ಸಂಪಿಗೆ ಹಣ್ಣು – ತಾತ್ಸಾರ ಬೇಡ ಇದು ಹೃದಯ ರಕ್ಷಕ
ಮಕ್ಕಳಾಟಿಕೆಯಲ್ಲಿ ಕಾಡು ಗುಡ್ಡಗಳಲ್ಲಿ ಹಿರಿಯರ ಜೊತೆಗೆ ಸುತ್ತಾಡಿ ತಿನ್ನುತ್ತಿದ್ದ ಹಣ್ಣು ಹಂಪಲುಗಳು ಎಷ್ಟೊಂದು ರುಚಿ. ಆ ಭಾಗ್ಯ ಹೊಸ ತಲೆಮಾರಿಗೆ ಇಲ್ಲ. ಮನೆ , ಪೇಟೆ, ಮಾಲುಗಳನ್ನು ಬಿಟ್ಟರೆ ಮತ್ತೇನೂ ಅರಿಯದ ಮುಗ್ಧ ಮಕ್ಕಳು ಮಕ್ಕಳಾಟಿಕೆಯೆ ಯಾವ ಸುಖವನ್ನೂ ಅನುಭವಿಸಿಲ್ಲ. ಈ ಚಟುವಟಿಕೆ ಅವರ ಆರೋಗ್ಯವನ್ನೂ ಉಳಿಸಿಲ್ಲ. ಮಕ್ಕಳ ಪ್ರೀತಿಯ ಹಣ್ಣುಗಳು: ನಾವು ಮಕ್ಕಳಾಟಿಕೆಯಲ್ಲಿ ಮಾಡಿದ ಕಾರುಬಾರುಗಳು ಅಷ್ಟಿಷ್ಟಲ್ಲ. ಶಾಲೆಗೆ ಹೋದರೂ ನಮಗೆ ಚಿಂತೆ ಬೇರೊಂದರ ಮೇಲೆ. ಶಾಲೆ ಹೋಗುವಾಗಲೂ , ಶಾಲೆ ಬಿಟ್ಟು ಬರುವಾಗಲೂ, ದಾರಿ…