾಗಿ ಶಿಲೀಂದ್ರ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದೆ ಎಂದರ್ಥ.
  • ಬುಡ ಭಾಗದ ಮರಕ್ಕೆ ಅಪ್ಪಿದ ಬಳ್ಳಿಯನ್ನು ಮುಟ್ಟಿದಾಗ ಅದು ಸತ್ತಿರುತ್ತದೆ.
  • ಆ ಬಳ್ಳಿಗೆ ಉಪಚಾರ ಮಾಡಿದರೂ ಅದು ಬದುಕುವುದಿಲ್ಲ’.

ಇಲ್ಲಿ ಒಂದು ಒಂದು ಅಂಶವನ್ನು ಪ್ರತೀಯೊಬ್ಬ ಮೆಣಸು ಬೆಳೆಗಾರನೂ ಗಮನಿಸಬೇಕಾದುದು ಎಂದರೆ ಮೆಣಸಿನ ಬಳ್ಳಿ ಅಥವಾ ಸಸಿ ನೆಡುವಾಗ ರೈತರು ಒಂದೇ ಬಳ್ಳಿ ನೆಡುವುದು ಕಡಿಮೆ. ಎರಡು , ಮೂರು ಬಳ್ಳಿಗಳನ್ನು ನೆಟ್ಟಿರುತ್ತಾರೆ, ಎರಡು ಮೂರು ಬಳ್ಳಿಗಳೂ ಬದುಕಿ ಉಳಿದರೆ ಅದರ ಮೂರೂ ಕಾಂಡವೂ ಆಸರೆಗೆ ಹಬ್ಬಿರುತ್ತದೆ. ಶಿಲೀಂದ್ರ ಸೋಂಕು ಒಂದಕ್ಕೆ ಬಾಧಿತವಾಗಿ ಉಳಿದವು ಬಾಧಿತವಾಗಿರದೇ ಇರಬಹುದು. ಇಂತಹ ಸಂದರ್ಭದಲ್ಲಿ ಹಾಳಾದ ಬಳ್ಳಿ ಎಂದು ಉಪಚಾರ ಮಾಡದೆ ಇರಬಾರದು. ನಾವು ಮಾಡುವ ಉಪಚಾರ  ರೋಗ ಸೋಂಕು ತಗಲದ ಅಥವಾ ಇನ್ನೇನೂ ತಗಲಬಹುದೆಂದಿರುವ ಬಳ್ಳಿಯ ಜೀವವನ್ನು ರಕ್ಷಿಸುತ್ತದೆ. ಅದು ರೋಗಕ್ಕೆ ತುತಾಗುವುದಿಲ್ಲ.

ಕರೆಗಳು ಕಪ್ಪಾಗಿವೆಯೇ-ಉದುರಿವೆಯೇ:

ಕರೆಗಳಿಗೆ ರೋಗ ಬಂದಾಗ ಹೀಗೆ ಆಗುತ್ತದೆ

ಕರೆಗಳಿಗೆ ರೋಗ ಬಂದಾಗ ಹೀಗೆ ಆಗುತ್ತದೆ

  • ಮೆಣಸಿನ ಬಳ್ಳಿಯಲ್ಲಿ ಕರೆಗಳು ಉದುರುತ್ತಿರಬಾರದು.
  • ಮಾನವಕೃತ ಅಥವಾ ಇನ್ಯಾವುದೋ ಭೌತಿಕ ಕಾರಣಗಳಿಂದ ಉದುರಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ.
  • ಅಂತಹ ಕರೆಯನ್ನು ಅಲ್ಲಿಂದ ತೆಗೆದು ಬಿಸಿ ನೀರು ಕಾಯಿಸುವ ಒಲೆಗೆ ಹಾಕಿ.
  • ಯಾವುದೇ ಘಾಸಿ ಆಗದೆ ಕರೆಗಳು ಉದುರಿರುವುದು ಕಂಡು ಬಂದರೆ  ಆ ಬಳ್ಳಿಗೆ ರೋಗದ ಸೋಂಕು ತಗಲಿದೆ ಎಂದರ್ಥ.
  • ಅದಕ್ಕೆ ತಕ್ಷಣ ಉಪಚಾರ ಮಾಡಬೇಕು.

