ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಕಾರಣವಾಗುವ ಆಹಾರ ವಸ್ತುಗಳು..
ನಾವು ಮತ್ತು ಪಶುಗಳಿಗೆ ತಿನ್ನಿಸುವ ಆಹಾರದಲ್ಲಿ ಕೆಲವೊಮ್ಮೆ ಶಿಲೀಂದ್ರ ಬೆಳೆದಿರುತ್ತದೆ. ಇದು ಒಂದು ವಿಷ.ಇದನ್ನು ಅಪ್ಲೋಟಾಕ್ಸಿನ್ ಎನ್ನುತ್ತಾರೆ. ಅಫ್ಲಾಟಾಕ್ಸಿನ್ ಎಂಬುದು ಒಂದು ವಿಧದ ಶಿಲೀಂದ್ರ ಉತ್ಪತ್ತಿ ಮಾಡುವ ವಿಷಕಾರಿ ಅಂಶ. ನಾವು ಬಳಕೆ ಮಾಡುವ ಬೇರೆ ಬೇರೆ ವಸ್ತುಗಳ ಮೂಲಕ ಅದು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮಲ್ಲಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಈ ಶಿಲೀಂದ್ರದ ಹೆಸರು : Aspergillus flavus.ಮತ್ತು Aspergillus Parasiticus ಇದು ಬೀಜಾಣು ರೂಪದಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಶರೀರಕ್ಕೆ ಸೇರಿದಾಗ, ಅದರ ವಿಷ ಜೀವ ಕೋಶಗಳ…