
ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.
ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…