ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ.

ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು ಹಾಗೂ ಅದರ ತಳಿ ಗುಣಗಳಿಂದ.  ಈ ರುಚಿಯನ್ನು ಹೆಚ್ಚಿಸಿಕೊಡುವಲ್ಲಿ ಫಲವತ್ತಾದ ಮಣ್ಣಿನ ಪಾತ್ರ ಮಹತ್ವದ್ದು. ಫಲವತ್ತತೆ ಇಲ್ಲದ ಮಣ್ಣಿನಲ್ಲಿ ಬೆಳೆದರೆ ಅದರ ರುಚಿ ಅಷ್ಟಕ್ಕಷ್ಟೇ.

farmer selling water melon as Local fruit
  • ಕೆಲವು ಪ್ರದೇಶಗಳಲ್ಲಿ ಬೆಳೆದ ಮಾವಿನ ಹಣ್ಣಿಗೆ ಅದರದ್ದೇ ಆದ ರುಚಿ ಇರುತ್ತದೆ.
  • ರತ್ನಗಿರಿ, ವೆಂಗುರ್ಲಾ ಪ್ರದೇಶಗಳಲ್ಲಿ ಜಂಬಿಟ್ಟಿಗೆ ಮಣ್ಣಿನಲ್ಲಿ ಬೆಳೆದ ಆಪೂಸು ಹಣ್ಣಿನ ರುಚಿ,
  • ಅದೇ ಪ್ರದೇಶದಲ್ಲಿ  ತಗ್ಗು ಅಥವಾ ಸಾಧಾರಣ ಮಣ್ಣು ಇರುವ ಪ್ರದೇಶದಲ್ಲಿ ಬೆಳೆದ ಹಣ್ಣಿಗೆ ಇರುವುದಿಲ್ಲ.
  • ಅದೇ ರೀತಿಯಲ್ಲಿ ಉಡುಪಿಯ ಮಟ್ಟು ಎಂಬಲ್ಲಿ ಬೆಳೆದ ಬದನೆಯ ರುಚಿ ಉಳಿದೆಡೆ ಬೆಳೆದುದಕ್ಕೆ ಇಲ್ಲ ಎನ್ನುತ್ತಾರೆ.
  • ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಬೆಳೆಯುವ ಕಲ್ಲಂಗಡಿಯ ರುಚಿ ಬೇರೆ ಕಡೆಯ ಕಲ್ಲಂಗಡಿಗೆ ಬರಲಾರದು ಎನ್ನುತ್ತಾರೆ.
  • ಚಾಲಿ ಅಡಿಕೆಯಲ್ಲಿ  ವಿಟ್ಲ ಅಡಿಕೆಯ ಗುಣಮಟ್ಟವೇ ಭಿನ್ನ.
  • ಇದೆಲ್ಲಾ  ಇಲ್ಲಿನ ಮಣ್ಣಿನ ಗುಣದ ಮೇಲೆ ಅವಲಂಭಿಸಿರುತ್ತದೆ.
  • ಕೆಲವು  ಮಣ್ಣಿನಲ್ಲಿರುವ ಅಂತರ್ಗತ ಶಕ್ತಿ ಆ ಹಣ್ಣು ಹಂಪಲು, ಧವಸ-ಧಾನ್ಯ, ತರಕಾರಿಗಳಿಗೆ ರುಚಿ ಕೊಡುತ್ತದೆ. ಕಾಪಿಡುವ ಶಕ್ತಿ ಕೊಡುತ್ತದೆ.
  • ಪ್ರಸಿದ್ದ ಕ್ಷೇತ್ರ ಪೊಳಲಿಯ ಗದ್ದೆಗಳಲ್ಲಿ ಬೆಳೆದ ಕಲ್ಲಂಗಡಿಗೆ ಇರುವ ರುಚಿಯೂ ಅಲ್ಲಿನ ಮಣ್ಣಿನ ಫಲವತ್ತತೆಯ ಕಾರಣದಿಂದಲೇ ಬಂದಿದೆ.
  • ಪಲ್ಘುಣಿ ನದಿಯ ಮುಖಜಭೂಮಿಯಾದ ಕಾರಣ ಅಲ್ಲಿ ಫಲವತ್ತಾದ ಮಣ್ಣು ಶೇಖರಣೆ ಆಗಿರುತ್ತದೆ.

ಫಲವತ್ತಾದ ಮಣ್ಣು ಯಾವುದು:

commercial production depleted the taste
ವಾಣಿಜ್ಯ ಕೃಷಿಯಿಂದಾಗಿ ರುಚಿ ಕಡಿಮೆಯಾಗುತ್ತಿದೆ.
  • ಫಲವತ್ತಾದ ಮಣ್ಣು ಎಂದರೆ ಅದು ಸಾವಯವ ಸಮೃದ್ಧವಾದ ಮಣ್ಣು.
  • ಸರಳವಾಗಿ ಹೇಳಬೇಕೆಂದರೆ ನದೀ ಮುಖಜ ಭೂಮಿಗಳಲ್ಲಿ ನೆರೆಗೆ ಬಂದು ಸಂಗ್ರಹವಾದ ಸಾವಯವ ತ್ಯಾಜ್ಯಗಳು ಕೆಲವು ವರ್ಷಗಳ ತರುವಾಯ ಫಲವತ್ತಾದ ಮಣ್ಣಾಗುತ್ತದೆ.
  • ಸಿಂಧೂ ನದಿಯ ಮುಖಜ ಭೂಮಿ, ಗಂಗಾ ನದಿಯ ಮುಖಜ ಭೂಮಿ, ಇಲ್ಲೆಲ್ಲಾ ಬೆಳೆಯುವ ಕೆಲವು ಬೆಳೆಗಳು ಜಗತ್ ಪ್ರಸಿದ್ಧಿಯನ್ನು ಪಡೆದಿವೆ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ.
  • ಈಗಿನ ಪಾಕಿಸ್ತಾನಕ್ಕೆ ಸೇರಿರುವ ಸಿಂಧು ಪ್ರಾಂತ್ಯದಲ್ಲಿ ಬೆಳೆಯುವ ಬಾಸುಮತಿ ಅಕ್ಕಿ, ಅದರ ರುಚಿ ಮತ್ತು ಶ್ರೇಷ್ಟತೆಗೆ ಅಲ್ಲಿನ ಮಣ್ಣೇ ಕಾರಣ. 
  • ನದೀ ಮುಖಜ ಭೂಮಿಯಲ್ಲಿ ಮಣ್ಣು ಕೊಚ್ಚಿ ಹೋಗುವುದು ಕಡಿಮೆ.
  • ಅಲ್ಲಿ ನದಿ ಸಮುದ್ರಕ್ಕೆ ಹತ್ತಿರವಾಗಿರುತ್ತದೆ. ನೀರು ನಿಂತು ಚಲಿಸುತ್ತದೆ.
  • ಎಲ್ಲಾ ಸಾವಯವ ತ್ಯಾಜ್ಯಗಳನ್ನು ಸಾಗರ ಸ್ವೀಕರಿಸದೆ ಅದನ್ನು ನದಿಯು ತನ್ನ ಮುಖಜ ಭೂಮಿಯಲ್ಲೇ ಬಿಟ್ಟು ಬರಲು ಹೇಳುತ್ತದೆ.
  • ಅದೆಲ್ಲವೂ ತಂಗಿ ಅಲ್ಲಿ ಉತ್ತಮ ಗುಣಮಟ್ಟದ ಮಣ್ಣು ಶೇಖರಣೆ ಆಗುತ್ತದೆ.
  • ಅದು ವರ್ಷಾನು ವರ್ಷ ಕಳೆದಾಗ ಆವೆ ಮಣ್ಣಾಗಿ ಪರಿವರ್ತನೆಯಾಗುತ್ತದೆ.
  • ಇದು ಸಂತೃಪ್ತ ಮಣ್ಣು. ಇದರ ರಸ ಸಾರ ಸಹ ತಟಸ್ತವಾಗಿರುತ್ತದೆ. 
  • ಇಂತಹ ಮಣ್ಣು ಉತ್ತಮ ಮಣ್ಣು ಎಂದು ಪರಿಗಣಿಸಲ್ಪಡುತ್ತದೆ. 
  • ಇಲ್ಲಿ ಯಾವುದೇ ಬೆಳೆ ಬೆಳೆದರೂ ಅದಕ್ಕೆ ಗುಣಮಟ್ಟ ಇರುತ್ತದೆ. ರುಚಿ ಇರುತ್ತದೆ. ಇಳುವರಿಯೂ ಹೆಚ್ಚು ಇರುತ್ತದೆ.
  • ನಮ್ಮ ರಾಜ್ಯದಲ್ಲಿ 8 ಕೃಷಿ ವಲಯಗಳಲ್ಲಿ ಶಿವಮೊಗ್ಗ ಜಿಲ್ಲೆಯ ಮಣ್ಣನ್ನು ಈ ವರ್ಗದಲ್ಲಿ ಸೇರಿಸಲಾಗಿದೆ.
  • ಹಾಗೆಂದು ಬೇರೆ ಕಡೆಗಳಲ್ಲಿ ಇಂತಹ ಮಣ್ಣು ಇಲ್ಲ ಎಂದಲ್ಲ. ಇದೆ.
  • ಅದು ಕೆಲವು ಭಾಗಗಳಲ್ಲಿ ಮಾತ್ರ ಕಂಡು ಬರುತ್ತದೆ.
  • ಇಂತಹ ಪ್ರದೇಶಗಳಲ್ಲಿರುವ ಫಲವತ್ತಾದ ಮಣ್ಣನ್ನು ಇಟ್ಟಿಗೆ, ಹಂಚು ತಯಾರಿಸಲು  ಖಾಲಿ ಮಾಡಲಾಗುತ್ತದೆ.

ಹಿಂದೆ ನಮ್ಮ ಹಿರಿಯರು ಬೆಳೆಯುತ್ತಿದ್ದ ತರಕಾರಿ ಹಣ್ಣು ಹಂಪಲು ಧವಸ ಧಾನ್ಯಗಳಲ್ಲಿ ರುಚಿ ಇತ್ತು. ಈಗ ಇಲ್ಲ ಎನ್ನುತ್ತಾರೆ. ಅದು ಸತ್ಯ. ಕಾರಣ ಅವರು ಅದನ್ನು ಫಲವತ್ತಾದ ಮಣ್ಣಿನಲ್ಲಿ ಬೆಳೆಯುತ್ತಿದ್ದರು.

local bitter gourd demand is high
ನಾಟೀ ತರಕಾರಿಗಳಿಗೆ ಬೇಡಿಕೆ ಹೆಚ್ಚು ರುಚಿ ಹೆಚ್ಚು

ಮಣ್ಣಿನ ಫಲವತ್ತತೆ ಹೆಚ್ಚಿಸುವ ಮಾರ್ಗೋಪಾಯ:

  • ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬೇಕಾಗುವುದು ಸಾವಯವ ವಸ್ತುಗಳು ಮಾತ್ರ.
  • ಪ್ರಕೃತಿಯಲ್ಲಿ ಮೊದಲಾಗಿ ಸೃಷ್ಟಿಯಾದದ್ದು, ಹಾವಸೆ, ಪಾಚಿ ಮುಂತಾದ ಕೆಳಸ್ಥರದ ಸಸ್ಯಗಳು.
  • ಆ ನಂತರ ಗಿಡಗಂಟಿಗಳು ಬೆಳೆದವು. ಕ್ರಮೇಣ ಮರಮಟ್ಟುಗಳು ಸೃಷ್ಟಿಯಾದವು.
  • ಇವೆಲ್ಲಾ ಒಂದಿಲ್ಲೊಂದು ದಿನ ಆಯುಷ್ಯ ಮುಗಿದು ಮಣ್ಣಿಗೆ ಸೇರಲೇ ಬೇಕು.
  • ಹಾಗೆ ಮಣ್ಣಿಗೆ ಸೇರಲ್ಪಟ್ಟ ಸಾವಯವ ತ್ಯಾಜ್ಯಗಳು ಮಣ್ಣನ್ನು ಫಲವತ್ತಾಗಿಸುತ್ತಾ ಬಂದಿವೆ.
  • ಅದು ಕೆಲವು ಪ್ರದೇಶಗಳಲ್ಲಿ ಹೆಚ್ಚು ಇರಬಹುದು.
  • ಕೆಲವು ಪ್ರದೇಶಗಳಲ್ಲಿ ತೀರಾ ಕಡಿಮೆ ಇರಬಹುದು.
  • ಫಲವತ್ತತೆ ಎಂಬುದು ಶಾಶ್ವತ ಅಲ್ಲ. ಅದು ಬೆಳೆಗಳು ಬಳಕೆ (Utilised for plant growth) ಮಾಡಿದಂತೆ ಉಪಯೋಗಿಸಲ್ಪಟ್ಟು ಕಡಿಮೆಯಾಗುತ್ತಾ ಬರುತ್ತದೆ.
  • ಅದ ಕಾರಣ ಅದನ್ನು ಮತೆ ಮತ್ತೆ ಸೇರಿಸುತ್ತಾ ಬರಬೇಕು.
  • ಸಾವಯವ ತ್ಯಾಜ್ಯಗಳು ಎಂದರೆ ಅದು ಸ್ಥೂಲ ವಸ್ತುಗಳು ( bulk) ಅಗಿರಬೇಕು.
  • ಚಮಚದಲ್ಲಿ ಹಾಕುವುದು, ಸಿಂಪರಣೆಯಲ್ಲಿ ಕೊಡುವುದು ಇದೆಲ್ಲಾ ತಾತ್ಕಾಲಿಕ
look and attraction key factor now

ಮಣ್ಣಿಗೆ ಸಾವಯವ ವಸ್ತುಗಳನ್ನು ನಿರಂತರವಾಗಿ ಸೇರಿಸುತ್ತಾ ಬಂದು ಮಣ್ಣಿನ ಬೌತಿಕ (Phiscal condition) ರಚನೆಯನ್ನು ಉತ್ತಮಪಡಿಸುತ್ತಾ ಇರಬೇಕು. ಆಗ ಮಣ್ಣು ಫಲವತ್ತತೆ ಹೆಚ್ಚುತ್ತದೆ. ಅಂತಹ ಮಣ್ಣಿನಲ್ಲಿ ಬೆಳೆದ ಯಾವುದೇ ಕೃಷಿ ಉತ್ಪನ್ನಕ್ಕೆ ರುಚಿಯೂ ಇರುತ್ತದೆ, ಇಳುವರಿಯೂ ಚೆನ್ನಾಗಿ ಬರುತ್ತದೆ. ಅಲ್ಲಿ ಬೆಳೆದ ಬೆಳೆಗೆ ರೋಗ ಕೀಟಗಳಿಗೆ  ನಿರೋಧಕ ಶಕ್ತಿಯೂ ಇರುತ್ತದೆ. ರಸ ಗೊಬ್ಬರಗಳನ್ನು ಪೂರೈಸಿದಾಗಲೂ ಅಂತಹ ಮಣ್ಣು ತನ್ನ ಸ್ಥಿತಿಯನ್ನು ಬದಲಾಯಿಸುವುದಿಲ್ಲ.

ರಸ ಗೊಬ್ಬರದ ಬಳಕೆಯಿಂದ ಮಣ್ಣು ಹಾಳಾಗುತ್ತದೆ, ಕೃಷಿ ಉತ್ಪನ್ನಗಳಿಗೆ ರುಚಿ ಇರುವುದಿಲ್ಲ, ರೋಗ ಬರುತ್ತದೆ ಎಂದೆಲ್ಲಾ ಮನಬಂದಂತೆ ಮಾತಾಡುತ್ತಾರೆ. ಆದರೆ ವಾಸ್ತವಿಕತೆ ಬೇರೆ. ಎಲ್ಲದಕ್ಕೂ ಮೂಲ ಕಾರಣ ಮಣ್ಣಿನ ಫಲವತ್ತತೆಯ ಕ್ಷೀಣತೆ. ಇದನ್ನು ಪುನರುಜ್ಜಿವನ ಮಾಡುತ್ತಾ ಫಲವತ್ತತೆಯನ್ನು ಸಂರಕ್ಷಿಸುತ್ತಾ ಬಂದರೆ ಎಲ್ಲವೂ ಸರಿಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!