ಬೇಗ ಮಳೆ ಬರುವ ಸೂಚನೆ ಇದೆ- ಎಚ್ಚರ.
ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು. ನಮ್ಮ ಹಿರಿಯರು ಕೆಲವು ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ. ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ. ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ. ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ. ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಇದು ನಿಜವಾಗುತ್ತದೆ. ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ…