ಅಂಡರ್ ಗ್ರೌಂಡ್ ಡ್ರೈನೇಜ್ – ನೀರು ಬಸಿಯಲು ಸುಲಭ- ಶಾಶ್ವತ ವ್ಯವಸ್ಥೆ.
ಅಡಿಕೆ ತೋಟ, ತೆಂಗಿನ ತೋಟ ಅಥವಾ ಇನ್ಯಾವುದೇ ಬೇಸಾಯದ ಹೊಲದಲ್ಲಿ ನೆಲದಿಂದ ಒಸರುವ (ಒರತೆ) ನೀರನ್ನು ಅಡಿಕೆಯಲ್ಲೇ ಬಂಧಿಸಿ ಅದನ್ನು ವಿಲೇವಾರಿ ಮಾಡಲು ಇರುವ ಅತ್ಯುತ್ತಮ ವ್ಯವಸ್ಥೆಯೊಂದಿದ್ದರೆ ಅದು ಅಂಡರ್ ಗ್ರೌಂಡ್ ಡೈನೇಜ್. ಈ ವ್ಯವಸ್ಥೆ ಮಾಡಿಕೊಂಡರೆ ಜೌಗು ಜಾಗವನ್ನೂ ಒಣ ಜಾಗವನ್ನಾಗಿ ಪರಿವರ್ತಿಸಬಹುದು. ತೋಟದಲ್ಲಿ ಓಡಾಡುವಾಗ ಯಾವುದೇ ಬಸಿಗಾಲುವೆ ಕಾಣುವುದಿಲ್ಲ. ನೆಲದಲ್ಲಿ ಒರತೆ ರೂಪದಲ್ಲಿ ಹೊರ ಉಕ್ಕುವ ನೀರನ್ನು ಅಲ್ಲೇ ಟ್ಯಾಪ್ ಮಾಡಿ, ಮೇಲೆ ಬಾರದಂತೆ ತಡೆಯುವ ವ್ಯವಸ್ಥೆಗೆ ಅಂಡರ್ ಗ್ರೌಂಡ್ ಡ್ರೈನೇಜ್ ಎಂದು ಹೆಸರು….