ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?
ಮಣ್ಣು ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು, ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ…