ಬೆಳೆಗಾರರೇ – ಮೈಲುತುತ್ತೆ ಖರೀದಿಸುವಾಗ ಬುದ್ದಿವಂತರಾಗಿರಿ.
ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ. ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ…