ಕೃಷಿಯೊಂದಿಗೆ ಅರಣ್ಯ ಬೇಡ – ಸೊಪ್ಪು ಕಟ್ಟಿಗೆ ಮಾತ್ರ ಇರಲಿ..
ಮರಮಟ್ಟಿಗಾಗಿ (ನಾಟಾ) ಉದ್ದೇಶಕ್ಕಾಗಿ ಸಸಿ ನೆಟ್ಟು ಬೆಳೆಸುವುದೇ ಆಗಿದ್ದರೆ , ಅದು ಕೃಷಿಯ ಜೊತೆಗೆ ಇದ್ದರೆ ಆಗುವುದಿಲ್ಲ. ಮರಮಟ್ಟುಗಳನ್ನು ಪ್ರತ್ಯೇಕ ಜಾಗದಲ್ಲಿ ಬೆಳೆಸಿದರೆ ಮಾತ್ರ ಅದು ಲಾಭದಾಯಕ. ಸರಕಾರ ರೈತರಿಗೆ ಹುಡಿಗಾಸಿನ ಆಸೆ ತೋರಿಸು ಕೃಷಿ ಅರಣ್ಯವನ್ನು ಪ್ರೋತ್ಸಾಹಿಸುತ್ತಿದೆ. ಭಾರೀ ಪ್ರಚಾರವನ್ನೂ ಮಾಡುತ್ತಿವೆ. ಕೆಲವು ರೈತರು ಹಣದ ಆಸೆಗೆ ಒಂದಷ್ಟು ಮರಮಟ್ಟಿನ ಸಸ್ಯಗಳನ್ನು ಬದುಗಳಲ್ಲಿ, ಖಾಲಿ ಜಾಗದಲ್ಲಿ ಬೆಳೆಸುತ್ತಿದ್ದಾರೆ. ಕೃಷಿ ಹೊಲದಲ್ಲಿ ಮರಮಟ್ಟುಗಳು ಇದ್ದರೆ ಭವಿಷ್ಯದಲ್ಲಿ ಬಹಳ ಅನುಕೂಲ ಇರಬಹುದು. ಆದರೆ ವರ್ತಮಾನದಲ್ಲಿ ಅನನುಕೂಲತೆಯೇ ಹೆಚ್ಚು ಹೇಗೆ…