ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ ಸೂಕ್ತ?
ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಆಯಾಯಾ ಬೆಳವಣಿಗೆ ಹಂತದಲ್ಲಿ ನಿರ್ದಿಷ್ಟ ಪೋಷಕಗಳನ್ನು ಕೊಡುವುದರಿಂದ ಫಸಲು ಹೆಚ್ಚಾಗುತ್ತದೆ, ಫಸಲಿನ ಗುಣಮಟ್ಟವೂ ಸಹ ಉತ್ತಮವಾಗಿರುತ್ತದೆ. ಸಸ್ಯದ ಹಸುರು ಭಾಗದ ಬೆಳವಣಿಗೆಗೆ ಅನುಕೂಲವಾಗುವ ಪೋಷಕವನ್ನು ವರ್ಷದುದ್ದಕ್ಕೂ, ಹೂವು ಬರಲು ಸಹಾಯಕವಾಗಿವ ಗೊಬ್ಬರವನ್ನು ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿಯೂ, ಕಾಯಿ ಬೆಳವಣಿಗೆಗೆ ಸಹಾಯಕವಾಗುವ ಪೋಷಕವನ್ನು ವರ್ಷದುದ್ದಕ್ಕೂ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. ಅಡಿಕೆಯೊಂದೇ ಅಲ್ಲ ಎಲ್ಲಾ ಬೆಳೆಗಳಲ್ಲೂ ಅದರ ನಿರ್ದಿಷ್ಟ ಹಂತದ ಬೆಳವಣಿಗೆಗೆ ಅನುಕೂಲವಾಗುವಂತೆ ಪೊಷಕಗಳನ್ನು ಕೊಟ್ಟರೆ ಅದರ ಫಲವೇ ಭಿನ್ನವಾಗಿರುತ್ತದೆ. ಈ…