 ಎಲೆಗಳಲ್ಲಿ ಕಪ್ಪು ಚುಕ್ಕೆ ಇದೆಯೇ?

ಕರೆ ಉದುರಿದ್ದರೆ ಬಳ್ಳಿ ಬದುಕಿಸುವುದು ಕಷ್ಟ

ಕರೆ ಉದುರಿದ್ದರೆ ಬಳ್ಳಿ ಬದುಕಿಸುವುದು ಕಷ್ಟ

  • ಕೆಳಭಾಗದ ಅಥವಾ ನೆಲದಲ್ಲಿ ಹಬ್ಬಿರುವ ಬಳ್ಳಿಯ  ಎಲೆಗಳಲ್ಲಿ ಕಪ್ಪಗೆ ಕೊಳೆತ ಚುಕ್ಕೆ ಕಂಡು ಬಂದರೆ  ಆಲ್ಲಿಯೂ ಶಿಲೀಂದ್ರ ಸೋಂಕು ಉಂಟಾಗಿದೆ ಎಂದರ್ಥ.
  • ಇಂತಹ ಬಳ್ಳಿಯ ಕಪ್ಪು ಚುಕ್ಕೆ  ಕಂಡು ಬಂದ ಎಲೆಗಳನ್ನು ತುಂಡು ಮಾಡಿ ತೆಗೆದು, ಅದನ್ನು ಸುಡಬೇಕು.
  • ಯಾವುದೇ ಕಾರಣಕ್ಕೆ ಅಲ್ಲಿ ಅದನ್ನು ಬಿಡಭಾರದು.
  • ತಕ್ಷಣ ಸೋಂಕು ಹರಡದ ಅಥವಾ ಸೋಂಕು ಹೆಚ್ಚಾಗದ ಔಷಧಿಯನ್ನು ಸಿಂಪರಣೆ ಮಾಡಬೇಕು.

ಎಲೆ ಅಲಗುಗಳು ಒಣಗಿದೆದೆಯೇ?

ಎಲೆ ಹೀಗೆ ಆದರೆ ಬಳ್ಳಿ ಬದುಕಿಸಬಹುದು

ಎಲೆ ಹೀಗೆ ಆದರೆ ಬಳ್ಳಿ ಬದುಕಿಸಬಹುದು

  • ಇದೂ ಸಹ ರೋಗ ಸೋಂಕಿನ ಲಕ್ಷಣ. ಇಂತಹ ಎಲೆಗಳು ನೈಜ ಹಸುರು ಬಣ್ಣದಲ್ಲಿ ಇರುವುದಿಲ್ಲ.
  •  ಬಿಳುಚಿಕೊಂಡು ಇರುತ್ತದೆ. ಅಂತಹ ಬಳ್ಳಿಗಳಿಗೆ ತಕ್ಷಣ ಉಪಚಾರ ಮಾಡಬೇಕು.
  • ಎಲೆಗಳು ಒಂದೆರಡು ಬಿಸಿಲು ಬಂದ ತಕ್ಷಣ ಬಾಡಿದೆಯೇ, ಅ ಬಳ್ಳಿಗೆ ಸೋಂಕು ತಗಲಿದೆ.
  • ಅದನ್ನು ತಕ್ಷಣ ಉಪಚಾರ ಮಾಡಬೇಕು. ಎಲೆ ಬಾಡಿದ್ದರೆ ಸೋಂಕು ನಿವಾರಕವಲ್ಲದೆ ತಕ್ಷಣ ಆಹಾರ ಲಭ್ಯವಾಗುವಂತೆ ಮಾಡಲು ಪೋಷಕಾಂಶದ ಸಿಂಪರಣೆ ಅಗತ್ಯ.
ಬಳ್ಳಿ ಬುಡ ಹೀಗೆ ಆದರೆ ಬಳ್ಳಿ ಆಸೆ ಬಿಡಿ.

ಬಳ್ಳಿ ಬುಡ ಹೀಗೆ ಆದರೆ ಬಳ್ಳಿ ಆಸೆ ಬಿಡಿ.

ಯಾವ ಔಷಧಿ ಸಿಂಪಡಿಸಬೇಕು:

  • ಸಾಮಾನ್ಯವಾಗಿ ರೂಢಿಯಲ್ಲಿರುವ ಔಷಧಿ ಬೋರ್ಡೋ ದ್ರಾವಣ.ಶೇ. 1 ರ ಬೋರ್ಡೋ ದ್ರಾವಣವನ್ನು ಎಲೆಗೆ , ಬಳ್ಳಿಯ ದಂಟಿಗೆ ಹಾಗೂ ಬುಡ ಭಾಗಕ್ಕೆ ಸುಮಾರು 2-3 ಲೀ. ಬೀಳುವಂತೆ ಸಿಂಪರಣೆ ಮಾಡಬೇಕು.
  • ಅದಲ್ಲದಿದ್ದರೆ ಪೊಟ್ಯಾಶಿಯಂ ಫೋಸ್ಪೋನೇಟ್  2.5 ಅಥವಾ 3  ಗ್ರಾಂ 1 ಲೀ. ನೀರಿಗೆ ಬೆರೆಸಿ ಅದರ ಜೊತೆಗೆ 200 ಲೀ. ನೀರಿಗೆ 1 ಕಿಲೋ ಮೊನೋ ಪೊಟ್ಯಾಶಿಯಂ ಫೋಸ್ಫೇಟ್ ಮತ್ತು 100  ಗ್ರಾಂ ಸೂಕ್ಷ್ಮ ಪೊಷಕಾಂಶವನ್ನು ಮಿಶ್ರಣ  ಮಾಡಿ ಸಿಂಪರಣೆ ಮಾಡಬೇಕು.
  • ಇದು ಗರಿಷ್ಟ ಫಲಿತಾಂಶವನ್ನು ಕೊಡುತ್ತದೆ.
  • ಕೆಲವರು ಕಾಪರ್ ಆಕ್ಸೀ ಕ್ಲೋರೈಡ್ ಬಳಸುತ್ತಾರೆ. ಮೆಟಲಾಕ್ಸಿಲ್ ಬಳಸುತ್ತಾರೆ.
  • ಅದೂ ಸಹ ಫಲಿತಾಂಶ ಕೊಡುತ್ತದೆ.ರೋಗ ನಿವಾರಣೆ ಎಂಬುದು ಅದೃಷ್ಟ ಪರೀಕ್ಷೆ ಆದ ಕಾರಣ ದುಬಾರಿ ಖರ್ಚು ಮಾಡಬೇಡಿ.

 ಈಗ ಬಿಸಿಲು ಪ್ರಾರಂಭವಾಗಿದೆ. ಇಂದು ನಾಳೆಯ ಒಳಗೆಯೇ ಕರಿಮೆಣಸಿನ ಬಳ್ಳಿಯಲ್ಲಿ ಎಲೆ ಬಾಡುವಿಕೆ ಗೋಚರವಾಗಬಹುದು. ಇದನ್ನು ಗಮನಿಸುತ್ತಿರಿ. ಎಲೆ ಬಾಡಿದರೆ ರೋಗ ಸೋಂಕು ತಗಲಿದೆ ಎಂದರ್ಥ.ತಕ್ಷಣ ಉಪಚಾರ ಕ್ರಮ ಕೈಗೊಳ್ಳಿ.
end of the article:—————————————————————-
Pepper cultivation# pepper garden management# pepper disease # disease management in pepper# Phytophthora foot rot# Phytophthoa capsici # disease symptoms of black pepper#  Foliar infection# collar infection#leaf yellowing# Spike damage of pepper#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!