ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ
ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ ಯಾವ ಕಶ್ಮಲ ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…