ಹಣ್ಣು ಹಂಪಲುಗಳನ್ನು ಹೀಗೆ ಪ್ಯಾಕಿಂಗ್ ಮಾಡಿ – ಹಾಳಾಗದು.
ಪಪ್ಪಾಯಿಯ ಬಲಿತ ಕಾಯಿಯನ್ನು ಕೊಯ್ದು ಕಾಗದ ಸುತ್ತಿ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಮಾವನ್ನು ಭತ್ತದ ಹುಲ್ಲಿನಲ್ಲಿ ಪ್ಯಾಕಿಂಗ್ ಮಾಡುತ್ತಾರೆ. ಕಾರಣ ಹಣ್ಣು ಹಂಪಲುಗಳು ಹಣ್ಣಾಗುವ ಸಮಯದಲ್ಲಿ ಏಕ ರೀತಿಯ ತಾಪಮಾನ ಇರಬೇಕು. ಅದು ತಂಪೂ ಆಗಬಾರದು. ಬಿಸಿಯೂ ಆಗಬಾರದು. ಹಣ್ಣು ಆಗುವ ತನಕ ಇದನ್ನು ಕಾಯ್ದುಕೊಂಡರೆ ಹಾಳಾಗದೇ ಹಣ್ಣಾಗುತ್ತದೆ. ಹಣ್ಣು ಹಂಪಲುಗಳಿಗೆ ಒಂದು ಸಣ್ಣ ನೊಣ ( ಕಣ್ಣಿನ ಸುತ್ತ ಹಾರುವಂತದ್ದು) ಕುಳಿತರೆ ಸಾಕು ಅದು ಬೇಗ ಹಾಳಾಗುತ್ತದೆ. ಅದನ್ನು ತಡೆಯಲು ಈ ರಕ್ಸಣೆ ಅಗತ್ಯ. …