ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.
ತಜ್ಞರು ಕ್ಷೇತ್ರ ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ. ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ…