ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.

ತಜ್ಞರು ಕ್ಷೇತ್ರ  ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ.
ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ  ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ ವಾತಾವರಣವೂ ಇರಬೇಕಲ್ಲವೇ?

Farmers always in tension

  • ಸರಕಾರ ಕೃಷಿಕರಿಗೆ ಅನುಕೂಲವಾಗಲೆಂದು ಅವನ ಸಾಲ ಮನ್ನಾ ಮಾಡಬಹುದು.
  • ಒಂದಷ್ಟು ದುಡ್ಡು ಕೊಡಬಹುದು.
  • ಕೃಷಿ ಕಾಯಿದೆಯಂತಹ ಮಾರುಕಟ್ಟೆ ಅನುಕೂಲತೆ ಮಾಡಿಕೊಡಬಹುದು.
  • ಇದಕ್ಕಿಂತೆಲ್ಲಾ ಅಗತ್ಯವಾಗಿ ಅವನ ನೆಮ್ಮದಿ ಕೆಡಿಸುವ ಕೆಲವು ಸುಧಾರಣೆಗಳನ್ನು ಮಾಡುವುದು ಅಗತ್ಯ.

ರೈತರ ನೆಮ್ಮದಿ ಹಾಳು ಮಾಡುವ ಸಂಗತಿಗಳು:

  • ಕೃಷಿಕರ ಜೀವಮಾನವನ್ನೇ ತೆಲೆಬಿಸಿಗಳಲ್ಲಿ ಕಳೆಯುವಂತೆ  ಮಾಡುವ ಜ್ವಲಂತ ಸಮಸ್ಯೆಗಳೆಂದರೆ ಹೊಲದ ಗಡಿ ತಕರಾರುಗಳು, ಅತಿಕ್ರಮ, ದಾರಿ, ನೀರು, ವಿದ್ಯುತ್, ಆಸ್ತಿಯ ಪಾಲು, ಇವೇ ಮುಂತಾದವುಗಳು.
  • ಇವೆಲ್ಲಾ ಮಾತುಕತೆಯ ಮೂಲಕ ,ಅಥವಾ ನ್ಯಾಯಾಲಯದ ಮೂಲಕ ಇತ್ಯರ್ಥವಾಗುವ ವಿಚಾರಗಳಲ್ಲ.
  • ಇದರಲ್ಲಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳುವವರೇ ಆಗಿರುತ್ತಾರೆ.
  • ಇದಕ್ಕಾಗಿ ಕೃಷಿಕ ತನ್ನ ಜೀವಮಾನದ ಅರ್ಜನೆಯ ಕನಿಷ್ಟ 10-15 % ಖರ್ಚು  ಮಾಡಿದರೂ ಸಮಸ್ಯೆ ಕೊನೆಯ ತನಕವೂ ಇತರ್ಥವಾಗುವುದೇ ಇಲ್ಲ.
  • ಅದು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಮುಂದುವರಿಯುತ್ತದೆ.
  • ಕೃಷಿಕ ಎಂದರೆ ಅವನ ಹೊಲಕ್ಕೆ ಒಂದು ವಿಸ್ತೀರ್ಣದ  ಲೆಕ್ಕಾಚಾರ ಇರುತ್ತದೆ.ಬಹುತೇಕ ಕೃಷಿಕರ ಹೊಲದಲ್ಲಿ  ಬೌಂಡರಿ ತಕರಾರುಗಳು ಸಾಮಾನ್ಯವಾಗಿರುತ್ತವೆ.
  • ಪಕ್ಕದವನ ಅತಿಕ್ರಮ ಮುಂತಾದ ರಗಳೆಗಳು ಬಹುತೇಕ ಎಲ್ಲರ ಕೃಷಿ ಭೂಮಿಯಲ್ಲೂ ಇರುವ ರಗಳೆಗಳಾಗಿರುತ್ತದೆ.
  • ಇದು ಕೊನೆಗಾಣುವ  ಸಮಸ್ಯೆ ಅಲ್ಲ. ನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ.
  • ಈ ರಗಳೆ ಕಂದಾಯ ಇಲಾಖೆಗೆ ತಲುಪುತ್ತದೆ. ಕೆಲವೊಮ್ಮೆ ಸಿವಿಲ್ ಹೋಗಿ ಕ್ರಿಮಿನಲ್ ಆಗುತ್ತದೆ.
  • ಕೋರ್ಟು ಕಚೇರಿಗಳ ಬಾಗಿಲಿನಲ್ಲಿ ಕೃಷಿಕ  ಅಲೆಯಬೇಕಾಗುತ್ತದೆ.

ಇದೆಲ್ಲಾ ಕೃಷಿಕನ ಜೀವನದಲ್ಲಿ ನಿತ್ಯ ನೆಮ್ಮದಿಯನ್ನು ಕೆಡಿಸುವ ಸಮಸ್ಯೆಗಳಾಗಿದ್ದು, ಇದನ್ನು ಪರಿಸಮಾಪ್ತಿ ಗೊಳಿಸುವರೇ ಮಾಡುವ ಖರ್ಚು ಉಳಿದರೆ ಕೃಷಿಕ ನಿಜವಾಗಿಯೂ ತನ್ನವೃತ್ತಿ ಮಾಡಿಕೊಂಡು  ನೆಮ್ಮದಿಯ ಜೀವನ ನಡೆಸಬಲ್ಲ. ಆದರೆ ಇದು ಯಾವುದೂ ಯಾರಿಂದಲೂ ಇತ್ಯರ್ಥವಾಗದ ಸಮಸ್ಯೆಯಾಗಿರುತ್ತದೆ.

Woman Farmer

ಇದಕ್ಕೇನು ಪರಿಹಾರ:

  • ಸರಕಾರ ಕೃಷಿಕರಿಗಾಗಿ ಏನೇನೋ ಮಾಡುವ ಬದಲಿಗೆ ಇಂತಹ ಸಮಸ್ಯೆಗಳು ಯಾರಲ್ಲೂ ಯಾವ ಕಾಲದಲ್ಲೂ ಉದ್ಭವವಾಗದಂತೆ ತಡೆಯುವ ಕೆಲವು ಸುಧಾರಣೆಗಳನ್ನು  ತರುವುದು ಸೂಕ್ತ.
  • ಕೃಷಿಕನಿಗೆ ಭೂಮಿಯ ಮೇಲೆ ಬರೇ ಕೃಷಿ ಮಾಡುವ ಹಕ್ಕು ಮಾತ್ರ ಇರಬೇಕು.
  • ಅದನ್ನು ಮಾರಾಟ ಮಾಡುವುದು, ವ್ಯವಹಾರ ಮಾಡುವುದು ಮುಂತಾದ ಹಕ್ಕುಗಳನ್ನು ಮೊಟಕುಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ.
  • ಯಾವಾಗಲೂ ಒಂದು ವಸ್ತುವಿಗೆ ಮಾರುಕಟ್ಟೆ ಮೌಲ್ಯ ಇದ್ದಾಗ ಮಾತ್ರ ಅದು ತನಗೆ ಬೇಕು.
  • ತನ್ನ ಮಕ್ಕಳಿಗೆ ಬೇಕು ಎಂದು ಅದನ್ನು ಹೊಂದಲು ಎಲ್ಲರೂ ಹವಣಿಸುತ್ತಾರೆ.
  • ಮಾರುಕಟ್ಟೆ ಮೌಲ್ಯವೇ ಇಲ್ಲದಾದರೆ ಅದನ್ನು ಹೊಂದಲು ಹೆಚ್ಚು ಪೈಪೋಟಿ ಇರುವುದಿಲ್ಲ.
  • ಒಂದು ತಂದೆಗೆ ನಾಲ್ಕು ಮಕ್ಕಳಿದ್ದರೆ ಕೃಷಿ ಮಾಡುವುದಕ್ಕೆ ಮಾತ್ರ ಭೂಮಿ ಎಂದಾದರೆ, ಪಾಲು ಕೇಳುವ ಗಂಡು ಮಕ್ಕಳು ಹೆಣ್ಣ್ಣು ಮಕ್ಕಳು ಅದರ ಬಯಕೆಯಿಂದ ಹಿಂಜರಿಯುತ್ತಾರೆ.
  • ಆಗ ಕೃಷಿ ಮಾಡುವ ಆಸಕ್ತರು ಮಾತ್ರ ಅಲ್ಲಿ ಉಳಿಯುತ್ತಾರೆ.
  • ಭೂಮಿಯ ವ್ಯಾಜ್ಯಗಳು ಬಹುತೇಕ ಕಡಿಮೆಯಾಗಿ, ರೈತರು ಕೃಷಿ ಮಾಡುವುದನ್ನು ಬಿಟ್ಟು,ಪೋಲೀಸು, ಕೋರ್ಟು, ವಕೀಲರು, ಕಚೇರಿಗಳನ್ನು ಅಲೆಯುವುದು ನಿಲ್ಲುತ್ತದೆ.
  • ಎಲ್ಲಾ ಸೌಭಾಗ್ಯಗಳೂ ಇರುವುದು ನೆಮ್ಮದಿಯ ಜೀವನವನ್ನು ಅನುಭವಿಸಲಿಕ್ಕೆ.
  • ಪ್ರಸ್ತುತ ಅದಕ್ಕೆ ಕೃಷಿ ವ್ಯವಸ್ಥೆಯಲ್ಲಿ ಆತಂಕ ಉಂಟಾಗಿದೆ.
  • ನೆರೆ ಹೊರೆಯವರ ಕ್ಷುಲ್ಲಕ ಗಡಿ ತಕರಾರುಗಳು ಜೈಲಿನ ತನಕ ಹೋದ ಹಲವಾರು ನಿದರ್ಶನಳಿದ್ದು,
  • ಮುಯ್ಯಿಗೆ ಮ್ಮುಯ್ಯಿ ತೀರಿಸುತ್ತಾ, ತಲೆಮಾರಿನಿಂದ ತಲೆಮಾರಿಗೆ ಹಗೆತನ ಬೆಳೆಯುತ್ತಾ ಮುಂದುವರಿಯುತ್ತದೆ.
  • ಇದಕ್ಕೆ  ಅಂತ್ಯ ಕಾಣಿಸುವ ಯಾವುದಾದರೂ ಸುಧಾರಣೆಯನ್ನು ಸರಕಾರ ತಂದರೆ ನಿಜಕ್ಕೂ ಕೃಷಿಕರಿಗೆ ಮಾಡುವ ಮಹಾನ್ ಕೊಡುಗೆ ಎನ್ನಿಸುವುದು.
  • ಸರಕಾರ ಇಂತಹ ಸುಧಾರಣೆ ತಂದರೆ ಅದು ನಿಜಕ್ಕೂ ಐತಿಹಾಸಿಕವೆನಿಸುವುದು.

ಕೃಷಿ ಕಾಯಿದೆ ಬದಿಗಿರಲಿ. ಮೊದಲು ಕೃಷಿಕನಿಗೆ ನೆಮ್ಮದಿಯ ಬದುಕು ನಡೆಸುವ ವಾತಾವರಣವನ್ನು ಸೃಷ್ಟಿಸಲಿ. ಸರಕಾರ ತನ್ನದೇ ಇಲಾಖೆಗಳ (ಕಂದಾಯ, ನೋಂದಣಿ, ಪೋಲೀಸ್ ) ಲಾಭಕ್ಕಾಗಿ ರೈತರನ್ನು ಅಪರೋಕ್ಷವಾಗಿ ಸುಲಿಗೆ ಮಾಡುವುದನ್ನು ಬಿಟ್ಟು, ಅವನಿಗೆ ನೆಮ್ಮದಿಯನ್ನು ಕೊಡುವ ಕೆಲಸ ಮಾಡಲಿ.

error: Content is protected !!